Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ʼಸಂವಿಧಾನ ಹತ್ಯಾ ದಿವಸʼವು ಭಾರತದ ಸಂವಿಧಾನವನ್ನು ಯಾವಾಗ ದಮನಿಸಲಾಯಿತು ಎನ್ನುವುದನ್ನು ನೆನಪಿಸುತ್ತದೆ: ಪ್ರಧಾನಮಂತ್ರಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಜೂನ್ 25 ಅನ್ನು ʼಸಂವಿಧಾನ್ ಹತ್ಯಾ ದಿವಸ್ʼ ಎಂದು ಘೋಷಿಸುವುದು ಭಾರತದ ಸಂವಿಧಾನವನ್ನು ದಮನಿಸಿದ ಕಾಲವನ್ನು ನೆನಪಿಸುತ್ತದೆ ಎಂದು ಹೇಳಿದ್ದಾರೆ.

ಕೇಂದ್ರ ಗೃಹ ಸಚಿವರಾದ ಶ್ರೀ ಅಮಿತ್ ಶಾ ಅವರು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ  ಬರೆದಿರುವುದನ್ನು ಪ್ರಧಾನಮಂತ್ರಿಯವರು ಮರುಹಂಚಿಕೊಂಡು ಈ ರೀತಿ ಬರೆದಿದ್ದಾರೆ:

“ಜೂನ್ 25 ಅನ್ನು ಸಂವಿಧಾನ್ ಹತ್ಯಾ ದಿವಸ್ ಎಂದು ಆಚರಿಸುವುದು ಭಾರತದ ಸಂವಿಧಾನವನ್ನು ದಮನ ಮಾಡಿದಾಗ ಏನಾಯಿತು ಎನ್ನುವುದನ್ನು ನೆನಪಿಸುತ್ತದೆ. ಕಾಂಗ್ರೆಸ್ ತುರ್ತುಪರಿಸ್ಥಿತಿಯ  ಹೇರಿದ ಕಾರಣದಿಂದ ಉಂಟಾದ ಭಾರತೀಯ ಇತಿಹಾಸದ ಕರಾಳ ಘಟ್ಟದಿಂದಾಗಿ ನೊಂದ ಪ್ರತಿಯೊಬ್ಬ ವ್ಯಕ್ತಿಗೂ ಶ್ರದ್ಧಾಂಜಲಿ ಸಲ್ಲಿಸುವ ದಿನವೂ ಆಗಿದೆ.”

 

 

*****