Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

​​​​​​​ಜಾರ್ಖಂಡ್ ರಾಜ್ಯ ಸ್ಥಾಪನೆ ದಿನದಂದು ಜನತೆಗೆ ಪ್ರಧಾನಮಂತ್ರಿ ಶುಭಾಶಯ 


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಜಾರ್ಖಂಡ್ ಸಂಸ್ಥಾಪನಾ ದಿನದಂದು ಜಾರ್ಖಂಡ್ ಜನರಿಗೆ ಶುಭಾಶಯ ಕೋರಿದ್ದಾರೆ. ರಾಜ್ಯದ ಉಜ್ವಲ ಭವಿಷ್ಯಕ್ಕಾಗಿ ಶುಭ ಹಾರೈಸಿದ್ದಾರೆ.

ಜಾರ್ಖಂಡ್ ತನ್ನ ಖನಿಜ ಸಂಪನ್ಮೂಲಗಳಿಗೆ ಮತ್ತು ಬುಡಕಟ್ಟು ಸಮಾಜದ ಧೈರ್ಯ, ಶೌರ್ಯ ಮತ್ತು ಸ್ವಾಭಿಮಾನಕ್ಕೆ ಹೆಸರುವಾಸಿಯಾಗಿದೆ. ದೇಶದ ಪ್ರಗತಿಗೆ ಜಾರ್ಖಂಡ್‌ನ ಜನರು ಮಹತ್ವದ ಕೊಡುಗೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ.

ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ, ಪ್ರಧಾನಿ ಶ್ರೀ ನರೇಂದ್ರ ಮೋದಿ ಸಂದೇಶ ನೀಡಿದ್ದಾರೆ.

“ಜಾರ್ಖಂಡ್‌ ನಲ್ಲಿ ಅಪಾರ ಖನಿಜ ಸಂಪತ್ತು ಹೊಂದಿದೆ. ಇದರೊಂದಿಗೆ ಜನಜಾತೀಯ ಸಮಾಜಕ್ಕೆ  ಸಾಹಸ, ಶೌರ್ಯ ಮತ್ತು ಸಾರ್ವಜನಿಕರ ಸಹಭಾಗಿತ್ವ ಇದೆ. ದೇಶದ ಉನ್ನತಿಯಲ್ಲಿ ತನ್ನದೇ ರೀತಿಯಲ್ಲಿ ಯೋಗದಾನ ನೀಡಿದೆ. ರಾಜ್ಯ ಸ್ಥಾಪನೆ ದಿನದಂದು ಶುಭಾಕಾಮನೆಗಳನ್ನು ಕೋರುತ್ತೇನೆ” ಎಂದು ಪ್ರಧಾನಮಂತ್ರಿ ಶುಭ ಸಂದೇಶ ನೀಡಿದ್ದಾರೆ.

*******