Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

​​​​​​​ಹವಾಮಾನ ಹಣಕಾಸು ವರ್ಗಾವಣೆ ಕುರಿತ ಕಾಪ್-28ರ ಅಧ್ಯಕ್ಷೀಯ ಗೋಷ್ಠಿಯಲ್ಲಿ ಭಾಗವಹಿಸಿದ ಪ್ರಧಾನಮಂತ್ರಿ

​​​​​​​ಹವಾಮಾನ ಹಣಕಾಸು ವರ್ಗಾವಣೆ ಕುರಿತ ಕಾಪ್-28ರ ಅಧ್ಯಕ್ಷೀಯ ಗೋಷ್ಠಿಯಲ್ಲಿ ಭಾಗವಹಿಸಿದ ಪ್ರಧಾನಮಂತ್ರಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2023ರ ಡಿಸೆಂಬರ್ 1ರಂದು ಯುಎಇನ ದುಬೈನಲ್ಲಿ ಹವಾಮಾನ ಹಣಕಾಸು ವರ್ಗಾವಣೆ ಕುರಿತ ಕಾಪ್-28 ಅಧ್ಯಕ್ಷೀಯ ಗೋಷ್ಠಿಯಲ್ಲಿ ಭಾಗವಹಿಸಿದ್ದರು. ಇದು ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಿಗೆ ಹೆಚ್ಚು ಹವಾಮಾನ ಹಣಕಾಸು ಲಭ್ಯತೆ, ಸುಲಭವಾಗಿ ಹಾಗೂ ಕೈಗೆಟುವಂತೆ ಮಾಡುವ ನಿಟ್ಟಿನಲ್ಲಿ ಕೇಂದ್ರೀಕರಿಸುತ್ತದೆ.

ಗೋಷ್ಠಿಯ ವೇಳೆ ನಾಯಕರು “ಹೊಸ ಜಾಗತಿಕ ಹವಾಮಾನ ಹಣಕಾಸು ನೀತಿ (ಫ್ರೇಮ್ ವರ್ಕ್- ಚೌಕಟ್ಟು) ಕುರಿತ ಯುಎಇ ಘೋಷಣೆ’’ ಯನ್ನು ಅಂಗೀಕರಿಸಿದರು.  ಈ ಘೋಷಣೆಯು ಹವಾಮಾನ ಕ್ರಮಕ್ಕಾಗಿ ರಿಯಾಯಿತಿಯ ಹಣಕಾಸಿನ ಮೂಲಗಳನ್ನು ವಿಸ್ತರಿಸುವುದು ಮತ್ತು ಬದ್ಧತೆಗಳನ್ನು ತೋ
ರುವುದು ಮತ್ತು ಮಹತ್ವಾಕಾಂಕ್ಷೆಯ ಫಲಿತಾಂಶಗಳನ್ನು ಸಾಧಿಸುವ ಅಂಶಗಳನ್ನು ಒಳಗೊಂಡಿದೆ.

ತಮ್ಮ ಭಾಷಣದ ವೇಳೆ ಪ್ರಧಾನಮಂತ್ರಿ ಅವರು, ಜಾಗತಿಕ ದಕ್ಷಿಣದ ಆತಂಕಗಳ ಕುರಿತು ಧ್ವನಿ ಎತ್ತಿದರು ಮತ್ತು ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ತಮ್ಮ ಹವಾಮಾನ ಮಹತ್ವಾಕಾಂಕ್ಷೆಗಳನ್ನು ಸಾಧಿಸಲು ಮತ್ತು ಅವರ ಎನ್ ಡಿಸಿ ಗಳನ್ನು ಕಾರ್ಯಗತಗೊಳಿಸಲು ಅನುಷ್ಠಾನದ ಸಾಧನಗಳನ್ನು, ವಿಶೇಷವಾಗಿ ಹವಾಮಾನ ಹಣಕಾಸು ಲಭ್ಯವಾಗುವಂತೆ ಮಾಡುವ ತುರ್ತು ಅಗತ್ಯತೆಯನ್ನು ಪುನರುಚ್ಚರಿಸಿದರು.

ಪ್ರಧಾನಮಂತ್ರಿ ಅವರು ನಷ್ಟ ಮತ್ತು ಹಾನಿ ನಿಧಿಯ ಕಾರ್ಯಾಚರಣೆಯನ್ನು ಮತ್ತು ಕಾಪ್-28 ರಲ್ಲಿ ಯುಎಇ ಹವಾಮಾನ ಹೂಡಿಕೆ ನಿಧಿಯ ಸ್ಥಾಪನೆಯನ್ನು ಸ್ವಾಗತಿಸಿದರು.

ಹವಾಮಾನ ಹಣಕಾಸಿಗೆ ಸಂಬಂಧಿಸಿದ ಈ ಕೆಳಗಿನ ಸಮಸ್ಯೆಗಳನ್ನುಪರಿಹಾರ ಕಂಡುಕೊಳ್ಳಲು ಪ್ರಧಾನಮಂತ್ರಿ ಕಾಪ್-28 ಗೆ ಕರೆ ನೀಡಿದರು:

  • ಹವಾಮಾನ ಹಣಕಾಸು ಕುರಿತ ಹೊಸ ಸಾಮೂಹಿಕ ಪ್ರಮಾಣದ ಗುರಿಯಲ್ಲಿನ ಪ್ರಗತಿ
  • ಹಸಿರು ಹವಾಮಾನ ನಿಧಿ ಮತ್ತು ಮಾರ್ಪಾಡು ನಿಧಿಯ ಮರುಪೂರಣ
  • ಹವಾಮಾನ ಕ್ರಿಯೆಗಳಿಗೆ ಎಂಡಿಬಿಗಳಿಂದ ಹಣಕಾಸು ಕೈಗೆಟುಕುವಂತೆ ಮಾಡುವುದು
  • ಅಭಿವೃದ್ಧಿ ಶೀಲ ರಾಷ್ಟ್ರಗಳು ತಮ್ಮ ಇಂಗಾಲದ ಹೊರಸೂಸುವಿಕೆಯನ್ನು 2050ರೊಳಗೆ ನಿರ್ಮೂಲನೆ ಮಾಡುವುದು.

 

*********