ಅಮ್ಮ ಮಾತಾ ಅಮೃತಾನಂದಮಯಿ ಅವರ 70 ನೇ ಜನ್ಮ ದಿನದ ಶುಭ ಸಂದರ್ಭದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ವಿಡಿಯೋ ಸಂದೇಶ ನೀಡಿದರು.
ಮಾತಾ ಅಮೃತಾನಂದಮಯಿ ಜಿ ಅವರಿಗೆ 70 ನೇ ಹುಟ್ಟುಹಬ್ಬದಂದು ಪ್ರಧಾನಮಂತ್ರಿ ಅವರು ದೀರ್ಘಕಾಲದ ಆರೋಗ್ಯಕರ ಬದುಕು ನಿಮ್ಮದಾಗಲಿ ಮತ್ತು ನೀವು ಸೇವೆ ಹಾಗೂ ಧಾರ್ಮಿಕತೆಯ ಸಂಕೇತ ಎಂದು ಹೇಳಿದರು. ವಿಶ್ವದಾದ್ಯಂತ ಪ್ರೀತಿ ಮತ್ತು ಸಹಾಭೂತಿಯನ್ನು ಪಸರಿಸುವ ನಿಮ್ಮ ಧ್ಯೇಯ ಇದೇ ರೀತಿ ಮುಂದುವರೆಯಲಿ ಎಂದು ಆಶಯ ವ್ಯಕ್ತಪಡಿಸಿದರು. ವಿವಿಧ ಪ್ರದೇಶಗಳಿಂದ ಆಗಮಿಸಿದ ಅವರ ಬೆಂಬಲಿಗರು ಸೇರಿದಂತೆ ಪ್ರತಿಯೊಬ್ಬರನ್ನು ಅಭಿನಂದಿಸಿದ ಪ್ರಧಾನಮಂತ್ರಿ ಶ್ರೀ ಮೋದಿ ಅವರು ಇದೇ ಸಂದರ್ಭದಲ್ಲಿ ಪ್ರತಿಯೊಬ್ಬರಿಗೂ ಶುಭ ಕೋರಿದರು.
ಕಳೆದ 30 ವರ್ಷಗಳಿಗೂ ಅಧಿಕ ಸಮಯದಿಂದ ಅಮ್ಮನೊಂದಿಗಿನ ಒಡನಾಟ ಕುರಿತು ಬೆಳಕು ಚೆಲ್ಲಿದ ಪ್ರಧಾನಮಂತ್ರಿಯವರು, ಕಛ್ ನಲ್ಲಿ ಭೂಕಂಪದ ನಂತರ ಅಮ್ಮ ಅವರೊಂದಿಗೆ ದೀರ್ಘಕಾಲ ಕೆಲಸ ಮಾಡಿರುವುದನ್ನು ಸ್ಮರಿಸಿಕೊಂಡರು. ಅಮೃತಪುರಿಯಲ್ಲಿ ಅಮ್ಮ ಅವರು 60 ನೇ ಹುಟ್ಟುಹಬ್ಬ ಆಚರಿಸಿಕೊಂಡಿರುವುದನ್ನು ಸ್ಮರಿಸಿಕೊಂಡರು. “ಈಗಲೂ ಅಮ್ಮನ ನಗುಮುಖದ ಆತ್ಮೀಯತೆ ಮತ್ತು ಪ್ರೀತಿಯ ಸ್ವಭಾವವು ಮೊದಲಿನಿಂತೆಯೇ ಉಳಿದಿದೆ” ಎಂದು ಶ್ರೀ ನರೇಂದ್ರ ಮೋದಿ ಹೇಳಿದರು. ಕಳೆದ ಹತ್ತು ವರ್ಷಗಳಲ್ಲಿ ಅಮ್ಮನ ಕೆಲಸದ ಬಗ್ಗೆ ಬೆಳಕು ಚೆಲ್ಲಿದ ಪ್ರಧಾನಮಂತ್ರಿಯವರು, ಜಗತ್ತಿನಾದ್ಯಂತ ಅವರ ಪ್ರಭಾವ ಹತ್ತು ಪಟ್ಟು ಏರಿಕೆಯಾಗಿದೆ. ಅಮ್ಮ ಅವರ ಸಮ್ಮುಖದಲ್ಲಿ ಫರಿದಾಬಾದ್, ಹರಿಯಾಣದಲ್ಲಿ ಅಮೃತ ಆಸ್ಪತ್ರೆಗಳನ್ನು ಉದ್ಘಾಟನೆ ಮಾಡಿರುವುದನ್ನು ನೆನಪುಮಾಡಿಕೊಂಡರು. “ಅಮ್ಮನ ಉಪಸ್ಥಿತಿ ಮತ್ತು ಆಕೆಯ ಆಶಿರ್ವಾದವನ್ನು ಪದಗಳಲ್ಲಿ ವರ್ಣಿಸುವುದು ಕಷ್ಟ, ನಾವು ಅದನ್ನು ಅನುಭವಿಸಬೇಕು” ಎಂದು ಒತ್ತಿ ಹೇಳಿದರು. “ಪ್ರೀತಿ, ಸಹಾನುಭೂತಿ, ಸೇವೆ ಮತ್ತು ತ್ಯಾಗದ ಸಾಕಾರ ಮೂರ್ತಿ ಅಮ್ಮ. ಇವರು ಭಾರತದ ಆಧ್ಯಾತ್ಮಿಕ ಸಂಪ್ರದಾಯದ ವಾಹಕರು” ಎಂದು ವರ್ಣಿಸಿದರು.
“ಅದು ಆರೋಗ್ಯ ವಲಯವಾಗಿರಬಹುದು ಇಲ್ಲವೆ ಶಿಕ್ಷಣ, ಹೀಗೆ ಪ್ರತಿಯೊಂದು ಸಂಸ್ಥೆ ಅಮ್ಮನ ಮಾರ್ಗದರ್ಶನದಲ್ಲಿ ಸಮಾಜ ಕಲ್ಯಾಣ ಮತ್ತು ಮಾನವೀಯ ಸೇವೆಯನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುತ್ತಿದೆ” ಎಂದು ದೇಶ ಮತ್ತು ವಿದೇಶಗಳಲ್ಲಿ ಅಮ್ಮ ಅವರು ಸಂಸ್ಥೆಗಳನ್ನು ಸ್ಥಾಪಿಸಿ ಮತ್ತು ಉತ್ತೇಜಿಸಿದ ವಿವಿಧ ಆಯಾಮಗಳ ಕುರಿತು ಪ್ರಧಾನಮಂತ್ರಿ ಅವರು ಬೆಳಕು ಚೆಲ್ಲಿದರು. ಸ್ವಚ್ಛತಾ ಆಂದೋಲನ ದೇಶದಲ್ಲಿ ಆರಂಭವಾದಾಗ ಮತ್ತು ಅಮ್ಮ ಅವರು ಮೊದಲ ವ್ಯಕ್ತಿಯಾಗಿ ಮುಂದೆ ಬಂದು ಇದನ್ನು ಯಶಸ್ವಿಗೊಳಿಸಲು ಕಾರಣರಾದರು. ಅಮ್ಮ ಅವರು ಗಂಗಾ ನದಿ ಪಾತ್ರದಲ್ಲಿ ಸ್ವಚ್ಛತೆಯನ್ನು ಉತ್ತೇಜಿಸಲು ಮತ್ತು ಶೌಚಾಲಯ ನಿರ್ಮಿಸಲು 100 ಕೋಟಿ ರೂಪಾಯಿಯನ್ನು ದೇಣಿಗೆಯಾಗಿ ನೀಡಿದ್ದಾಗಿ ಪ್ರಧಾನಮಂತ್ರಿ ಶ್ರೀ ಮೋದಿ ಅವರು ಮಾಹಿತಿ ನೀಡಿದರು. “ಅಮ್ಮ ಅವರಿಗೆ ಜಗತ್ತಿನಾದ್ಯಂತ ಬೆಂಬಲಿಗರಿದ್ದು, ಅವರು ಭಾರತದ ವಿಶ್ವಾಸಾರ್ಹತೆ ಮತ್ತು ವರ್ಚಸ್ಸನ್ನು ಸದಾ ಕಾಲ ಬಲಗೊಳಿಸಿದ್ದಾರೆ. ಸ್ಪೂರ್ತಿ ತುಂಬಾ ದೊಡ್ಡದಾಗಿದ್ದಾಗ ಪ್ರಯತ್ನಗಳು ಸಹ ದೊಡ್ಡದಾಗಿರುತ್ತವೆ” ಎಂದು ಹೇಳಿದರು.
“ಸಾಂಕ್ರಾಮಿಕದ ನಂತರ ಜಗತ್ತಿನಲ್ಲಿಂದು ಸ್ವೀಕಾರಾರ್ಹವಾಗಿರುವ, ಪ್ರತಿಬಿಂಬಿತವಾಗಿರುವ ಮಾನವ ಕೇಂದ್ರಿತ ಅಭಿವೃದ್ಧಿ ವಿಧಾನವೇ ಅಮ್ಮ”. ದಿವ್ಯಾಂಗರನ್ನು ಸಬಲೀಕರಣಗೊಳಿಸಲು ಮತ್ತು ಅವಕಾಶ ವಂಚಿತರಿಗೆ ಆದ್ಯತೆ ನೀಡಲು ಅಮ್ಮ ಸದಾ ಕಾಲ ಮಾನವೀಯ ತ್ಯಾಗದಲ್ಲಿ ನಿರತರಾಗಿದ್ದಾರೆ. ಸಂಸತ್ತಿನಲ್ಲಿ ಇತ್ತೀಚೆಗೆ ನಾರಿಶಕ್ತಿ ವಂದನ್ ಅಧಿನಿಯಮ ಸುಗಮವಾಗಿ ಅಂಗೀಕರವಾದ ಬಗ್ಗೆ ಉಲ್ಲೇಖಿಸಿದ ಪ್ರಧಾನಮಂತ್ರಿಯವರು, ಅಮ್ಮ ಅವರಂತಹ ಸ್ಫೂರ್ತಿದಾಯಕ ವ್ಯಕ್ತಿತ್ವದಿಂದ ಭಾರತ ಮಹಿಳಾ ಆಧಾರಿತ ಅಭ್ಯುದಯದತ್ತ ಸಾಗುತ್ತಿದೆ ಎಂದರು. ಅಮ್ಮ ಅವರ ಅನುಯಾಯಿಗಳು ಇದೇ ರೀತಿಯಲ್ಲಿ ಜಗತ್ತಿನ ಶಾಂತಿ ಮತ್ತು ಪ್ರಗತಿಗಾಗಿ ತಮ್ಮ ಕೆಲಸವನ್ನು ಮುಂದುವರೆಸಲಿದ್ದಾರೆ ಎಂದು ಪ್ರಧಾನಮಂತ್ರಿ ಅವರು ವಿಶ್ವಾಸ ವ್ಯಕ್ತಪಡಿಸಿ ತಮ್ಮ ಭಾಷಣ ಪೂರ್ಣಗೊಳಿಸಿದರು.
***
Addressing a programme to mark the 70th birthday of Mata @Amritanandamayi Ji. Praying for her long and healthy life. https://t.co/FsDxDNFwwD
— Narendra Modi (@narendramodi) October 3, 2023