Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ ಜಾವೆಲಿನ್ ಎಸೆತದಲ್ಲಿ ಚಿನ್ನ ಗೆದ್ದ ಸುಂದರ್ ಸಿಂಗ್ ಗುರ್ಜಾರ್ ಅವರಿಗೆ ಪ್ರಧಾನಿ ಮೆಚ್ಚುಗೆ


ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ ಜಾವೆಲಿನ್ ಥ್ರೋ F46 ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದ ಸುಂದರ್ ಸಿಂಗ್ ಗುರ್ಜರ್ ಅವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಭಿನಂದಿಸಿದರು.

ಗುರ್ಜರ್ ಅವರ ಪ್ರದರ್ಶನವು ಅದ್ಭುತವಾಗಿದೆ. ಭವಿಷ್ಯದ ಪ್ರಯತ್ನಗಳಿಗೆ ಶುಭ ಹಾರೈಸಿದರು.

ಸಾಮಾಜಿಕ ಜಾಲತಾಣ X ನಲ್ಲಿ ಪ್ರಧಾನ ಮಂತ್ರಿ ಸಂದೇಶ ನೀಡಿದ್ದಾರೆ.

“ಜಾವೆಲಿನ್ ಥ್ರೋ F46 ಈವೆಂಟ್‌ನಲ್ಲಿ ಗಮನಾರ್ಹವಾದ ಚಿನ್ನದ ಪದಕಕ್ಕಾಗಿ ಸುಂದರ್‌ ಸಿಂಗ್‌ ಗುರ್ಜಾರ್‌ ಅವರಿಗೆ ಅಭಿನಂದನೆಗಳು. ಇದು ಅದ್ಭುತ ಸಾಧನೆಯಾಗಿದೆ. ಅವರ ಮುಂದಿನ ಪ್ರಯತ್ನಗಳಿಗೆ ನನ್ನ ಶುಭಾಶಯಗಳು” ಎಂದು ಪ್ರಧಾನಮಂತ್ರಿಗಳು ಸಂದೇಶ ನೀಡಿದ್ದಾರೆ.

 

***