ಗುಜರಾತ್ನ ಕಚ್ ಜಿಲ್ಲೆಯ ಧೋರ್ಡೊ ಗ್ರಾಮವನ್ನು ಅತ್ಯುತ್ತಮ ಪ್ರವಾಸೋದ್ಯಮ ಗ್ರಾಮವೆಂದು ವಿಶ್ವಸಂಸ್ಥೆಯ ವಿಶ್ವ ಪ್ರವಾಸೋದ್ಯಮ ಸಂಸ್ಥೆ (ಯು.ಎನ್.ಡಬ್ಲ್ಯು.ಟಿ.ಒ.) ಇಂದು ಪುರಸ್ಕರಿಸಿರುವುದನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಶ್ಲಾಘಿಸಿದ್ದಾರೆ.
ಧೋರ್ಡೊ ಗ್ರಾಮಕ್ಕೆ ಉಜ್ವಲ ಭವಿಷ್ಯವನ್ನು ಹಾರೈಸುತ್ತಾ, ಪ್ರಧಾನಮಂತ್ರಿಯವರು 2009 ಮತ್ತು 2015 ರಲ್ಲಿ ಗ್ರಾಮಕ್ಕೆ ಭೇಟಿ ನೀಡಿದ ಕೆಲವು ಚಿತ್ರಗಳನ್ನು ಹಂಚಿಕೊಂಡರು.
ಪ್ರಧಾನಮಂತ್ರಿಯವರು ತಮ್ಮ ಎಕ್ಸ್ ಖಾತೆಯಲ್ಲಿ ಈ ರೀತಿ ಸಂದೇಶ ಹಂಚಿಕೊಂಡಿದ್ದಾರೆ;
“ಕಚ್ ನ ಧೋರ್ಡೊವನ್ನು ಅದರ ಶ್ರೀಮಂತ ಸಾಂಸ್ಕೃತಿಕ ಪರಂಪರೆ ಮತ್ತು ನೈಸರ್ಗಿಕ ಸೌಂದರ್ಯಕ್ಕಾಗಿ ಸಂಭ್ರಮ ಆಚರಿಸುವುದನ್ನು ನೋಡಲು ಸಂಪೂರ್ಣವಾಗಿ ರೋಮಾಂಚನಗೊಂಡಿದ್ದೇನೆ. ಈ ಗೌರವವು ಭಾರತೀಯ ಪ್ರವಾಸೋದ್ಯಮದ ಸಾಮರ್ಥ್ಯವನ್ನು ಮಾತ್ರವಲ್ಲದೆ ನಿರ್ದಿಷ್ಟವಾಗಿ ಕಚ್ ನ ಜನರ ಸಮರ್ಪಣೆಯನ್ನೂ ತೋರಿಸುತ್ತದೆ.
ಧೋರ್ಡೊ ಪ್ರಪಂಚದಾದ್ಯಂತದ ಸಂದರ್ಶಕರನ್ನು ಆಕರ್ಷಿಸುವುದನ್ನು ಮತ್ತು ಅವರುಗಳಿಗಾಗಿ ನಡೆಸುವ ಕಾರ್ಯಚಟುವಟಿಕೆಗಳನ್ನು ಮುಂದುವರಿಸಲಿ!
ನಾನು 2009 ಮತ್ತು 2015 ರಲ್ಲಿ ಧೋರ್ಡೊಗೆ ಭೇಟಿ ನೀಡಿದ ಕೆಲವು ನೆನಪುಗಳನ್ನು ಹಂಚಿಕೊಳ್ಳುತ್ತಿದ್ದೇನೆ. ಧೋರ್ಡೊಗೆ ನಿಮ್ಮ ಹಿಂದಿನ ಭೇಟಿಗಳಿಂದ ನಿಮ್ಮ ನೆನಪುಗಳನ್ನು ಪುನಃ ಹಂಚಿಕೊಳ್ಳಲು ನಾನು ನಿಮ್ಮೆಲ್ಲರನ್ನು ಆಹ್ವಾನಿಸುತ್ತೇನೆ. ಇದು ಹೆಚ್ಚಿನ ಜನರನ್ನು ಭೇಟಿ ಮಾಡಲು ಪ್ರೇರೇಪಿಸುತ್ತದೆ ಎಂದು ಭಾವಿಸುತ್ತೇನೆ. ಮತ್ತು, ಜೊತೆಗೆ #AmazingDhordo ಬಳಸಲು ಮರೆಯಬೇಡಿ.”
***
Absolutely thrilled to see Dhordo in Kutch being celebrated for its rich cultural heritage and natural beauty. This honour not only showcases the potential of Indian tourism but also the dedication of the people of Kutch in particular.
— Narendra Modi (@narendramodi) October 20, 2023
May Dhordo continue to shine and attract… https://t.co/cWedaTk8LG pic.twitter.com/hfJQrVPg1x