Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ನಮೋ ಆ್ಯಪ್ ನಲ್ಲಿ ವಿಕ್ಷಿತ ಭಾರತ ಬಾಸಿಡರ್ ಮಾಡ್ಯೂಲ್ ನಲ್ಲಿ ಪರಿಣಾಮಕಾರಿ ಕಾರ್ಯಗಳನ್ನು ನಿರ್ವಹಿಸುವ 100 ದಿನಗಳ ಸವಾಲನ್ನು ಸ್ವೀಕರಿಸುವಂತೆ ನಾಗರಿಕರಿಗೆ ಪ್ರಧಾನಿ ಮನವಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ನಮೋ ಆ್ಯಪ್ ನಲ್ಲಿ ವಿಕ್ಷಿತ ಭಾರತ ಅಂಬಾಸಿಡರ್ ಮಾಡ್ಯೂಲ್ ನಲ್ಲಿ ಪರಿಣಾಮಕಾರಿ ಕಾರ್ಯಗಳನ್ನು ನಿರ್ವಹಿಸುವ 100 ದಿನಗಳ ಸವಾಲನ್ನು ಸ್ವೀಕರಿಸುವಂತೆ ನಾಗರಿಕರನ್ನು ಕೋರಿದ್ದಾರೆ. ವಿಕ್ಷಿತ್ ಭಾರತ್ ರಾಯಭಾರಿಯಾಗಿರುವುದು ಸಾಮರ್ಥ್ಯಗಳನ್ನು ಸಂಯೋಜಿಸಲು, ಅಭಿವೃದ್ಧಿ ಕಾರ್ಯಸೂಚಿಯನ್ನು ಹರಡಲು ಮತ್ತು ಅಭಿವೃದ್ಧಿ ಹೊಂದಿದ ಭಾರತದ ನಮ್ಮ ಧ್ಯೇಯವನ್ನು ಪೂರೈಸಲು ನಮ್ಮ ಶಕ್ತಿಯನ್ನು ಬಳಸಿಕೊಳ್ಳಲು ಸೂಕ್ತ ಮಾರ್ಗವಾಗಿದೆ ಎಂದು ಶ್ರೀ ನರೇಂದ್ರ ಮೋದಿ ಹೇಳಿದರು.

ಈ ಸಂಬಂಧ ಪ್ರಧಾನಮಂತ್ರಿ ಅವರು ಎಕ್ಸ್ ಖಾತೆಯಲ್ಲಿ  ಹಂಚಿಕೊಂಡಿದ್ದಾರೆ:

140 ಕೋಟಿ ಭಾರತೀಯರು ಜನಶಕ್ತಿಯ ಅಭಿವೃದ್ಧಿ ಎಂದರೇನು ಎಂಬುದನ್ನು ಜಗತ್ತಿಗೆ ತೋರಿಸಿದ್ದಾರೆ.

ವಿಕ್ಷಿತ ಭಾರತ ಆಗುವ ಸಾಮೂಹಿಕ ಪ್ರಯತ್ನಗಳಲ್ಲಿ ನಮ್ಮಲ್ಲಿ ಪ್ರತಿಯೊಬ್ಬರೂ ಅವಿಭಾಜ್ಯ ಕೊಡುಗೆದಾರರಾಗಿದ್ದೇವೆ.
https://www.narendramodi.in/ViksitBharatAmbassador

ವಿಕ್ಷಿತ ಭಾರತ ರಾಯಭಾರಿಯಾಗಿರುವುದು ನಮ್ಮ ಸಾಮರ್ಥ್ಯಗಳನ್ನು ಸಂಯೋಜಿಸಲು, ಅಭಿವೃದ್ಧಿ ಕಾರ್ಯಸೂಚಿಯನ್ನು ಹರಡಲು ಮತ್ತು ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡುವ ನಮ್ಮ ಧ್ಯೇಯವನ್ನು ಪೂರೈಸಲು ನಮ್ಮ ಶಕ್ತಿಯನ್ನು ಬಳಸಲು ಸೂಕ್ತ ಮಾರ್ಗವಾಗಿದೆ.

ನಮೋ ಆ್ಯಪ್ ನಲ್ಲಿ ನೋಂದಾಯಿಸುವ ಮೂಲಕ ಮತ್ತು ವಿಕ್ಷಿತ ಭಾರತ ಅಂಬಾಸಿಡರ್ ಮಾಡ್ಯೂಲ್ ನಲ್ಲಿ ಸರಳ ಆದರೆ ಹೆಚ್ಚು ಪರಿಣಾಮಕಾರಿ ಕಾರ್ಯಗಳನ್ನು ನಿರ್ವಹಿಸುವ 100 ದಿನಗಳ ಸವಾಲನ್ನು ಸ್ವೀಕರಿಸುವ ಮೂಲಕ ಈ ಸಾಮೂಹಿಕ ಆಂದೋಲನದಲ್ಲಿ ಸೇರೋಣ.

ಜೀವನದ ಎಲ್ಲಾ ಕ್ಷೇತ್ರಗಳ ಅತ್ಯಂತ ಶಕ್ತಿಯುತ ಮತ್ತು ಪ್ರಕಾಶಮಾನವಾದ ರಾಯಭಾರಿಗಳನ್ನು ವೈಯಕ್ತಿಕವಾಗಿ ಭೇಟಿಯಾಗಲು ನಾನು ಎದುರು ನೋಡುತ್ತಿದ್ದೇನೆ,’’ ಎಂದಿದ್ದಾರೆ.

***