ಆಸ್ಟ್ರೇಲಿಯಾದ ಗೌರವಾನ್ವಿತ ಪ್ರಧಾನಿ ಅಲ್ಬನೇಸ್ ಅವರಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಭಿನಂದನಾ ದೂರವಾಣಿ ಕರೆ ಸ್ವೀಕರಿಸಿದರು. ಪ್ರಧಾನಿ ಅಲ್ವನೇಸ್ ಅವರ ಶುಭ ಹಾರೈಕೆಗಳಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಧನ್ಯವಾದ ತಿಳಿಸಿದರು.
2023 ರಲ್ಲಿ ಆಸ್ಟ್ರೇಲಿಯಾಗೆ ಭೇಟಿ ನೀಡಿದ್ದು ಮತ್ತು ಕಳೆದ ಡಿಸೆಂಬರ್ ನಲ್ಲಿ ದೆಹಲಿಯಲ್ಲಿ ಜಿ20 ಶೃಂಗ ಸಭೆ ಸಂದರ್ಭದಲ್ಲಿ ಭೇಟಿ ಮಾಡಿದ ಘಟನೆಗಳನ್ನು ಪ್ರಧಾನಮಂತ್ರಿಯವರು ಆತ್ಮೀಯವಾಗಿ ಸ್ಮರಿಸಿಕೊಂಡರು.
ಆಸ್ಟ್ರೇಲಿಯಾ ಪ್ರಧಾನಿಯವರೊಂದಿಗೆ ಸಮಗ್ರ ದ್ವಿಪಕ್ಷೀಯ ಸಹಭಾಗಿತ್ವವನ್ನು ಮತ್ತಷ್ಟು ಬಲಪಡಿಸಲು ಮತ್ತು ಭಾರತ ಫೆಸಿಫಿಕ್ ವಲಯದಲ್ಲಿ ಪರಸ್ಪರ ಹಂಚಿಕೆಯ ಆದ್ಯತಾ ವಲಯಗಳಲ್ಲಿ ಕಾರ್ಯನಿರ್ವಹಿಸುವುದಾಗಿ ಪ್ರಧಾನಮಂತ್ರಿಯವರು ತಮ್ಮ ಬದ್ಧತೆಯನ್ನು ಪುನರುಚ್ಚರಿಸಿದ್ದಾರೆ.
*****