ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ವಿಕಸಿತ ಭಾರತ ಸಂಕಲ್ಪ ಯಾತ್ರೆಯ ಫಲಾನುಭವಿಗಳೊಂದಿಗೆ ಸಂವಾದ ನಡೆಸಿದರು. ದೇಶಾದ್ಯಂತ ನಾನಾ ಮೂಲೆಗಳ ಸಾವಿರಾರು ವಿಕಸಿತ ಭಾರತ ಸಂಕಲ್ಪ ಯಾತ್ರಯ ಫಲಾನುಭವಿಗಳು ಸಂವಾದಲ್ಲಿ ಪಾಲ್ಗೊಂಡಿದ್ದರು. ಈ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವರುಗಳು, ಸಂಸದರು, ಶಾಸಕರು ಮತ್ತು ಸ್ಥಳೀಯ ಮಟ್ಟದ ಜನಪ್ರತಿನಿಧಿಗಳೂ ಸಹ ಭಾಗವಹಿಸಿದ್ದರು.
ಪ್ರಧಾನ ಮಂತ್ರಿ ಅವರು ಮೊದಲಿಗೆ ಪಶುಸಂಗೋಪನೆ ಮತ್ತು ತೋಟಗಾರಿಕೆಯಲ್ಲಿ ತೊಡಗಿಸಿಕೊಂಡಿರುವ ತೆಲಂಗಾಣದ ಕರೀಂನಗರದ ರೈತ ಶ್ರೀ ಎಂ.ಮಲ್ಲಿಕಾರ್ಜುನ ರೆಡ್ಡಿ ಅವರೊಂದಿಗೆ ಸಂವಾದ ನಡೆಸಿದರು. ಬಿ ಟೆಕ್ ಪದವೀಧರಾದ ಶ್ರೀ ರೆಡ್ಡಿ, ಸಾಫ್ಟ್ವೇರ್ ಕಂಪನಿಯ ಮಾಜಿ ಉದ್ಯೋಗಿ. ತನ್ನ ಪಯಣವನ್ನು ವಿವರಿಸಿದ ಶ್ರೀ ರೆಡ್ಡಿ, ಶಿಕ್ಷಣವು ಉತ್ತಮ ರೈತನಾಗಲು ಸಹಾಯ ಮಾಡಿತು ಎಂದು ಹೇಳಿದರು. ಸಮಗ್ರ ಕೃಷಿ ಪದ್ಧತಿಯನ್ನು ಪಾಲಿಸುತ್ತಿರುವ ಅವರು ಪಶುಪಾಲನೆ, ತೋಟಗಾರಿಕೆ ಮತ್ತು ನೈಸರ್ಗಿಕ ಕೃಷಿಯಲ್ಲಿ ತೊಡಗಿದ್ದಾರೆ. ಅವರ ಈ ವಿಧಾನದ ಮುಖ್ಯ ಪ್ರಯೋಜನವೆಂದರೆ ಅವರಿಗೆ ನಿಯಮಿತವಾಗಿ ಪ್ರತಿದಿನ ಆದಾಯ ದೊರಕುತ್ತಿರುವುದು. ಔಷಧೀಯ ಕೃಷಿಯಲ್ಲೂ ತೊಡಗಿಸಿಕೊಂಡಿರುವ ಇವರು ಐದು ಮೂಲಗಳಿಂದ ಆದಾಯ ಪಡೆಯುತ್ತಿದ್ದಾರೆ. ಸಾಂಪ್ರದಾಯಿಕ ಮೊನೊ ವಿಧಾನದಲ್ಲಿ ಅವರು 6 ಲಕ್ಷ ಗಳಿಸುತ್ತಿದ್ದರೆ, ಇದೀಗ ಅವರು ಸಮಗ್ರ ಕೃಷಿ ಪದ್ಧತಿಗಳಿಂದಾಗಿ ವಾರ್ಷಿಕ 12 ಲಕ್ಷ ರೂಪಾಯಿಗಳನ್ನು ಗಳಿಸುತ್ತಿದ್ದಾರೆ, ಅವರ ಹಿಂದಿನ ಆದಾಯಕ್ಕೆ ಹೋಲಿಸಿದರೆ ಇದು ದುಪ್ಪಟ್ಟು ಆದಾಯವಾಗಿದೆ.
ಐಸಿಎಆರ್ ಸೇರಿದಂತೆ ಹಲವು ಸಂಸ್ಥೆಗಳು ಮತ್ತು ಮಾಜಿ ಉಪರಾಷ್ಟ್ರಪತಿ ಶ್ರೀ ವೆಂಕಯ್ಯ ನಾಯ್ಡು ಅವರಿಂದ ಶ್ರೀ ರೆಡ್ಡಿಗೆ ಪ್ರಶಸ್ತಿ ಪಡೆದಿದ್ದಾರೆ. ಅವರು ಸಮಗ್ರ ಮತ್ತು ನೈಸರ್ಗಿಕ ಕೃಷಿಯ ಪ್ರಚುರ ಪಡಿಸುತ್ತಿದ್ದಾರೆ ಮತ್ತು ಸಮೀಪದ ಪ್ರದೇಶಗಳಲ್ಲಿ ತೆರಳಿ ರೈತರಿಗೆ ತರಬೇತಿ ನೀಡುತ್ತಿದ್ದಾರೆ. ಅವರು ಕಿಸಾನ್ ಕ್ರೆಡಿಟ್ ಕಾರ್ಡ್ಗಳು, ಮಣ್ಣಿನ ಆರೋಗ್ಯ ಕಾರ್ಡ್, ಹನಿ ನೀರಾವರಿ ಸಬ್ಸಿಡಿ ಮತ್ತು ಫಸಲ್ ಬಿಮಾದ ಪ್ರಯೋಜನಗಳನ್ನು ಪಡೆದಿದ್ದಾರೆ. ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರವು ಬಡ್ಡಿ ಸಬ್ಸಿಡಿಯನ್ನು ನೀಡುವುದರಿಂದ ಕೆಸಿಸಿಯಲ್ಲಿ ಪಡೆದ ಸಾಲದ ಮೇಲಿನ ಬಡ್ಡಿ ದರವನ್ನು ಪರಿಶೀಲಿಸುವಂತೆ ಅವರು ಪ್ರಧಾನಮಂತ್ರಿ ಅವರನ್ನು ಕೋರಿದರು.
ವಿದ್ಯಾರ್ಥಿಗಳನ್ನು ಭೇಟಿ ಮಾಡಿ ಮತ್ತು ವಿದ್ಯಾವಂತ ಯುವಕರನ್ನು ಕೃಷಿ ವಲಯವನ್ನು ಪ್ರವೇಶಿಸುವಂತೆ ಪ್ರೋತ್ಸಾಹಿಸಲು ಪ್ರಧಾನಿ ಅವರನ್ನು ಕೇಳಿಕೊಂಡರು. ಪ್ರಧಾನಿ ಅವರು ರೆಡ್ಡಿ ಅವರ ಇಬ್ಬರು ಪುತ್ರಿಯರೊಂದಿಗೆ ಸಂವಾದ ನಡೆಸಿದರು. ವಿದ್ಯಾವಂತ ಯುವಕರು ವ್ಯವಸಾಯ ಕೈಗೆತ್ತಿಕೊಳ್ಳುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದ ಪ್ರಧಾನಮಂತ್ರಿ ಅವರು, “ನೀವು ಕೃಷಿಯಲ್ಲಿನ ಸಾಧ್ಯತೆಗಳಿಗೆ ಬಲಿಷ್ಠ ಉದಾಹರಣೆಯಾಗಿದ್ದೀರಿ” ಎಂದು ಹೇಳಿದರು. ಅವರ ಸಮಗ್ರ ಕೃಷಿ ವಿಧಾನವನ್ನು ಶ್ಲಾಘಿಸಿದ ಪ್ರಧಾನಿ, ಅವರ ಕೆಲಸವು ಇತರ ರೈತರಿಗೆ ಸ್ಫೂರ್ತಿ ನೀಡುತ್ತದೆ ಎಂದು ಹೇಳಿದರು. ಪ್ರಧಾನಿ ಅವರು, ಶ್ರೀ ರೆಡ್ಡಿ ಅವರ ಪತ್ನಿಯ ತ್ಯಾಗ ಮತ್ತು ಉದ್ಯಮಶೀಲ ಗುಣಕ್ಕೆ ಬೆಂಬಲ ನೀಡಿದ್ದಕ್ಕಾಗಿ ಅವರನ್ನು ಶ್ಲಾಘಿಸಿದರು.
******