ಲಕ್ಸಂಬರ್ಗ್ ನ ನೂತನ ಪ್ರಧಾನಿ ಲೂಕ್ ಫ್ರೀಡೆನ್ ಅವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಭಿನಂದಿಸಿದ್ದಾರೆ.
ಎಕ್ಸ್ ನಲ್ಲಿ ಪ್ರಧಾನಮಂತ್ರಿಯವರು ಹೀಗೆ ಪೋಸ್ಟ್ ಮಾಡಿದ್ದಾರೆ:
“ಲಕ್ಸಂಬರ್ಗ್ ಪ್ರಧಾನಿಯಾಗಿರುವ @LucFrieden ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು. ನೆಲದ ಕಾನೂನು ಮತ್ತು ಪ್ರಜಾಸತ್ತಾತ್ಮಕ ಮೌಲ್ಯಗಳ ಪರಸ್ಪರ ಹಂಚಿಕೆಯ ನಂಬಿಕೆಗಳಿಂದ ಬಲಿಷ್ಠವಾಗಿ ಬೇರೂರಿರುವ ಭಾರತ – ಲಕ್ಸಂಬರ್ಗ್ ಬಾಂಧವ್ಯವನ್ನು ಮತ್ತಷ್ಟು ಬಲಗೊಳಿಸುವ ನಿಟ್ಟಿನಲ್ಲಿ ನಿಕಟವಾಗಿ ಕಾರ್ಯನಿರ್ವಹಿಸಲು ಎದುರುನೋಡುತ್ತಿದ್ದೇವೆ” ಎಂದು ತಿಳಿಸಿದ್ದಾರೆ.
********
Heartiest congratulations @LucFrieden on taking over as the Prime Minister of Luxembourg. Looking forward to working closely with you to further strengthen India-Luxembourg relations that are strongly rooted in our shared belief in democratic values and the Rule of Law.
— Narendra Modi (@narendramodi) November 20, 2023