Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಡಾ. ಎಂ.ಎಸ್.ಸ್ವಾಮಿನಾಥನ್ ಅವರ ನಿಧನಕ್ಕೆ ಸಂತಾಪ ಸೂಚಿಸಿದ ಪ್ರಧಾನಮಂತ್ರಿಯವರು


ಖ್ಯಾತ ಕೃಷಿ ವಿಜ್ಞಾನಿ ಡಾ. ಎಂ.ಎಸ್.ಸ್ವಾಮಿನಾಥನ್ ಅವರ ನಿಧನದ ಬಗ್ಗೆ ಸಂತಾಪ ಸೂಚಿಸಿದ, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು “ಕೃಷಿಯಲ್ಲಿ ಅವರ ಅವಿಸ್ಮರಣೀಯ ಕೈಂಕರ್ಯ ಲಕ್ಷಾಂತರ ಜನರ ಜೀವನವನ್ನು ಪರಿವರ್ತಿಸಿದೆ ಮತ್ತು ನಮ್ಮ ರಾಷ್ಟ್ರದ ಆಹಾರ ಭದ್ರತೆಯನ್ನು ಖಾತ್ರಿಪಡಿಸಿದೆ.” ಎಂದರು  

ಎಕ್ಸ್ ನಲ್ಲಿ ಪ್ರಧಾನಮಂತ್ರಿಯವರು ಹೀಗೆ ಪೋಸ್ಟ್ ಮಾಡಿದ್ದಾರೆ: 

“ಡಾ. ಎಂ.ಎಸ್. ಸ್ವಾಮಿನಾಥನ್ ಅವರ ನಿಧನ ವಾರ್ತೆಯಿಂದ ತೀವ್ರ ದುಃಖವಾಗಿದೆ. ನಮ್ಮ ರಾಷ್ಟ್ರದ ಇತಿಹಾಸದಲ್ಲಿ ಅತ್ಯಂತ ಕ್ಲಿಷ್ಟ ಪರಿಸ್ಥಿತಿಯಲ್ಲಿ, ಅವರ ಕೃಷಿ ಕ್ಷೇತ್ರದ ಅದ್ಭುತ ಕೆಲಸ ಲಕ್ಷಾಂತರ ಜನರ ಜೀವನವನ್ನು ಪರಿವರ್ತಿಸಿದೆ ಮತ್ತು ದೇಶದ ಆಹಾರ ಭದ್ರತೆಯನ್ನು ಖಾತ್ರಿಪಡಿಸಿದೆ.”

ಕೃಷಿಗೆ ತಾವು ನೀಡಿದ ಕ್ರಾಂತಿಕಾರಿ ಕೊಡುಗೆಗಳಲ್ಲದೆ, ಡಾ. ಸ್ವಾಮಿನಾಥನ್ ಅವರು ನಾವೀನ್ಯತೆಯ ಶಕ್ತಿಕೇಂದ್ರವಾಗಿದ್ದರು  ಮತ್ತು ಅನೇಕರಿಗೆ ಮಾರ್ಗದರ್ಶಕರಾಗಿ ಪ್ರತಿಭೆಗಳನ್ನು ಪೋಷಿಸಿದ್ದರು. ಸಂಶೋಧನೆ ಮತ್ತು ಮಾರ್ಗದರ್ಶನಕ್ಕಾಗಿ ಅವರ ಅಚಲವಾದ ಬದ್ಧತೆಯು ಅಸಂಖ್ಯಾತ ವಿಜ್ಞಾನಿಗಳು ಮತ್ತು ಆವಿಷ್ಕಾರಕರ ಮನದಲ್ಲಿ ಅಚ್ಚಳಿಯದೇ ಉಳಿದಿದೆ. 

ಡಾ. ಸ್ವಾಮಿನಾಥನ್ ಅವರೊಂದಿಗಿನ ನನ್ನ ಸಂಭಾಷಣೆಗಳನ್ನು ನಾನು ಎಂದಿಗೂ  ಮರೆಯಲಾಗದು. ಭಾರತದ ಪ್ರಗತಿಯನ್ನು ಕಾಣುವ ಅವರ ಉತ್ಸಾಹ ಆದರ್ಶಪ್ರಾಯವಾಗಿತ್ತು.

ಅವರ ಜೀವನ ಮತ್ತು ಕೆಲಸ ಮುಂದಿನ ಪೀಳಿಗೆಗಳಿಗೆ ಸ್ಫೂರ್ತಿ ನೀಡಲಿದೆ. ಅವರ ಕುಟುಂಬ ಮತ್ತು ಅಭಿಮಾನಿಗಳಿಗೆ ಭಗವಂತ ದುಖಃ ಭರಿಸುವ ಶಕ್ತಿ ನೀಡಲಿ. ಓಂ ಶಾಂತಿ.”

***