ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ,ಭಾರತೀಯ ದೂರಸಂಪರ್ಕ ಸೇವೆಯ ಗ್ರೂಪ್ ‘ಎ’ಕೇಡರ್ ಪರಾಮರ್ಶೆಗೆ ತನ್ನ ಅನುಮೋದನೆ ನೀಡಿದೆ.
ಈ ಪ್ರಸ್ತಾಪವು ಈ ಕೆಳಕಂಡ ಮುಖ್ಯಾಂಶಗಳನ್ನು ಒಳಗೊಂಡಿದೆ:
(a) ಟೆಲಿಕಾಂ ಮಹಾ ನಿರ್ದೇಶಕರ ಒಂದು ಉನ್ನತ ದರ್ಜೆಯ ಹುದ್ದೆಯ ಸೃಷ್ಟಿ.
(b) ಕರ್ತವ್ಯದ ಹುದ್ದೆಗಳ ಸಂಖ್ಯೆ 853ಕ್ಕೆ ನಿಗದಿ.
(c) ಎರವಲು ಸೇವೆಯ ಮೀಸಲು 310 ಹುದ್ದೆಗಳಾಗಿದ್ದು, ಐಟಿಎಸ್ ಅಧಿಕಾರಿಗಳನ್ನು ಇತರ ಸಂಸ್ಥೆ/ಇಲಾಖೆಗಳಎರವಲು ಸೇವೆಗೆ ನಿಯೋಜನೆಗೆ ಅವಕಾಶ.
(d) ಬಿಎಸ್.ಎನ್.ಎಲ್/ಎಂಟಿಎನ್ಎಲ್ ನಲ್ಲಿರುವ ಐ.ಟಿ.ಎಸ್. ಅಧಿಕಾರಿಗಳಿಗೆ ವಿಶೇಷ ಇಳಿಕೆಯ (diminishing) ಮೀಸಲನ್ನು ಒದಗಿಸುವುದು.
(e) ಕೇಡರ್ ಬಲವನ್ನು ಪ್ರಸ್ತುತ ಕಾರ್ಯಬಲದ 1690ಕ್ಕೆ ಸೀಮಿತಗೊಳಿಸಲಾಗಿದೆ.
ಕಾರ್ಯನಿರ್ವಹಣೆಯ ಅಗತ್ಯಗಳ ಆಧಾರದಲ್ಲಿ ಕ್ಷೇತ್ರ ಘಟಕಗಳಲ್ಲಿ ಮತ್ತು ಡಿಓಟಿ ಕೇಂದ್ರ ಕಚೇರಿಗಳೆರಡರಲ್ಲೂ ಕೇಡರ್ ಸ್ವರೂಪ ಬಲಪಡಿಸಲು ಈ ಅನುಮೋದನೆಯು ನೆರವಾಗಲಿದೆ. ಅಲ್ಲದೆ ಬಿಎಸ್ಎನ್ಎಲ್/ಎಂ.ಟಿಎನ್ಎಲ್ ನ ಕುಶಲ ಮಾನವ ಶಕ್ತಿಯ ಅಗತ್ಯಗಳನ್ನೂ ಇದು ಪೂರೈಸಲಿದೆ.
ಅಲ್ಲದೆ ಇದು ಐಟಿಎಸ್ ಅಧಿಕಾರಿಗಳ ಹಾಲಿ ನಿಶ್ಚಲತೆಯನ್ನು ತಪ್ಪಿಸುತ್ತದೆ.
ಹಿನ್ನೆಲೆ:
ದೂರಸಂಪರ್ಕ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಸರ್ಕಾರದ ನೀತಿ, ತಾಂತ್ರಿಕ ಮತ್ತು ವ್ಯವಸ್ಥಾಪಕ ಕಾರ್ಯನಿರ್ವಹಣೆಗಾಗಿ ಭಾರತೀಯ ಟೆಲಿಕಾಂ ಸೇವೆ ಗ್ರೂಪ್ ಎ ಯನ್ನು 1965ರಲ್ಲಿ ಸ್ಥಾಪಿಸಲಾಯಿತು. ಕೇಂದ್ರ ಲೋಕಸೇವಾ ಆಯೋಗ ನಡೆಸುವ ಎಂಜಿನಿಯರಿಂಗ್ ಸೇವಾ ಪರೀಕ್ಷೆಯ ಮೂಲಕ ಆಯ್ಕೆ ಮಾಡಲಾಗುತ್ತದ್ಜು. ಐಟಿಎಸ್ ಅಧಿಕಾರಿಗಳು, ದೂರಸಂಪರ್ಕ ಇಲಾಖೆ (ಡಿಓಟಿ) ಮತ್ತು ಅದರ ಪಿಎಸ್ ಯುಗಳಾದ (ಬಿಎಸ್ಎನ್ಎಲ್ ಮತ್ತು ಟಿಸಿಐಎಲ್), ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್), ದೂರಸಂಪರ್ಕ ವ್ಯಾಜ್ಯಗಳ ಇತ್ಯರ್ಥ ಆಡಳಿತಾತ್ಮಕ ನ್ಯಾಯಾಧಿಕರಣ (ಟಿಡಿಎಸ್ಎಟಿ) ಮತ್ತು ಇತರ ಕೇಂದ್ರ ಸಚಿವಾಲಯ/ಇಲಾಖೆಗಳು/ಸ್ವಾಯತ್ತ ಕಾಯಗಳು ಮತ್ತು ರಾಜ್ಯ ಸರ್ಕಾರಗಳಲ್ಲಿ ಎರವಲು ಸೇವೆಯ ನಿಯೋಜನೆಯಲ್ಲಿ ಆಡಳಿತ ಮತ್ತು ವ್ಯವಸ್ಥಾಪಕ ಸ್ಥಾನಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಐಟೆಎಸ್ ಅಧಿಕಾರಿಗಳ ಕೇಡರ್ ಪರಾಮರ್ಶೆಯನ್ನು 28 ವರ್ಷಗಳ ಬಳಿಕ ಮಾಡಲಾಗುತ್ತಿದೆ – 1988ರಲ್ಲಿ ಈ ಹಿಂದೆ ಕೇಡರ್ ಪರಾಮರ್ಶೆ ಮಾಡಲಾಗಿತ್ತು. ಹಿಂದಿನ ಕೇಡರ್ ರಿವ್ಯೂ ಕಾಲದಿಂದ, ದೂರಸಂಪರ್ಕ ಸೇವೆಗಳ ಕಾರ್ಯಗಳು ಡಿಓಟಿಯಿಂದ ತಿರುವು ಪಡೆದಿವೆ, ಆದರೆ ದೂರಸಂಪರ್ಕ ಪರವಾನಗಿ, ನಿಗಾ, ಪರವಾನಗಿ ಷರತ್ತುಗಳ ಅನುಷ್ಠಾನ, ನೆಟ್ ವರ್ಕ್ ಸುರಕ್ಷತೆ, ವಹಿವಾಟನ್ನು ಗುಣಮಟ್ಟ, ಕಾನೂನುಬದ್ಧ ಪ್ರತಿಬಂಧ ಮತ್ತು ಜಾಗತಿಕ ಸೇವಾ ಹೊಣೆಗಾರಿಕೆ ಇತ್ಯಾದಿ ಹೊಸ ದೂರಸಂಪರ್ಕಕ್ಕೆ ಸಂಬಂಧಿಸಿದ ಹೊಸ ಕಾರ್ಯಗಳು ಸೇರ್ಪಡೆಯಾಗಿವೆ. ಇದರ ಜೊತೆಗೆ ಕಾರ್ಯಾಚರಣೆಯಲ್ಲಿ ಸೇರಿದ ತರ ಕಾರ್ಯಗಳೂ ಬಂದಿವೆ, ಇವುಗಳು ಗಾತ್ರದಲ್ಲಿ ಮತ್ತು ಪ್ರಾಮುಖ್ಯತೆಯಲ್ಲಿಯೂ ಗಣನೀಯವಾಗಿ ಏರಿಕೆ ಆಗಿವೆ. ಡಿಜಿಟಲ್ ಸಮಾಜಕ್ಕೆ ದೂರಸಂಪರ್ಕ ಮೂಲ ಸೌಕರ್ಯ ಬೆನ್ನೆಲುಬಿನಂತಾಗಿದೆ. ವಲಯದಲ್ಲಿ ಹಲವು ಬದಲಾವಣೆಗಳು ಆಗುತ್ತಿವೆ – ನಿಯಂತ್ರಣದ ಸಂಕೀರ್ಣ ವಿಚಾರಗಳು, ಜಾರಿ ಮತ್ತು ಸುರಕ್ಷತೆಗೆ ದೂರಸಂಪರ್ಕ ಇಲಾಖೆಯಲ್ಲಿ ಉನ್ನತ ಮಟ್ಟದ ತಾಂತ್ರಿಕ ಮೇಲುಸ್ತುವಾರಿ ಅಗತ್ಯವಾಗಿದೆ. ಹೀಗಾಗಿ ಐಟಿಎಸ್ ಅಧಿಕಾರಿಗಳ ಕೇಡರ್ ಪರಾಮರ್ಶೆಯ ಪ್ರಸ್ತಾಪ ಮಾಡಲಾಗಿದೆ, ಇದು ದೂರಸಂಪರ್ಕ ಇಲಾಖೆಯ ಪಾತ್ರ ಮತ್ತು ಜವಾಬ್ದಾರಿಯನ್ನು ನಿರ್ವಹಿಸುವಲ್ಲಿ ಅಗತ್ಯವೆಂದು ಪರಿಗಣಿಸಲಾಗಿದೆ. ಇದರ ಜೊತೆಗೆ ಬಿಎಸ್ಎನ್ಎಲ್ ಮತ್ತು ಎಂಟಿಎನ್ಎಲ್ ನ ಪುನಶ್ಚೇತನದಲ್ಲಿ ಐಟಿಎಸ್ ಅಧಿಕಾರಿಗಳ ಪಾತ್ರವನ್ನೂ ಗಮನದಲ್ಲಿಟ್ಟುಕೊಳ್ಳಲಾಗಿದೆ.
ಈ ಎಲ್ಲ ಅಂಶಗಳಿಂದಾಗಿ ವಿವಿಧ ಗ್ರೇಡ್ ಗಳ ಸೇವೆಗಳು ನಿಶ್ಚಲವಾಗಿದ್ದು, ಐಟಿಎಸ್ ಸ್ವರೂಪದ ಪರಾಮರ್ಶೆ ಅಗತ್ಯವಾಗಿತ್ತು.
ಈ ಕೇಡರ್ ಬಲವನ್ನು ಹಾಲಿ ಕಾರ್ಯ ಬಲದ ಕೇಡರ್ ಗೆ ಸೀಮಿತಗೊಳಿಸಲಾಗಿದೆ, ಮತ್ತು ಈ ಕೇಡರ್ ಪರಾಮರ್ಶೆಯಿಂದ ಸರ್ಕಾರಕ್ಕೆ ಯಾವುದೇ ಹೊಸ ಆರ್ಥಿಕ ಬದ್ಧತೆ ಇರುವುದಿಲ್ಲ.
AD/SH