ಭಾರತ ಸರ್ಕಾರದ ಆರ್ಥಿಕ ನೆರವಿನೊಂದಿಗೆ ಭೂತಾನಿನ ಥಿಂಪುವಿನಲ್ಲಿ ನಿರ್ಮಿಸಲಾದ ಅತ್ಯಾಧುನಿಕ ಗ್ಯಾಲ್ಟ್‌ಸುಯೆನ್ ಜೆಟ್ಸನ್ ಪೆಮಾ ವಾಂಗ್‌ಚುಕ್ ತಾಯಿ ಮತ್ತು ಮಕ್ಕಳ ಆಸ್ಪತ್ರೆಯನ್ನು ಗೌರವಾನ್ವಿತ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಮತ್ತು ಭೂತಾನ್ ಪ್ರಧಾನಿ ಗೌರವಾನ್ವಿತ ಶೆರಿಂಗ್ ಟೋಬ್‌ಗೆ ಅವರು ಉದ್ಘಾಟಿಸಿದರು.
150 ಹಾಸಿಗೆಗಳ ಗ್ಯಾಲ್ಟ್‌ಸುಯೆನ್ ಜೆಟ್ಸನ್ ಪೆಮಾ ವಾಂಗ್‌ಚುಕ್ ತಾಯಿ ಮತ್ತು ಮಕ್ಕಳ ಆಸ್ಪತ್ರೆ ನಿರ್ಮಾಣಕ್ಕೆ ಭಾರತ ಸರ್ಕಾರವು 2 ಹಂತಗಳಲ್ಲಿ ಆರ್ಥಿಕ ಬೆಂಬಲ ನೀಡಿದೆ. ಆಸ್ಪತ್ರೆಯ ಮೊದಲ ಹಂತದ ನಿರ್ಮಾಣಕ್ಕೆ ಭಾರತ ಸರ್ಕಾರವು 22 ಕೋಟಿ ರೂ. ನೀಡಿದ್ದು, ನಿರ್ಮಾಣ ಕಾರ್ಯ 2019ರಲ್ಲಿ ಆರಂಭವಾಗಿತ್ತು. 12ನೇ ಪಂಚವಾರ್ಷಿಕ ಯೋಜನೆಯ ಭಾಗವಾಗಿ 2ನೇ ಹಂತದ ಆಸ್ಪತ್ರೆ ಕಟ್ಟಡ ನಿರ್ಮಾಣ ಕಾರ್ಯವನ್ನು 2019 ರಲ್ಲೇ 119 ಕೋಟಿ ರೂ. ವೆಚ್ಚದಲ್ಲಿ ಕೈಗೆತ್ತಿಕೊಂಡಿದ್ದು, ಅದೀಗ ಪೂರ್ಣಗೊಂಡಿದೆ.
ಹೊಸದಾಗಿ ನಿರ್ಮಿಸಲಾದ ಈ ಆಸ್ಪತ್ರೆಯು ಭೂತಾನ್‌ನಲ್ಲಿ ತಾಯಿ ಮತ್ತು ಮಗುವಿಗೆ ಗುಣಮಟ್ಟದ ಆರೋಗ್ಯ ಸೇವೆ ಒದಗಿಸಲಿದೆ. ಈ ಹೊಸ ಸೌಲಭ್ಯವು ಪೀಡಿಯಾಟ್ರಿಕ್ಸ್, ಸ್ತ್ರೀರೋಗ ಶಾಸ್ತ್ರ ಮತ್ತು ಪ್ರಸೂತಿ, ಅರಿವಳಿಕೆ, ಶಸ್ತ್ರಚಿಕಿತ್ಸಾ ಘಟಕ, ನವಜಾತ ಶಿಶುಗಳ ತೀವ್ರ ನಿಗಾ ಮತ್ತು ಮಕ್ಕಳ ತೀವ್ರ ನಿಗಾ ಸೇರಿದಂತೆ ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿರುತ್ತದೆ.
ಗ್ಯಾಲ್ಟ್‌ಸುಯೆನ್ ಜೆಟ್ಸನ್ ಪೆಮಾ ವಾಂಗ್‌ಚುಕ್ ತಾಯಿ ಮತ್ತು ಮಕ್ಕಳ ಆಸ್ಪತ್ರೆಯು ಆರೋಗ್ಯ ಆರೈಕೆ ಕ್ಷೇತ್ರದಲ್ಲಿ ಭಾರತ-ಭೂತಾನ್ ನಡುವೆ ಇರುವ ನಿಕಟ ಸಹಭಾಗಿತ್ವಕ್ಕೆ ಉಜ್ವಲ ಉದಾಹರಣೆಯಾಗಿದೆ.
*****