Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

​​​​​​​ಪರೀಕ್ಷಾ ಪೇ ಚರ್ಚಾವನ್ನು ಕುತೂಹಲದಿಂದ ಎದುರು ನೋಡುತ್ತಿದ್ದೇನೆ: ಪ್ರಧಾನಮಂತ್ರಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ‘ಪರೀಕ್ಷಾ ಪೇ ಚರ್ಚಾ’ ಸಭೆಯನ್ನು ಕುತೂಹಲದಿಂದ ಎದುರು ನೋಡುತ್ತಿರುವುದಾಗಿ ಹೇಳಿದರು.

ಪರೀಕ್ಷೆಗಳ ವಿನೋದ ಮತ್ತು ಒತ್ತಡ-ಮುಕ್ತಗೊಳಿಸುವ ಬಗ್ಗೆ ಹಿಂದಿನ PPC ಕಾರ್ಯಕ್ರಮಗಳಿಂದ ವಿಷಯಗಳು ಮತ್ತು ಪ್ರಾಯೋಗಿಕ ಸಲಹೆಗಳನ್ನು ಪ್ರಧಾನಮಂತ್ರಿ ಹಂಚಿಕೊಂಡಿದ್ದಾರೆ.

ಸಾಮಾಜಿಕ ಜಾಲತಾಣ X ನಲ್ಲಿ ಪ್ರಧಾನ ಮಂತ್ರಿ ಸಂದೇಶ ನೀಡಿದ್ದಾರೆ. 

“ಪರೀಕ್ಷಾ ಒತ್ತಡವನ್ನು ಸೋಲಿಸುವ ಮಾರ್ಗಗಳ ಕುರಿತು ಸಾಮೂಹಿಕವಾಗಿ ಕಾರ್ಯತಂತ್ರ ರೂಪಿಸಲು ಪರೀಕ್ಷಾ ಯೋಧರ ಅತ್ಯಂತ ಸ್ಮರಣೀಯ ಕೂಟವಾದ ‘ಪರೀಕ್ಷಾ ಪೇ ಚರ್ಚಾ’ವನ್ನು ನಾನು ಕುತೂಹಲದಿಂದ ಎದುರು ನೋಡುತ್ತಿದ್ದೇನೆ.

ಪರೀಕ್ಷೆಗಳು ನಮ್ಮ ಭವಿಷ್ಯದ ಅವಕಾಶಗಳನ್ನು ತೆರೆಯುವ ಬಾಗಿಲುಗಳಾಗಲಿ ಎಂದು ಪ್ರಧಾನಮಂತ್ರಿ ಸಂದೇಶ ನೀಡಿದ್ದಾರೆ.

***