Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಏಷ್ಯನ್ ಕ್ರೀಡಾಕೂಟ 2022 ರಲ್ಲಿ 50 ಮೀಟರ್ ರೈಫಲ್ 3ಪಿ ಯಲ್ಲಿ ಪುರುಷರ ತಂಡ ಗೆದ್ದ ಚಿನ್ನದ ಪದಕವನ್ನು ಸಂಭ್ರಮಿಸಿದ ಪ್ರಧಾನಮಂತ್ರಿಯವರು


ಹ್ಯಾಂಗ್‌ಝೌನಲ್ಲಿ ನಡೆದ 2022 ರ ಏಷ್ಯನ್ ಕ್ರೀಡಾಕೂಟದಲ್ಲಿ ಪುರುಷರ 50 ಮೀಟರ್ ರೈಫಲ್ 3Ps ತಂಡ ಸ್ಪರ್ಧೆಯಲ್ಲಿ ವಿಶ್ವದಾಖಲೆ ನಿರ್ಮಿಸಿ ಚಿನ್ನದ ಪದಕ ಗೆದ್ದ ಸ್ವಪ್ನಿಲ್ ಕುಸಾಲೆ, ಐಶ್ವರಿ ಪ್ರತಾಪ್ ಸಿಂಗ್ ತೋಮರ್ ಮತ್ತು ಅಖಿಲ್ ಶೆರಾನ್ ಅವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಅಭಿನಂದಿಸಿದ್ದಾರೆ.

ಪ್ರಧಾನಮಂತ್ರಿಯವರು X ನಲ್ಲಿ ಹೀಗೆ ಪೋಸ್ಟ್ ಮಾಡಿದ್ದಾರೆ:

 “ಅದ್ಭುತವಾದ ಗೆಲುವು, ಪ್ರತಿಷ್ಠಿತ ಚಿನ್ನ ಮತ್ತು ವಿಶ್ವ ದಾಖಲೆ! ಏಷ್ಯನ್ ಕ್ರೀಡಾಕೂಟದಲ್ಲಿ ಪುರುಷರ 50 ಮೀಟರ್ ರೈಫಲ್ 3Ps ತಂಡ ಸ್ಪರ್ಧೆಯಲ್ಲಿ ವಿಜಯಶಾಲಿಯಾದ ಸ್ವಪ್ನಿಲ್ ಕುಸಾಲೆ, ಐಶ್ವರಿ ಪ್ರತಾಪ್ ಸಿಂಗ್ ತೋಮರ್ ಮತ್ತು ಅಖಿಲ್ ಶೆರಾನ್ ಅವರಿಗೆ ಅಭಿನಂದನೆಗಳು. ಅವರು ತಮ್ಮ ಧೃಡ ಸಂಕಲ್ಪ ಮತ್ತು ಜತೆಯಾಗಿ ಕೆಲಸ ಮಾಡುವಲ್ಲಿ  ಮೆರೆದಿದ್ದಾರೆ.”

                         *