Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

​​​​​​​ಮಹಿಳೆಯರ ವುಶು ಸಂಡಾ 60 ಕೆಜಿ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದ ರೋಶಿಬಿನಾ ದೇವಿ ನವೋರೆಮ್ ಅವರನ್ನು ಅಭಿನಂದಿಸಿದ ಪ್ರಧಾನಮಂತ್ರಿ


ಏಷ್ಯನ್ ಕ್ರೀಡಾಕೂಟದಲ್ಲಿ ಮಹಿಳೆಯರ ವುಶು ಸಂಡಾ 60 ಕೆಜಿ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದ ರೋಶಿಬಿನಾ ದೇವಿ ನವೋರೆಮ್ ಅವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಶ್ಲಾಘಿಸಿದ್ದಾರೆ.

ಪ್ರಧಾನಮಂತ್ರಿಯವರು ತಮ್ಮ ಎಕ್ಸ್ ಖಾತೆಯಲ್ಲಿ ಈ ರೀತಿ ಬರೆದಿದ್ದಾರೆ;

“ನಮ್ಮ ಸಮರ್ಪಿತ ಮತ್ತು ತನ್ಮಯತೆಯ ಪ್ರತಿಭಾವಂತ ಕ್ರೀಡಾಪಟು ರೋಶಿಬಿನಾ ದೇವಿ ನವೋರೆಮ್ ಅವರು ಮಹಿಳೆಯರ ವುಶು ಸಂಡಾ 60 ಕೆಜಿಯಲ್ಲಿ ಬೆಳ್ಳಿ ಪದಕವನ್ನು ಗೆದ್ದಿದ್ದಾರೆ. ಅವರು, ಅಸಾಧಾರಣ ಪ್ರತಿಭೆ ಮತ್ತು ಕ್ರೀಡಾ ಸ್ಪರ್ಧೆಯಲ್ಲಿ ಶ್ರೇಷ್ಠತೆಯ ನಿರಂತರ ಅನ್ವೇಷಣೆಯನ್ನು ಪ್ರದರ್ಶಿಸಿದ್ದಾರೆ. ಅವರ ಶಿಸ್ತು ಮತ್ತು ಸಂಕಲ್ಪ ಕೂಡ ಮೆಚ್ಚುವಂತದ್ದು. ಅವರಿಗೆ ಅಭಿನಂದನೆಗಳು. ”

 

*********