Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಜಾಗತಿಕ ಜೈವಿಕ ಇಂಧನ ಒಕ್ಕೂಟ (ಜಿಬಿಎ) ಆರಂಭ

ಜಾಗತಿಕ ಜೈವಿಕ ಇಂಧನ ಒಕ್ಕೂಟ (ಜಿಬಿಎ) ಆರಂಭ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸಿಂಗಾಪುರ, ಬಾಂಗ್ಲಾದೇಶ, ಇಟಲಿ, ಯುಎಸ್ಎ, ಬ್ರೆಜಿಲ್, ಅರ್ಜೆಂಟೀನಾ, ಮಾರಿಷಸ್ ಮತ್ತು ಯುಎಇ ನಾಯಕರೊಂದಿಗೆ 2023ರ ಸೆಪ್ಟೆಂಬರ್ 9ರಂದು ನವದೆಹಲಿಯಲ್ಲಿ ನಡೆದ ಜಿ20 ಶೃಂಗಸಭೆಯ ನೇಪಥ್ಯದಲ್ಲಿ ಜಾಗತಿಕ ಜೈವಿಕ ಇಂಧನ ಒಕ್ಕೂಟಕ್ಕೆ ಚಾಲನೆ ನೀಡಿದರು.

ಜಾಗತಿಕ ಜೈವಿಕ ಇಂಧನ ಒಕ್ಕೂಟ (ಜಿಬಿಎ) ಜಿ 20 ಅಧ್ಯಕ್ಷರಾಗಿ ಭಾರತದ ಉಪಕ್ರಮವಾಗಿದೆ. ತಂತ್ರಜ್ಞಾನದ ಪ್ರಗತಿಯನ್ನು ಸುಗಮಗೊಳಿಸುವ ಮೂಲಕ, ಸುಸ್ಥಿರ ಜೈವಿಕ ಇಂಧನಗಳ ಬಳಕೆಯನ್ನು ತೀವ್ರಗೊಳಿಸುವ ಮೂಲಕ, ದೃಢವಾದ ಮಾನದಂಡವನ್ನು ರೂಪಿಸುವ ಮೂಲಕ ಮತ್ತು ವ್ಯಾಪಕ ಶ್ರೇಣಿಯ ಮಧ್ಯಸ್ಥಗಾರರ ಭಾಗವಹಿಸುವಿಕೆಯ ಮೂಲಕ ಪ್ರಮಾಣೀಕರಣವನ್ನು ರೂಪಿಸುವ ಮೂಲಕ ಜೈವಿಕ ಇಂಧನಗಳ ಜಾಗತಿಕ ಬಳಕೆಯನ್ನು ತ್ವರಿತಗೊಳಿಸಲು ಈ ಮೈತ್ರಿ ಉದ್ದೇಶಿಸಿದೆ. ಈ ಮೈತ್ರಿಯು ಜ್ಞಾನದ ಕೇಂದ್ರ ಭಂಡಾರವಾಗಿ ಮತ್ತು ತಜ್ಞರ ಕೇಂದ್ರವಾಗಿಯೂ ಕಾರ್ಯನಿರ್ವಹಿಸುತ್ತದೆ. ಜೈವಿಕ ಇಂಧನಗಳ ಪ್ರಗತಿ ಮತ್ತು ವ್ಯಾಪಕ ಅಳವಡಿಕೆಗಾಗಿ ಜಾಗತಿಕ ಸಹಯೋಗವನ್ನು ಬೆಳೆಸುವ ಮೂಲಕ ವೇಗವರ್ಧಕ ವೇದಿಕೆಯಾಗಿ ಕಾರ್ಯನಿರ್ವಹಿಸುವ ಗುರಿಯನ್ನು ಜಿಬಿಎ ಹೊಂದಿದೆ.

 

***