Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

​​​​​​​ಕೃಷ್ಣಾ- ಗೋದಾವರಿ ಜಲಾನಯನ ಪ್ರದೇಶದಿಂದ ಆಳ ನೀರಿನಲ್ಲಿ ತೈಲ ಉತ್ಪಾದನೆ ಶುಭಾರಂಭಕ್ಕೆ ಪ್ರಧಾನ ಮಂತ್ರಿಗಳ ಶ್ಲಾಘನೆ


ಕೃಷ್ಣಾ- ಗೋದಾವರಿ ಜಲಾನಯನ ಪ್ರದೇಶದಲ್ಲಿ  ಸಂಕೀರ್ಣ ಮತ್ತು ಕ್ಲಿಷ್ಟಕರವಾದ ಆಳವಾದ ನೀರಿನಲ್ಲಿ ಮೊದಲ ತೈಲ ಉತ್ಪಾದನಾ ಕಾರ್ಯ (ಕೆಜಿ-ಡಿಡಬ್ಲ್ಯೂಎನ್-98/2 ಬ್ಲಾಕ್, ಬಂಗಾಳ ಕೊಲ್ಲಿಯ ಕರಾವಳಿಯಲ್ಲಿದೆ) ಶುಭಾರಂಭಕ್ಕೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಎಂದು ಶ್ಲಾಘಿಸಿದ್ದಾರೆ.

ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲಗಳ ಕೇಂದ್ರ ಸಚಿವ ಶ್ರೀ ಹರ್ದೀಪ್ ಸಿಂಗ್ ಪುರಿ ಅವರು “ಎಕ್ಸ್” ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಸಂದೇಶಕ್ಕೆ ಪ್ರತಿಕ್ರಿಯಿಸಿರುವ  ಪ್ರಧಾನಮಂತ್ರಿಗಳು,

“ಇದು ಭಾರತದ ಇಂಧನ ಶಕ್ತಿ ವಲಯದಲ್ಲಿನ ಪ್ರಯಾಣದಲ್ಲಿ ಗಮನಾರ್ಹ ಹೆಜ್ಜೆಯಾಗಿದೆ. ಹಾಗೆಯೇ ಆತ್ಮನಿರ್ಭರ ಭಾರತಕ್ಕಾಗಿ ಮಿಷನ್ ಗೆ ಹೆಚ್ಚಿನ ಉತ್ತೇಜನ ನೀಡುತ್ತದೆ. ಇದು ನಮ್ಮ ಆರ್ಥಿಕತೆಗೆ ಹಲವಾರು ಪ್ರಯೋಜನಗಳನ್ನು ನೀಡಲಿದೆ,” ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

***********