Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ನಿಮ್ಮ ಕಾರ್ಯಗಳಿಂದ ಕಿನ್ನರರು ಏನು ಮಾಡಬಹುದು ಎಂಬುದನ್ನು ತೋರಿಸಿದ್ದೀರಿ, ಇದು ಶ್ರೇಷ್ಠ ಸೇವೆ- ಮುಂಬೈನ ತೃತೀಯಲಿಂಗಿ ಕಲ್ಪನಾಗೆ ಪ್ರಧಾನಿ ಹೇಳಿದ ಮಾತು 


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ವಿಕಸಿತ ಭಾರತ ಸಂಕಲ್ಪ ಯಾತ್ರೆಯ ಫಲಾನುಭವಿಗಳೊಂದಿಗೆ ಸಂವಾದ ನಡೆಸಿದರು. ದೇಶಾದ್ಯಂತ ನಾನಾ ಮೂಲೆಗಳ ಸಾವಿರಾರು ವಿಕಸಿತ ಭಾರತ ಸಂಕಲ್ಪ ಯಾತ್ರಯ ಫಲಾನುಭವಿಗಳು ಸಂವಾದಲ್ಲಿ ಪಾಲ್ಗೊಂಡಿದ್ದರು. ಈ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವರುಗಳು, ಸಂಸದರು, ಶಾಸಕರು ಮತ್ತು ಸ್ಥಳೀಯ ಮಟ್ಟದ ಜನಪ್ರತಿನಿಧಿಗಳೂ ಸಹ ಭಾಗವಹಿಸಿದ್ದರು. 

ಪ್ರಧಾನಮಂತ್ರಿ ಅವರು ಸಾಯಿ ಕಿನ್ನರ್ ಬಚತ್ ಸ್ವಸಹಾಯ ಸಂಘವನ್ನು ನಡೆಸುತ್ತಿರುವ ಮುಂಬೈನ ತೃತೀಯಲಿಂಗಿ ಕಲ್ಪನಾ ಬಾಯಿ ಅವರೊಂದಿಗೆ ಸಂವಾದ ನಡೆಸಿದರು. ತೃತೀಯ ಲಿಂಗಿಗಳಿಗಾಗಿ ಮಹಾರಾಷ್ಟ್ರದಲ್ಲಿ ಇರುವಂತಹ ಮೊದಲ ಗುಂಪು ಇದಾಗಿದೆ. ಸವಾಲಿನ ಜೀವನ ಕಥೆಯನ್ನು ನಿರೂಪಿಸಿದ ಕಲ್ಪನಾ ಜೀ ಅವರು ಪ್ರಧಾನ ಮಂತ್ರಿಯವರ ಸೂಕ್ಷ್ಮ ಸಂವೇದನೆಗೆ ಧನ್ಯವಾದ ಸಲ್ಲಿಸಿದರು. ಕಲ್ಪನಾ ಜಿ ಅವರು ತೃತೀಯಲಿಂಗಿಯಾಗಿ ಅನುಭವಿಸುತ್ತಿರುವ ಕಠಿಣ ಜೀವನವನ್ನು ಸ್ಮರಿಸಿಕೊಂಡರು ಮತ್ತು ಭಿಕ್ಷಾಟನೆ ಮತ್ತು ಅನಿಶ್ಚಿತತೆಯ ಜೀವನದ ನಂತರ ಬಚತ್ ಗಟ್ ಅನ್ನು ಆರಂಭಿಸಿದ್ದಾಗಿ ಪ್ರಧಾನಿಗೆ ತಿಳಿಸಿದರು.

ಕಲ್ಪನಾ ಜಿ ಅವರು ಸರ್ಕಾರದ ಅನುದಾನದ ಸಹಾಯದಿಂದ ಬುಟ್ಟಿ ತಯಾರಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಆಕೆಗೆ ನಗರ ಜೀವನೋಪಾಯ ಮಿಷನ್ ಮತ್ತು ಸ್ವನಿಧಿ ಯೋಜನೆ ನೆರವು ನೀಡಿದೆ. ಇಡ್ಲಿ ದೋಸೆ ಮತ್ತು ಹೂವಿನ ವ್ಯಾಪಾರವನ್ನೂ ನಡೆಸುತ್ತಿದ್ದಾರೆ. ಮುಂಬೈನಲ್ಲಿ ಪಾವ್-ಭಾಜಿ ಮತ್ತು ವಡಾ ಪಾವ್ ವ್ಯಾಪಾರದ ಸಂಭವನೀಯತೆ ಬಗ್ಗೆ ಪ್ರಧಾನಿ ಸೂಕ್ಷ್ಮ ಮನಸ್ಸಿನಿಂದ ಕೇಳಿದಾಗ ಎಲ್ಲರಿಗೂ ಹೃದಯ ಹಗುರವಾಯಿತು. ಆಕೆಯ ಉದ್ಯಮಶೀಲತೆಯು ತೃತೀಯಲಿಂಗಿಗಳ ನೈಜತೆಯ ಬಗ್ಗೆ ಜನರಿಗೆ ಶಿಕ್ಷಣ ನೀಡುತ್ತಿದೆ ಮತ್ತು ಸಮಾಜದಲ್ಲಿ ಕಿನ್ನರರ ತಪ್ಪು ಚಿತ್ರಣವನ್ನು ಸರಿಪಡಿಸುತ್ತಿದೆ ಎಂದು ಪ್ರಧಾನ ಮಂತ್ರಿ ಅವರು ಸಮಾಜಕ್ಕೆ ಅವರ ಸೇವೆಯ ತೀವ್ರತೆಯನ್ನು ವಿವರಿಸಿದರು. ಪ್ರಧಾನಿ, “ಕಿನ್ನರರು ಏನು ಮಾಡಬಲ್ಲರೋ ಅದನ್ನು ಮಾಡುವ ಮೂಲಕ ನೀವು ಏನು ಎಂಬುದನ್ನು ತೋರಿಸುತ್ತಿದ್ದೀರಿ” ಎಂದು  ಹೇಳಿ ಕಲ್ಪನಾ ಜೀ ಅವರನ್ನು ಶ್ಲಾಘಿಸಿದರು.

ಅವರ ಗುಂಪು ತೃತೀಯಲಿಂಗಿಗಳ ಗುರುತಿನ ಚೀಟಿಗಳನ್ನು ಒದಗಿಸುತ್ತಿದೆ ಮತ್ತು ಕೆಲವು ವ್ಯವಹಾರಗಳನ್ನು ಆರಂಭಿಸಲು ಮತ್ತು ಭಿಕ್ಷಾಟನೆಯನ್ನು ತ್ಯಜಿಸಲು ಪಿಎಂ ಸ್ವನಿಧಿಯಂತಹ ಯೋಜನೆಗಳ ಲಾಭವನ್ನು ಪಡೆಯಲು ಕಿನ್ನರ್ ಸಮುದಾಯವನ್ನು ಪ್ರೋತ್ಸಾಹಿಸುತ್ತಿದೆ. ಕಿನ್ನರ ಸಮುದಾಯ ‘ಮೋದಿ ಕಿ ಗ್ಯಾರಂಟಿ ಕಿ ಗಾಡಿ’ಯ ಕುರಿತು ತೋರುತ್ತಿರುವ ಉತ್ಸಾಹದ ಕುರಿತು ಮೆಚ್ಚುಗೆ ಸೂಚಿಸಿದರು ಮತ್ತು ವಾಹನವು ಅವರ ಪ್ರದೇಶಕ್ಕೆ ಭೇಟಿ ನೀಡಿದಾಗ ಅವರು ಮತ್ತು ಅವರ ಸ್ನೇಹಿತರು ಅನೇಕ ಪ್ರಯೋಜನಗಳನ್ನು ಪಡೆದರು ಎಂದು ಹೇಳಿದರು. ಕಲ್ಪನಾ ಜಿ ಅವರ ಅದಮ್ಯ ಸ್ಪೂರ್ತಿಗೆ ಪ್ರಧಾನಿ ನರೇಂದ್ರ ಮೋದಿ ವಂದನೆ ಸಲ್ಲಿಸಿದರು ಮತ್ತು ತುಂಬಾ ಸವಾಲಿನ ಜೀವನ ಎದುರಿಸುತ್ತಿದ್ದರೂ ಉದ್ಯೋಗ ಒದಗಿಸುವವರಾಗಿದ್ದಾರೆ ಎಂದು ಶ್ಲಾಘಿಸಿದರು. “ವಂಚಿತರಿಗೆ ಆದ್ಯತೆ ನೀಡುವುದು ನಮ್ಮ ಗುರಿಯಾಗಿದೆ” ಎಂದು ಪ್ರಧಾನಮಂತ್ರಿ ಹೇಳಿದರು.

*****