Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

2024 ರ ಮಧ್ಯಂತರ ಬಜೆಟ್‌ ಕುರಿತು ಪ್ರಧಾನಮಂತ್ರಿಯವರ ಇಂಗ್ಲೀಷ್‌ ಭಾಷಣದ ಅನುವಾದ 

2024 ರ ಮಧ್ಯಂತರ ಬಜೆಟ್‌ ಕುರಿತು ಪ್ರಧಾನಮಂತ್ರಿಯವರ ಇಂಗ್ಲೀಷ್‌ ಭಾಷಣದ ಅನುವಾದ 


ನನ್ನ ಪ್ರೀತಿಯ ದೇಶವಾಸಿಗಳೇ

ಇಂದು ಎಲ್ಲರನ್ನೊಳಗೊಂಡ ಮತ್ತು ನಾವೀನ್ಯತೆಯ ಮಧ್ಯಂತರ ಬಜೆಟ್‌ ಮಂಡಿಸಲಾಗಿದೆ. “ಬಜೆಟ್‌ ವಿಶ್ವಾಸವನ್ನು ನಿರಂತರವಾಗಿ ಮುಂದುವರೆಸಲಿದೆ”. “ಈ ಬಜೆಟ್‌ ಅಭಿವೃದ್ಧಿ ಹೊಂದಿದ ಭಾರತದ ಎಲ್ಲಾ ಆಧಾರ ಸ್ತಂಭಗಳನ್ನು ಸಬಲೀಕರಣಗೊಳಿಸಲಿದೆ – ಯುವ ಜನಾಂಗ, ಬಡವರು, ಮಹಿಳೆಯರು ಮತ್ತು ರೈತರನ್ನು ಸಬಲೀಕರಣಗೊಳಿಸಲಿದೆ. ನಿರ್ಮಲಾ ಜೀ ಅವರ ಬಜೆಟ್‌ ಭವಿಷ್ಯದ ದೇಶವನ್ನು ನಿರ್ಮಿಸಲಿದೆ. ಬರುವ 2047 ರ ವೇಳೆಗೆ ವಿಕಸಿತ ಭಾರತ ನಿರ್ಮಾಣಕ್ಕೆ  ಬಜೆಟ್‌ ನ ಖಾತರಿಗಳು ಭಾರತದ ಆಧಾರ ಸ್ತಂಭವನ್ನು ಬಲಗೊಳಿಸಲಿದೆ. ಈ ಕಾರಣಕ್ಕಾಗಿ ನಿರ್ಮಲಾ ಜೀ ಮತ್ತು ಅವರ ತಂಡವನ್ನು ನಾನು ಹೃದಯದುಂಬಿ ಅಭಿನಂದಿಸುತ್ತೇನೆ.   

ಸ್ನೇಹಿತರೇ, 

“ಬಜೆಟ್‌ ಯುವ ಭಾರತದ ಆಕಾಂಕ್ಷೆಗಳ ಪ್ರತಿಫಲನವಾಗಿದೆ”. ಬಜೆಟ್‌ ನಲ್ಲಿ ಎರಡು ಪ್ರಮುಖ ನಿರ್ಣಯಗಳನ್ನು ಪ್ರಕಟಿಸಿದ್ದು, ಸಂಶೋಧನೆ ಮತ್ತು ನಾವೀನ್ಯತೆಗಾಗಿ ಒಂದು ಲಕ್ಷ ಕೋಟಿ ರೂಪಾಯಿ ನಿಧಿಯನ್ನು ಘೋಷಿಸಲಾಗಿದೆ. ನವೋದ್ಯಮಗಳಿಗೆ ತೆರಿಗೆ ವಿನಾಯಿತಿಯನ್ನು ಮುಂದುವರೆಸಲಾಗಿದೆ. 

ಸ್ನೇಹಿತರೇ

ವಿತ್ತೀಯ ಕೊರತೆ ನಿಯಂತ್ರಣದಲ್ಲಿರುವುದನ್ನು ಗಮನದಲ್ಲಿರಿಸಿಕೊಂಡು ಬಂಡವಾಳ ವೆಚ್ಚವನ್ನು ಐತಿಹಾಸಿಕವಾಗಿ 11,11,111 ಕೋಟಿ ರೂಪಾಯಿಗೆ ಏರಿಕೆ ಮಾಡಲಾಗಿದೆ. ಅರ್ಥಶಾಸ್ತ್ರಜ್ಞರ ಭಾಷೆಯಲ್ಲಿ ಹೇಳುವುದಾರೆ ಇದು ಒಂದು ರೀತಿಯಲ್ಲಿ ಸಿಹಿ ತಾಣವಾಗಿದೆ. ನಾವು 21 ನೇ ಶತಮಾನದ ಆಧುನಿಕ ಭಾರತದ ಮೂಲ ಸೌಕರ್ಯವನ್ನಷ್ಟೇ ನಿರ್ಮಿಸುವುದಿಲ್ಲ, ಬದಲಿಗೆ ಲಕ್ಷಾಂತರ ಯುವ ಜನರಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸಲಿದ್ದೇವೆ. ಈ ಬಜೆಟ್‌ ನಲ್ಲಿ ʼವಂದೇ ಭಾರತ್‌ ಗುಣಮಟ್ಟದʼ 40,000 ಅತ್ಯಾಧುನಿಕ ಬೋಗಿಗಳನ್ನು ಉತ್ಪಾದಿಸಿ ರೈಲುಗಳಿಗೆ ಇವುಗಳನ್ನು ಅಳವಡಿಸಲಾಗುವುದು ಮತ್ತು ಇವು ಸಾಮಾನ್ಯ ದರ್ಜೆಯ ಪ್ರಯಾಣಿಕರ ರೈಲುಗಳಲ್ಲಿ ಅಡಕಗೊಳಿಸಲಾಗುವುದು. ಇದರಿಂದ ದೇಶದ ವಿವಿಧ ರೈಲ್ವೆ ಮಾರ್ಗಗಳಲ್ಲಿ ಪ್ರಯಾಣಿಕರ ಪ್ರಯಾಣ ಸುಲಭ ದರದಲ್ಲಿ ಸಾಧ್ಯವಾಗಲಿದೆ ಮತ್ತು ಆರಾಮದಾಯವಾಗಲಿದೆ. 

ಸ್ನೇಹಿತರೇ 

ನಾವು ದೊಡ್ಡ ಗುರಿ ನಿಗದಿ ಮಾಡಿದೆವು, ನಾವು ಇದನ್ನು ಸಾಧಿಸಿದೆವು ಮತ್ತು ನಂತರ ನಮಗಾಗಿ ಮತ್ತಷ್ಟು ದೊಡ್ಡ ಗುರಿ ನಿಗದಿ ಮಾಡಿದ್ದೇವೆ. ಗ್ರಾಮಗಳು ಮತ್ತು ನಗರಗಳಲ್ಲಿ 4 ಕೋಟಿ ಮನೆಗಳನ್ನು ನಿರ್ಮಿಸಿದ್ದೇವೆ ಮತ್ತು ಇನ್ನೂ ಎರಡು ಕೋಟಿ ಹೆಚ್ಚಿನ ಮನೆಗಳನ್ನು ನಿರ್ಮಿಸುವ ಗುರಿ ಹೊಂದಿದ್ದೇವೆ. 2 ಕೋಟಿ ಮಹಿಳೆಯರನ್ನು ಲಕ್ಷಾಧಿಪತಿಗಳನ್ನಾಗಿ ಮಾಡುವುದು ನಮ್ಮ ಗುರಿ. ಇದನ್ನು 3 ಕೋಟಿ ಲಕ್ಷಾಧಿಪತಿಗಳನ್ನಾಗಿ ಮಾಡುವ ಗುರಿಗೆ ವಿಸ್ತರಣೆ ಮಾಡಿಕೊಂಡಿದ್ದೇವೆ. ಇದರಿಂದ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆರಿಗೆ ಲಾಭವಾಗಲಿದೆ. 

ಸ್ನೇಹಿತರೇ 

ಈ ಬಜೆಟ್‌ ಬಡವರು ಮತ್ತು ಮಧ್ಯಮವರ್ಗದವರನ್ನು ಸಬಲೀಕರಣಗೊಳಿಸಲು ಹೊಸ ಅವಕಾಶಗಳನ್ನು ಕಲ್ಪಿಸಿದ್ದು, ಅವರಿಗೆ ಹೊಸ ಆದಾಯದ ಸದಾವಕಾಶಗಳನ್ನು ಸೃಜಿಸುತ್ತಿದ್ದೇವೆ. ಮೇಲ್ಛಾವಣಿ ಸೌರ ಅಭಿಯಾನದಡಿ ಒಂದು ಕೋಟಿ ಜನರಿಗೆ ಮೇಲ್ಛಾವಣಿಯಲ್ಲಿ ಸೌರ ಫಲಕಗಳನ್ನು ಅಳವಡಿಸುವ ಮೂಲಕ ಉಚಿತ ವಿದ್ಯುತ್‌ ದೊರೆಯುವಂತೆ ಮಾಡುವುದು ನಮ್ಮ ಗುರಿ.  ಇದರ ಜೊತೆಗೆ ಪ್ರತಿವರ್ಷ 15,000 ರಿಂದ 18,000 ಕೋಟಿ ರೂಪಾಯಿ ಮೊತ್ತದ ಹೆಚ್ಚುವರಿ ವಿದ್ಯುತ್‌ ಅನ್ನು ಸರ್ಕಾರಕ್ಕೆ ಮಾರಾಟ ಮಾಡಲು ನೆರವಾಗಲಿದೆ. ಈ ಆದಾಯ ಪ್ರತಿಯೊಂದು ಕುಟುಂಬಕ್ಕೂ ದೊರೆಯಲಿದೆ. 

ಸ್ನೇಹಿತರೇ 

ಮಧ್ಯಮ ವರ್ಗಕ್ಕೆ ಸೇರಿದವರಿಗೆ ಆದಾಯ ತೆರಿಗೆ ವಿನಾಯಿತಿ ಯೋಜನೆ ಘೋಷಿಸಿರುವುದರಿಂದ ಒಂದು ಕೋಟಿ ಮಧ್ಯಮವರ್ಗದ ನಾಗರಿಕರಿಗೆ ವೈಯಕ್ತಿಕವಾಗಿ ಪರಿಹಾರ ದೊರಕಲಿದೆ. ಹಿಂದಿನ ಸರ್ಕಾರಗಳು ಜನ ಸಾಮಾನ್ಯರ ತಲೆಯ ಮೇಲೆ ದಶಕಗಳ ಕಾಲ ಭಾರವಾದ ಕತ್ತಿ ನೇತಾಡುವಂತೆ ಮಾಡಿದ್ದವು. ಇಂದು ಈ ಬಜೆಟ್‌ ನಲ್ಲಿ ರೈತರಿಗಾಗಿ ನಿರ್ಣಾಯಕ ಮತ್ತು ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ. ಅದು ನ್ಯಾನೋ ಡಿಎಪಿ ಬಳಕೆಯೇ ಇರಬಹುದು, ಪ್ರಾಣಿಗಳಿಗಾಗಿ ಹೊಸ ಯೋಜನೆ, ಪ್ರಧಾನಮಂತ್ರಿ ಮತ್ಸ್ಯಸಂಪದ ಯೋಜನೆ ವಿಸ್ತರಣೆ ಅಥವಾ ಸ್ವಾವಲಂಬಿ ತೈಲ ಬೀಜ ಅಭಿಯಾನದಿಂದ ರೈತರ ವೆಚ್ಚ ತಗ್ಗಲಿದೆ ಮತ್ತು ಆದಾಯ ಹೆಚ್ಚಲಿದೆ. ಐತಿಹಾಸಿಕ ಬಜೆಟ್‌ ಸಂದರ್ಭದಲ್ಲಿ ಎಲ್ಲಾ ನಾಗರಿಕರಿಗೆ ಶುಭ ಹಾರೈಕೆಗಳು. ತುಂಬಾ ಧನ್ಯವಾದಗಳು. 

***