Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ದೆಹಲಿ ಕ್ಯಾಂಟ್ ನ ಸೇನಾ ಆಸ್ಪತ್ರೆಯ (ಆರ್&ಆರ್)  ಇಎನ್ಟಿ ವಿಭಾಗವು ಕಳೆದ 18 ತಿಂಗಳುಗಳಲ್ಲಿ 50 ರೋಗಿಗಳ ಎರಡೂ ಕಿವಿಗಳಲ್ಲಿ ಶ್ರವಣ ಸಾಧನಗಳನ್ನು ಏಕಕಾಲದಲ್ಲಿ ಅಳವಡಿಸಿದ ದಾಖಲೆಯನ್ನು ಪ್ರಧಾನಮಂತ್ರಿಯವರು ಶ್ಲಾಘಿಸಿದರು.


 ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕಳೆದ 18 ತಿಂಗಳುಗಳಲ್ಲಿ 50 ರೋಗಿಗಳ ಎರಡೂ ಕಿವಿಗಳಲ್ಲಿ ಏಕಕಾಲದಲ್ಲಿ ಶ್ರವಣ ಸಾಧನಗಳನ್ನು (ಕಾಕ್ಲಿಯರ್ ಇಂಪ್ಲಾಂಟ್ ) ಅಳವಡಿಸುವ ಮೂಲಕ ದೆಹಲಿ ಕ್ಯಾಂಟ್ನ ಸೇನಾ ಆಸ್ಪತ್ರೆಯಲ್ಲಿ (ಆರ್&ಆರ್) ಕಿವಿ, ಮೂಗು ಮತ್ತು ಗಂಟಲು (ಇಎನ್ಟಿ) ವಿಭಾಗವು ಸಾಧಿಸಿದ ದಾಖಲೆಯನ್ನು ಶ್ಲಾಘಿಸಿದರು.

ಪ್ರೆಸ್ ಇನ್ಫಾರ್ಮೇಶನ್ ಬ್ಯೂರೋದ ಎಕ್ಸ್ ಪೋಸ್ಟ್ ಅನ್ನು ಉಲ್ಲೇಖಿಸಿ, ಪ್ರಧಾನ ಮಂತ್ರಿ ಹೇಳಿದರು;

“ಕಾಕ್ಲಿಯರ್ ಇಂಪ್ಲಾಂಟ್ಗಳಲ್ಲಿ ಉತ್ತಮ ಮಾನದಂಡವನ್ನು ಹೊಂದಿಸಿದ್ದಕ್ಕಾಗಿ ಅಭಿನಂದನೆಗಳು. ಅಂತಹ ಸಮರ್ಪಣೆ ಮತ್ತು ಪರಿಣತಿಯು ಅನೇಕರಿಗೆ ಉಜ್ವಲ ಮತ್ತು ಆರೋಗ್ಯಕರ ಭವಿಷ್ಯವನ್ನು ಖಚಿತಪಡಿಸುತ್ತದೆ. ಈ ಸಾಧನೆಯು ನಮ್ಮ ವೈದ್ಯಕೀಯ ವೃತ್ತಿಪರರ ಬದ್ಧತೆಯ ಬಗ್ಗೆಯೂ ಹೇಳುತ್ತದೆ.

ಸಾಮಾಜಿಕ ಮಾಧ್ಯಮ ಎಕ್ಸ್ ನಲ್ಲಿ ಪಿ ಐ ಬಿಯ ಪೋಸ್ಟ್ ಅನ್ನು ಉಲ್ಲೇಖಿಸಿ, ಪ್ರಧಾನ ಮಂತ್ರಿಯವರು ಹೀಗೆ ಹೇಳಿದ್ದಾರೆ:

“ದಾಖಲೆ ಮಟ್ಟದ ಕಾಕ್ಲಿಯರ್ ಇಂಪ್ಲಾಂಟ್ಗಳನ್ನು ಅಳವಡಿಸಿದ್ದಕ್ಕಾಗಿ ಅಭಿನಂದನೆಗಳು. ಈ ರೀತಿಯ ಸಮರ್ಪಣೆ ಮತ್ತು ಪರಿಣತಿಯು ಅನೇಕರಿಗೆ ಉಜ್ವಲ ಮತ್ತು ಆರೋಗ್ಯಕರ ಭವಿಷ್ಯವನ್ನು ಖಾತ್ರಿಗೊಳಿಸುತ್ತದೆ. ಈ ಸಾಧನೆಯು ನಮ್ಮ ವೈದ್ಯಕೀಯ ವೃತ್ತಿಪರರ ಬದ್ಧತೆಯನ್ನೂ ತೋರಿಸುತ್ತದೆ.

***