ಸೇವೆ ಮತ್ತು ಆಧ್ಯಾತ್ಮಿಕತೆಯ ಪ್ರತೀಕವಾದ ಅಮ್ಮ, ಮಾತಾ ಅಮೃತಾನಂದಮಯಿ ಅವರಿಗೆ ನನ್ನ ಗೌರವಪೂರ್ವಕ ನಮನಗಳನ್ನು ಸಲ್ಲಿಸುತ್ತೇನೆ. ಅವರ ಎಪ್ಪತ್ತನೇ ಹುಟ್ಟುಹಬ್ಬದ ಸಂದರ್ಭದಲ್ಲಿ, ನಾನು ಅಮ್ಮನಿಗೆ ದೀರ್ಘ ಮತ್ತು ಆರೋಗ್ಯಕರ ಜೀವನವನ್ನು ಬಯಸುತ್ತೇನೆ. ಪ್ರಪಂಚದಾದ್ಯಂತ ಪ್ರೀತಿ ಮತ್ತು ಸಹಾನುಭೂತಿಯನ್ನು ಹರಡುವ ಅವರ ಧ್ಯೇಯವು ಬೆಳೆಯುತ್ತಲೇ ಇರಬೇಕೆಂದು ನಾನು ಪ್ರಾರ್ಥಿಸುತ್ತೇನೆ. ಅಮ್ಮನ ಅನುಯಾಯಿಗಳು ಸೇರಿದಂತೆ ವಿವಿಧ ಕ್ಷೇತ್ರಗಳ ಜನರು ಇಲ್ಲಿ ನೆರೆದಿರುವ ಎಲ್ಲರಿಗೂ ನಾನು ಅಭಿನಂದನೆ ಸಲ್ಲಿಸುತ್ತೇನೆ ಮತ್ತು ಶುಭ ಹಾರೈಸುತ್ತೇನೆ.
ಸ್ನೇಹಿತರೇ,
ನಾನು 30 ವರ್ಷಗಳಿಂದ ಅಮ್ಮನೊಂದಿಗೆ ನೇರ ಸಂಪರ್ಕದಲ್ಲಿದ್ದೇನೆ. ಕಛ್ ನಲ್ಲಿ ಭೂಕಂಪದ ನಂತರ ಅಮ್ಮನೊಂದಿಗೆ ದೀರ್ಘಕಾಲ ಕೆಲಸ ಮಾಡಿದ ಅನುಭವ ನನಗೆ ಇತ್ತು. ಅಮೃತಪುರಿಯಲ್ಲಿ ಅಮ್ಮನ 60 ನೇ ಹುಟ್ಟುಹಬ್ಬವನ್ನು ಆಚರಿಸಿದ ದಿನ ನನಗೆ ಇನ್ನೂ ನೆನಪಿದೆ. ಇಂದಿನ ಕಾರ್ಯಕ್ರಮದಲ್ಲಿ ನಾನು ದೈಹಿಕವಾಗಿ ಹಾಜರಿದ್ದಿದ್ದರೆ, ನಾನು ಉಲ್ಲಾಸಗೊಳ್ಳುತ್ತಿದ್ದೆ ಮತ್ತು ಉತ್ತಮ ಭಾವನೆ ಹೊಂದುತ್ತಿದ್ದೆ. ಇಂದಿಗೂ, ಅಮ್ಮನ ನಗುವ ಮುಖದ ಬೆಚ್ಚಗಿನ ಮತ್ತು ಪ್ರೀತಿಯ ಸ್ವಭಾವವು ಮೊದಲಿನಂತೆಯೇ ಉಳಿದಿದೆ. ಇದಲ್ಲದೆ, ಕಳೆದ 10 ವರ್ಷಗಳಲ್ಲಿ, ಅಮ್ಮನ ಕೆಲಸ ಮತ್ತು ಪ್ರಪಂಚದ ಮೇಲೆ ಅವರ ಪ್ರಭಾವವು ಅನೇಕ ಪಟ್ಟು ಹೆಚ್ಚಾಗಿದೆ. ಕಳೆದ ವರ್ಷ ಆಗಸ್ಟ್ ನಲ್ಲಿ ಹರಿಯಾಣದ ಫರಿದಾಬಾದ್ ನಲ್ಲಿ ಅಮೃತಾ ಆಸ್ಪತ್ರೆಯನ್ನು ಉದ್ಘಾಟಿಸುವ ಸೌಭಾಗ್ಯ ನನಗೆ ಸಿಕ್ಕಿತ್ತು. ಅಮ್ಮನ ಉಪಸ್ಥಿತಿ ಮತ್ತು ಅವರ ಆಶೀರ್ವಾದದ ಸೆಳವು ಪದಗಳಲ್ಲಿ ವರ್ಣಿಸುವುದು ಕಷ್ಟ; ನಾವು ಅದನ್ನು ಅನುಭವಿಸಲು ಮಾತ್ರ ಸಾಧ್ಯ. ಆ ಸಮಯದಲ್ಲಿ ನಾನು ಅಮ್ಮನಿಗೆ ಹೇಳಿದ್ದನ್ನು ನಾನು ನೆನಪಿಸಿಕೊಳ್ಳುತ್ತೇನೆ, ಮತ್ತು ಇಂದು ನಾನು ಅದನ್ನು ಪುನರಾವರ್ತಿಸಲು ಬಯಸುತ್ತೇನೆ – स्नेह-त्तिन्डे, कारुण्य-त्तिन्डे, सेवन-त्तिन्डे, त्याग-त्तिन्डे, पर्यायमाण अम्मा। माता अमृतानंन्दमयी देवी, भार-त्तिन्डे महत्ताय, आध्यात्मिक पारंपर्य-त्तिन्डे, नेरव-काशियाण। ಅಂದರೆ, ಅಮ್ಮ ಪ್ರೀತಿ, ಸಹಾನುಭೂತಿ, ಸೇವೆ ಮತ್ತು ತ್ಯಾಗದ ಸಾಕಾರರೂಪ. ಅವಳು ಭಾರತದ ಆಧ್ಯಾತ್ಮಿಕ ಸಂಪ್ರದಾಯದ ವಾಹಕಳು.
ಸ್ನೇಹಿತರೇ,
ಅಮ್ಮನ ಕೆಲಸದ ಒಂದು ಅಂಶವೆಂದರೆ ಅವರು ದೇಶ ಮತ್ತು ವಿದೇಶಗಳಲ್ಲಿ ಸಂಸ್ಥೆಗಳನ್ನು ಸ್ಥಾಪಿಸಿದರು ಮತ್ತು ಅವುಗಳನ್ನು ಮತ್ತಷ್ಟು ಉತ್ತೇಜಿಸಿದರು. ಅದು ಆರೋಗ್ಯ ಅಥವಾ ಶಿಕ್ಷಣ ಕ್ಷೇತ್ರವಾಗಿರಲಿ, ಅಮ್ಮನ ಮಾರ್ಗದರ್ಶನದಲ್ಲಿ ಪ್ರತಿಯೊಂದು ಸಂಸ್ಥೆಯೂ ಮಾನವ ಸೇವೆ ಮತ್ತು ಸಾಮಾಜಿಕ ಕಲ್ಯಾಣದ ಹೊಸ ಎತ್ತರವನ್ನು ತಲುಪಿತು. ದೇಶವು ಸ್ವಚ್ಚತಾ ಅಭಿಯಾನವನ್ನು ಪ್ರಾರಂಭಿಸಿದಾಗ, ಅದನ್ನು ಯಶಸ್ವಿಗೊಳಿಸಲು ಮುಂದೆ ಬಂದ ಮೊದಲ ವ್ಯಕ್ತಿಗಳಲ್ಲಿ ಅಮ್ಮ ಕೂಡ ಒಬ್ಬರು. ಗಂಗಾ ದಡದಲ್ಲಿ ಶೌಚಾಲಯಗಳನ್ನು ನಿರ್ಮಿಸಲು ಅವರು 100 ಕೋಟಿ ರೂ.ಗಳನ್ನು ದೇಣಿಗೆ ನೀಡಿದರು, ಇದು ಸ್ವಚ್ಛತಾ ಅಭಿಯಾನಕ್ಕೆ ಹೊಸ ಉತ್ತೇಜನವನ್ನು ನೀಡಿತು. ಅಮ್ಮನಿಗೆ ಪ್ರಪಂಚದಾದ್ಯಂತ ಅನುಯಾಯಿಗಳಿದ್ದಾರೆ ಮತ್ತು ಅವರು ಯಾವಾಗಲೂ ದೇಶದ ಚಿತ್ರಣ ಮತ್ತು ವಿಶ್ವಾಸಾರ್ಹತೆಯನ್ನು ಹೆಚ್ಚಿಸಿದ್ದಾರೆ. ಸ್ಫೂರ್ತಿ ತುಂಬಾ ದೊಡ್ಡದಾಗಿದ್ದಾಗ, ಪ್ರಯತ್ನಗಳು ಸಹ ದೊಡ್ಡದಾಗುತ್ತವೆ.
ಸ್ನೇಹಿತರೇ,
ಸಾಂಕ್ರಾಮಿಕ ರೋಗದ ನಂತರದ ಜಗತ್ತಿನಲ್ಲಿ, ಅಭಿವೃದ್ಧಿಯ ಬಗ್ಗೆ ಭಾರತದ ಮಾನವ ಕೇಂದ್ರಿತ ವಿಧಾನವನ್ನು ಇಂದು ಅಂಗೀಕರಿಸಲಾಗುತ್ತಿದೆ. ಇಂತಹ ಸಮಯದಲ್ಲಿ, ಅಮ್ಮನಂತಹ ವ್ಯಕ್ತಿಗಳು ಭಾರತದ ಮಾನವ ಕೇಂದ್ರಿತ ವಿಧಾನವನ್ನು ಪ್ರತಿಬಿಂಬಿಸುತ್ತಾರೆ. ಅಮ್ಮ ಯಾವಾಗಲೂ ಕಡಿಮೆ ಸವಲತ್ತು ಪಡೆದವರನ್ನು ಸಬಲೀಕರಣಗೊಳಿಸುವ ಮತ್ತು ಸಮಾಜದ ವಂಚಿತ ವರ್ಗಕ್ಕೆ ಆದ್ಯತೆ ನೀಡುವ ಮಾನವೀಯ ಪ್ರಯತ್ನವನ್ನು ಮಾಡಿದ್ದಾರೆ. ಕೆಲವು ದಿನಗಳ ಹಿಂದೆ, ಭಾರತದ ಸಂಸತ್ತು ನಾರಿಶಕ್ತಿ ವಂದನ್ ಅಧಿನಿಯಮ್ ಅನ್ನು ಅಂಗೀಕರಿಸಿದೆ. ಮಹಿಳಾ ನೇತೃತ್ವದ ಅಭಿವೃದ್ಧಿಯ ಸಂಕಲ್ಪದೊಂದಿಗೆ ಮುಂದುವರಿಯುತ್ತಿರುವ ಭಾರತವು ಅಮ್ಮನಂತಹ ಸ್ಫೂರ್ತಿದಾಯಕ ವ್ಯಕ್ತಿತ್ವವನ್ನು ಹೊಂದಿದೆ. ಜಗತ್ತಿನಲ್ಲಿ ಶಾಂತಿ ಮತ್ತು ಪ್ರಗತಿಯನ್ನು ಉತ್ತೇಜಿಸಲು ಅಮ್ಮನ ಅನುಯಾಯಿಗಳು ಇದೇ ರೀತಿಯ ಕೆಲಸವನ್ನು ಮುಂದುವರಿಸುತ್ತಾರೆ ಎಂದು ನನಗೆ ವಿಶ್ವಾಸವಿದೆ. ಮತ್ತೊಮ್ಮೆ, ನಾನು ಅಮ್ಮನಿಗೆ ಎಪ್ಪತ್ತನೇ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರುತ್ತೇನೆ. ಅವರು ದೀರ್ಘಕಾಲ ಬದುಕಲಿ; ಅವರು ಆರೋಗ್ಯವಾಗಿರಲಿ; ಅವರು ಈ ರೀತಿ ಮಾನವೀಯತೆಯ ಸೇವೆ ಮಾಡುವುದನ್ನು ಮುಂದುವರಿಸಲಿ. ನೀವು ನಮ್ಮೆಲ್ಲರ ಮೇಲೆ ನಿಮ್ಮ ಪ್ರೀತಿಯನ್ನು ಸುರಿಸುವುದನ್ನು ಮುಂದುವರಿಸಬೇಕು ಎಂಬ ಆಶಯದೊಂದಿಗೆ ನಾನು ನನ್ನ ಭಾಷಣವನ್ನು ಕೊನೆಗೊಳಿಸುತ್ತೇನೆ. ಮತ್ತೊಮ್ಮೆ, ನಾನು ಅಮ್ಮನಿಗೆ ನಮಸ್ಕರಿಸುತ್ತೇನೆ.
ಹಕ್ಕು ನಿರಾಕರಣೆ: ಇದು ಪ್ರಧಾನಿ ಅವರ ಭಾಷಣದ ಅಂದಾಜು ಅನುವಾದವಾಗಿದೆ. ಮೂಲ ಭಾಷಣವನ್ನು ಹಿಂದಿಯಲ್ಲಿ ಮಾಡಲಾಗಿದೆ.
****
Addressing a programme to mark the 70th birthday of Mata @Amritanandamayi Ji. Praying for her long and healthy life. https://t.co/FsDxDNFwwD
— Narendra Modi (@narendramodi) October 3, 2023