Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಏಷ್ಯನ್ ಪ್ಯಾರಾ ಗೇಮ್ಸ್ 2022 ರ ಮಹಿಳಾ ಡಬಲ್ಸ್ ಕಾಂಪೌಂಡ್ ಸ್ಪರ್ಧೆಯಲ್ಲಿ ಪ್ಯಾರಾ ಆರ್ಚರ್ಸ್ ಕ್ರೀಡಾಳು ಶೀತಲ್ ದೇವಿ ಮತ್ತು ಸರಿತಾ ಅವರಿಂದ ಬೆಳ್ಳಿ ಪದಕ ಗಳಿಕೆಗೆ ಸಂತಸ ವ್ಯಕ್ತಪಡಿಸಿದ ಪ್ರಧಾನಮಂತ್ರಿ


ಚೀನಾದ ಹ್ಯಾಂಗ್‌ ಝೌನಲ್ಲಿ ನಡೆದ ಏಷ್ಯನ್ ಪ್ಯಾರಾ ಗೇಮ್ಸ್ 2022 ರ ಮಹಿಳಾ ಡಬಲ್ಸ್ ಕಾಂಪೌಂಡ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದ ಪ್ಯಾರಾ ಆರ್ಚರ್ಸ್ ಕ್ರೀಡಾಪಟುಗಳಾದ ಶೀತಲ್ ದೇವಿ ಮತ್ತು ಸರಿತಾ ಅವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅಭಿನಂದಿಸಿದ್ದಾರೆ.

ಪ್ರಧಾನಮಂತ್ರಿಯವರು ತಮ್ಮ ಎಕ್ಸ್ ಖಾತೆಯಲ್ಲಿ ಈ ರೀತಿ ಸಂದೇಶ ಹಂಚಿಕೊಂಡಿದ್ದಾರೆ:

“ಮಹಿಳೆಯರ ಡಬಲ್ಸ್ ಕಾಂಪೌಂಡ್ ಸ್ಪರ್ಧೆಯಲ್ಲಿ ಮಹತ್ತರವಾದ ಬೆಳ್ಳಿ ಪದಕವನ್ನು ಗಳಿಸಿದ್ದಕ್ಕಾಗಿ ನಮ್ಮ ಪ್ಯಾರಾ ಆರ್ಚರ್ಸ್ ಕ್ರೀಡಾಪಟುಗಳಾದ ಶೀತಲ್ ದೇವಿ ಮತ್ತು ಸರಿತಾ ಅವರಿಗೆ ಅಭಿನಂದನೆಗಳು. ಭಾರತವು ಈ ಅರ್ಹವಾದ ಯಶಸ್ಸನ್ನು ಆಚರಿಸುತ್ತದೆ.
 

*****