ಹಿರಿಯ ಅಧಿಕಾರಿಗಳೇ ಮತ್ತು ನನ್ನ ಕುಟುಂಬ ಸದಸ್ಯರೇ!
ಶುಭಾಶಯಗಳು!
ಲಕ್ಷದ್ವೀಪವು ಅಪಾರ ಸಾಮರ್ಥ್ಯವನ್ನು ಹೊಂದಿದೆ, ಆದಾಗ್ಯೂ ಸ್ವಾತಂತ್ರ್ಯದ ನಂತರದಲ್ಲಿ ಬಹಳ ಕಾಲದವರೆಗೆ, ಅಂದರೆ ಗಮನಾರ್ಹ ಅವಧಿಯವರೆಗೆ, ಈ ಪ್ರದೇಶದ ಮೂಲಸೌಕರ್ಯಕ್ಕೆ ಸೀಮಿತ ಗಮನವನ್ನು ನೀಡಲಾಯಿತು. ಹಡಗು ಇಲ್ಲಿ ನಿರ್ಣಾಯಕ ಜೀವನಾಡಿಯಾಗಿದ್ದರೂ, ಬಂದರು ಮೂಲಸೌಕರ್ಯವು ಅಭಿವೃದ್ಧಿ ಹೊಂದಿರಲಿಲ್ಲ. ಶಿಕ್ಷಣ ಮತ್ತು ಆರೋಗ್ಯದಿಂದ ಹಿಡಿದು ಪೆಟ್ರೋಲ್ ಮತ್ತು ಡೀಸೆಲ್ ಲಭ್ಯತೆಯವರೆಗೆ ವಿವಿಧ ಕ್ಷೇತ್ರಗಳಲ್ಲಿ ಸವಾಲುಗಳು ಸ್ಪಷ್ಟವಾದ ಸಾಕ್ಷ್ಯವನ್ನು ನುಡಿಯುತ್ತಿದ್ದವು. ನಮ್ಮ ಸರ್ಕಾರವು ಈಗ ಈ ಸಮಸ್ಯೆಗಳನ್ನು ಸಕ್ರಿಯವಾಗಿ ಪರಿಹರಿಸುತ್ತಿದೆ, ಇದು ಗಮನಾರ್ಹ ಬದಲಾವಣೆಯನ್ನು ಸೂಚಿಸುತ್ತಿದೆ. ಲಕ್ಷದ್ವೀಪದ ಮೊದಲ ಪಿಒಎಲ್ ಬೃಹತ್ ಶೇಖರಣಾ ಸೌಲಭ್ಯವನ್ನು ಕವರತ್ತಿ ಮತ್ತು ಮಿನಿಕೋಯ್ ದ್ವೀಪಗಳಲ್ಲಿ ಸ್ಥಾಪಿಸಲಾಗಿದೆ. ಪರಿಣಾಮವಾಗಿ, ಅನೇಕ ಕ್ಷೇತ್ರಗಳಲ್ಲಿ ಹೊಸ ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತಿವೆ.
ಪ್ರೀತಿಯ ಕುಟುಂಬ ಸದಸ್ಯರೇ,
ಕಳೆದ ದಶಕದಲ್ಲಿ, ಅಗತ್ತಿಯಲ್ಲಿ ಹಲವಾರು ಅಭಿವೃದ್ಧಿ ಯೋಜನೆಗಳನ್ನು ಯಶಸ್ವಿಯಾಗಿ ಕಾರ್ಯಗತಗೊಳಿಸಲಾಗಿದೆ. ವಿಶೇಷವಾಗಿ ನಮ್ಮ ಮೌಲ್ಯಯುತ ಮೀನುಗಾರರಿಗೆ ಆಧುನಿಕ ಸೌಲಭ್ಯಗಳನ್ನು ಸ್ಥಾಪಿಸಲಾಗಿದೆ, ಅಗತ್ತಿ ಈಗ ವಿಮಾನ ನಿಲ್ದಾಣ ಮತ್ತು ಮಂಜುಗಡ್ಡೆ (ಐಸ್) ಸ್ಥಾವರವನ್ನು ಹೊಂದಿದೆ, ಇದು ಸಮುದ್ರಾಹಾರ ರಫ್ತು ಮತ್ತು ಸಮುದ್ರಾಹಾರ ಸಂಸ್ಕರಣಾ ಕ್ಷೇತ್ರಗಳಲ್ಲಿ ಸಾಧ್ಯತೆಗಳನ್ನು ಗಮನಾರ್ಹವಾಗಿ ಹೆಚ್ಚಿಸುತ್ತಿದೆ. ಇದು ಈ ಪ್ರದೇಶದಿಂದ ಟ್ಯೂನಾ ಮೀನುಗಳ ರಫ್ತಿಗೆ ಕಾರಣವಾಗಿದೆ, ಮತ್ತು ಲಕ್ಷದ್ವೀಪದ ಮೀನುಗಾರರಿಗೆ ಹೆಚ್ಚಿನ ಆದಾಯ ಲಭಿಸುವುದಕ್ಕೆ ಕೊಡುಗೆ ನೀಡಿದೆ.
ಪ್ರೀತಿಯ ಕುಟುಂಬ ಸದಸ್ಯರೇ,
ಈ ಪ್ರದೇಶದ ವಿದ್ಯುತ್ ಮತ್ತು ಇಂಧನ ಅಗತ್ಯಗಳನ್ನು ಪೂರೈಸಲು, ದೊಡ್ಡ ಸೌರ ಸ್ಥಾವರ ಮತ್ತು ವಾಯುಯಾನ ಇಂಧನ ಡಿಪೋವನ್ನು ನಿರ್ಮಿಸಲಾಗಿದೆ, ಇದು ನಿಮ್ಮೆಲ್ಲರಿಗೂ ಗಣನೀಯ ಪ್ರಯೋಜನಗಳನ್ನು ಒದಗಿಸುತ್ತದೆ. ಅಗತ್ತಿ ದ್ವೀಪದ ಎಲ್ಲಾ ಮನೆಗಳಿಗೆ ಈಗ ನಲ್ಲಿ ನೀರಿನ ಲಭ್ಯತೆ ಇದೆ ಎಂದು ತಿಳಿದು ಸಂತೋಷವಾಗಿದೆ. ದೀನದಲಿತರಿಗೆ, ಅವಕಾಶ ವಂಚಿತರಿಗೆ ವಸತಿ, ನೈರ್ಮಲ್ಯ, ವಿದ್ಯುತ್, ಅನಿಲ ಮತ್ತು ಇತರ ಅಗತ್ಯ ಸೌಲಭ್ಯಗಳು ಲಭ್ಯವಾಗುವುದನ್ನು ಖಚಿತಪಡಿಸಿಕೊಳ್ಳಲು ಸರ್ಕಾರ ಬದ್ಧವಾಗಿದೆ. ಅಗತ್ತಿ ಸೇರಿದಂತೆ ಲಕ್ಷದ್ವೀಪದ ಸಮಗ್ರ ಅಭಿವೃದ್ಧಿಗೆ ಭಾರತ ಸರ್ಕಾರ ಹೃತ್ಪೂರ್ವಕವಾಗಿ ಕಟಿಬದ್ಧವಾಗಿದೆ. ನಾಳೆ, ಕವರತ್ತಿಯಲ್ಲಿ, ನಾನು ಲಕ್ಷದ್ವೀಪದ ಜನರಿಗೆ ಹಲವಾರು ಅಭಿವೃದ್ಧಿ ಯೋಜನೆಗಳನ್ನು ಸಮರ್ಪಿಸಲಿದ್ದೇನೆ. ಈ ಯೋಜನೆಗಳು ಲಕ್ಷದ್ವೀಪದಲ್ಲಿ ಅಂತರ್ಜಾಲ ಲಭ್ಯತೆಯನ್ನು (ಇಂಟರ್ನೆಟ್ ಪ್ರವೇಶವನ್ನು) ಹೆಚ್ಚಿಸುತ್ತವೆ ಮತ್ತು ಸ್ಥಳೀಯ ಪ್ರವಾಸೋದ್ಯಮ ಕ್ಷೇತ್ರಕ್ಕೆ ಬಲ ತುಂಬುತ್ತವೆ. ನಾನು ಈ ರಾತ್ರಿಯನ್ನು ಲಕ್ಷದ್ವೀಪದಲ್ಲಿ ಕಳೆಯಲಿದ್ದೇನೆ ಮತ್ತು ನಾಳೆ ಬೆಳಿಗ್ಗೆ ಲಕ್ಷದ್ವೀಪದ ಜನರನ್ನು ಭೇಟಿ ಮಾಡುವುದನ್ನು ಹಾಗು ಸಂವಾದ ನಡೆಸುವ ಅವಕಾಶವನ್ನು ಎದುರು ನೋಡುತ್ತಿದ್ದೇನೆ. ನಿಮ್ಮ ಆತ್ಮೀಯ ಸ್ವಾಗತಕ್ಕಾಗಿ ಮತ್ತು ಇಷ್ಟು ದೊಡ್ಡ ಸಂಖ್ಯೆಯಲ್ಲಿ ಸೇರಿದ್ದಕ್ಕಾಗಿ ಪ್ರಾಮಾಣಿಕವಾಗಿ ಧನ್ಯವಾದಗಳನ್ನು ಸಲ್ಲಿಸುತ್ತೇನೆ.
ಘೋಷಣೆ : ಇದು ಪ್ರಧಾನಿಯವರ ಭಾಷಣದ ಸರಿಸುಮಾರಾದ ಭಾಷಾಂತರ. ಮೂಲ ಭಾಷಣವನ್ನು ಹಿಂದಿಯಲ್ಲಿ ಮಾಡಲಾಗಿದೆ.
****
Elated to be in Lakshadweep. Speaking at launch of development initiatives in Agatti. https://t.co/3g6Olud7iC
— Narendra Modi (@narendramodi) January 2, 2024
Furthering development of Lakshadweep. pic.twitter.com/1ewwVAwWjr
— PMO India (@PMOIndia) January 2, 2024
The Government of India is committed for the development of Lakshadweep. pic.twitter.com/OigU87M2Tn
— PMO India (@PMOIndia) January 2, 2024