Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

​​​​​​​ವೇಮನ ಜಯಂತಿ ಹಿನ್ನೆಲೆಯಲ್ಲಿ  ಮಹಾಯೋಗಿ ವೇಮನರಿಗೆ ನಮನ ಸಲ್ಲಿಸಿದ  ಪ್ರಧಾನಮಂತ್ರಿಗಳು


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ವೇಮನ ಜಯಂತಿಯ ಸಂದರ್ಭದಲ್ಲಿ ಮಹಾಯೋಗಿ ವೇಮನರಿಗೆ ನಮನ ಸಲ್ಲಿಸಿದರು. 

ಈ ಸಂಬಂಧ ‘ಎಕ್ಸ್’ ಸಾಮಾಜಿಕ ಜಾಲತಾಣದಲ್ಲಿ ಸಂದೇಶ ಹಂಚಿಕೊಂಡಿರುವ ಪ್ರಧಾನ ಮಂತ್ರಿಗಳು, “ಇಂದು ವೇಮನ ಜಯಂತಿಯಂದು, ನಾವು ಮಹಾಯೋಗಿ ವೇಮನರ ಕಾಲಾತೀತ ಬುದ್ಧಿವಂತಿಕೆಯನ್ನು ಸ್ಮರಿಸುತ್ತೇವೆ. ಅವರ ಪದ್ಯಗಳು ಮತ್ತು ಗಹನವಾದ ಬೋಧನೆಗಳು ಸತ್ಯ, ಸರಳತೆ ಮತ್ತು ಆಂತರಿಕ ಶಾಂತಿಯ ಜೀವನದ ಕಡೆಗೆ ನಮ್ಮನ್ನು ಮಾರ್ಗದರ್ಶನ‌ ಮಾಡುವ ಜತೆಗೆ ಪ್ರೇರೇಪಣೆ ನೀಡುತ್ತವೆ. ಅವರ ಒಳನೋಟವುಳ್ಳ ಕಾರ್ಯಗಳು ಪ್ರಪಂಚದಾದ್ಯಂತ ಪ್ರತಿಧ್ವನಿಸುತ್ತವೆ ಮತ್ತು ಅವರ ಬೋಧನೆಗಳು ಉತ್ತಮ ಗ್ರಹದ ಅನ್ವೇಷಣೆಯಲ್ಲಿ ನಮ್ಮ ಮಾರ್ಗವನ್ನು ಬೆಳಗಿಸುತ್ತವೆ,” ಎಂದು  ಬಣ್ಣಿಸಿದ್ದಾರೆ.

***