Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಸಾಮಾಜಿಕ ಮಾಧ್ಯಮ ಖಾತೆಗಳಿಂದ ‘ಮೋದಿ ಕಾ ಪರಿವಾರ್’ ಗುರುತನ್ನು ತೆಗೆದುಹಾಕುವಂತೆ ಪ್ರಧಾನಮಂತ್ರಿ ಮನವಿ


ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ “ಮೋದಿ ಕಾ ಪರಿವಾರ್” ಎಂಬ ಗುರುತಿನ ಬರಹವನ್ನು ತೆಗೆದುಹಾಕುವಂತೆ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿ ಅವರು ತಮ್ಮ ಬೆಂಬಲಿಗರನ್ನು ವಿನಂತಿಸಿಕೊಂಡಿದ್ದಾರೆ.

ದೇಶದ ಜನತೆಯ ನಿರಂತರ ಬೆಂಬಲಕ್ಕೆ ಕೃತಜ್ಞತೆಯನ್ನು ಹೇಳಿರುವ ಅವರು,  ಚುನಾವಣಾ ಪ್ರಚಾರದ ಸಮಯದಲ್ಲಿ, ಅನೇಕರು ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ನನ್ನ ಮೇಲಿನ ಪ್ರೀತಿಯ ಸೂಚಕವಾಗಿ “ಮೋದಿ ಕಾ ಪರಿವಾರ್” ಎಂದು ಸೇರಿಸಿಕೊಂಡಿದ್ದರು. ಈಗ ಚುನಾವಣೆ ಮುಗಿದಿದ್ದು ಅದನ್ನು ತೆಗೆದುಹಾಕಿ, ಈಗ ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ನನ್ನ ಹೆಸರಿನ ಪ್ರದರ್ಶನ ಹೋಗಬಹುದು, ಆದರೆ ಭಾರತದ ಪ್ರಗತಿಗಾಗಿ ಒಂದು ಪರಿವಾರವಾಗಿ ಒಗ್ಗಟ್ಟಿನಿಂದ ಶ್ರಮಿಸುವ ನಮ್ಮ ಬಾಂಧವ್ಯವು ದೃಢವಾಗಿ, ಸಡಿಲವಾಗದೆ ಹಾಗೆಯೇ ಉಳಿಯುತ್ತದೆ ಎಂದಿದ್ದಾರೆ. 

ಈ ಬಗ್ಗೆ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿ ಅವರು

“ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಭಾರತದಾದ್ಯಂತ ಜನರು ನನ್ನ ಮೇಲಿನ ಪ್ರೀತಿಯ ಸಂಕೇತವಾಗಿ ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ‘ಮೋದಿ ಕಾ ಪರಿವಾರ್’ ನ್ನು ಸೇರಿಸಿಕೊಂಡಿದ್ದರು. ಇದರಿಂದ ನನಗೆ ಅಪಾರ ಶಕ್ತಿ ಮತ್ತು ಉತ್ತೇಜನ ಸಿಕ್ಕಿತು. ಭಾರತದ ಜನರು ಸತತ ಮೂರನೇ ಬಾರಿಗೆ ಎನ್‌ಡಿಎಗೆ ಬಹುಮತವನ್ನು ನೀಡಿದ್ದಾರೆ, ಇದು ಒಂದು ರೀತಿಯ ದಾಖಲೆ ಮತ್ತು ನಮ್ಮ ರಾಷ್ಟ್ರದ ಸುಧಾರಣೆಗಾಗಿ ಕೆಲಸ ಮಾಡಲು ನಮಗೆ ಜನಾದೇಶ ನೀಡಿದ್ದಾರೆ.

ನಾವೆಲ್ಲರೂ ಒಂದೇ ಕುಟುಂಬ ಎಂಬ ಸಂದೇಶವನ್ನು ಪರಿಣಾಮಕಾರಿಯಾಗಿ ರವಾನಿಸುವುದರೊಂದಿಗೆ, ನಾನು ಮತ್ತೊಮ್ಮೆ ಭಾರತದ ಜನರಿಗೆ ಧನ್ಯವಾದ ಹೇಳುತ್ತೇನೆ. ನಿಮ್ಮ ಸೋಷಿಯಲ್ ಮೀಡಿಯಾ ಖಾತೆಗಳಿಂದ ‘ಮೋದಿ ಕಾ ಪರಿವಾರ್’ ಗುರುತು ಬರಹವನ್ನು ತೆಗೆದುಹಾಕುವಂತೆ ನಿಮ್ಮಲ್ಲಿ ಮನವಿ ಮಾಡಿಕೊಳ್ಳುತ್ತೇನೆ. ಈ ಪ್ರದರ್ಶನದ ಹೆಸರು ಬದಲಾಗಬಹುದು, ಆದರೆ ಭಾರತದ ಪ್ರಗತಿಗಾಗಿ ಶ್ರಮಿಸುತ್ತಿರುವ ಒಂದು ಪರಿವಾರ, ಕುಟುಂಬವಾಗಿ ನಮ್ಮ ಬಾಂಧವ್ಯವು ಬಲವಾಗಿ, ಮುರಿಯದೆ ಹಾಗೆಯೇ ಮುಂದುವರಿಯುತ್ತದೆ.” ಎಂದು ಪ್ರಧಾನ ಮಂತ್ರಿಗಳು ಬರೆದುಕೊಂಡಿದ್ದಾರೆ.
 

 

*****