Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಜಿ20 ರಾಷ್ಟ್ರಗಳ ನಾಯಕರು ರಾಜ್ ಘಾಟ್ ನಲ್ಲಿ ಮಹಾತ್ಮ ಗಾಂಧಿ ಅವರಿಗೆ ಗೌರವ ನಮನ ಸಲ್ಲಿಸಿದರು

ಜಿ20 ರಾಷ್ಟ್ರಗಳ ನಾಯಕರು ರಾಜ್ ಘಾಟ್ ನಲ್ಲಿ ಮಹಾತ್ಮ ಗಾಂಧಿ ಅವರಿಗೆ ಗೌರವ ನಮನ ಸಲ್ಲಿಸಿದರು


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಜಿ20 ಸದಸ್ಯ ರಾಷ್ಟ್ರಗಳ ನಾಯಕರೊಂದಿಗೆ ಇಂದು ರಾಜ್ ಘಾಟ್ ನಲ್ಲಿ ಮಹಾತ್ಮ ಗಾಂಧಿ ಅವರಿಗೆ ಗೌರವ ನಮನ ಸಲ್ಲಿಸಿದರು. ಗಾಂಧೀಜಿಯವರ ಕಾಲಾತೀತ ಆದರ್ಶಗಳು ಸಾಮರಸ್ಯ, ಅಂತರ್ಗತ ಮತ್ತು ಸಮೃದ್ಧ ಜಾಗತಿಕ ಭವಿಷ್ಯಕ್ಕಾಗಿ ಸಾಮೂಹಿಕ ದೃಷ್ಟಿಕೋನಕ್ಕೆ ಮಾರ್ಗದರ್ಶನ ನೀಡುತ್ತವೆ ಎಂದು ಪ್ರಧಾನಮಂತ್ರಿ ಅವರು ಹೇಳಿದರು.

ಪ್ರಧಾನಮಂತ್ರಿ ಅವರು ತಮ್ಮ ಎಕ್ಸ್‌ ಖಾತೆಯಲ್ಲಿ ಈ ರೀತಿ ಸಂದೇಶ ಹೇಳಿದ್ದಾರೆ;

 “ಶಾಂತಿ, ಸೇವೆ, ಸಹಾನುಭೂತಿ ಮತ್ತು ಅಹಿಂಸೆಯ ದಾರಿದೀಪವಾಗಿರುವ ರಾಜ್ ಘಾಟ್ ನಲ್ಲಿ, ಜಿ 20 ಕುಟುಂಬವು ಮಹಾತ್ಮ ಗಾಂಧಿಯವರಿಗೆ ಗೌರವ ನಮನ ಸಲ್ಲಿಸಿದೆ.

ವೈವಿಧ್ಯಮಯ ರಾಷ್ಟ್ರಗಳು ಒಮ್ಮುಖವಾಗುತ್ತಿದ್ದಂತೆ, ಗಾಂಧೀಜಿಯವರ ಕಾಲಾತೀತ ಆದರ್ಶಗಳು ಸಾಮರಸ್ಯ, ಅಂತರ್ಗತ ಮತ್ತು ಸಮೃದ್ಧ ಜಾಗತಿಕ ಭವಿಷ್ಯಕ್ಕಾಗಿ ನಮ್ಮ ಸಾಮೂಹಿಕ ದೃಷ್ಟಿಕೋನಕ್ಕೆ ಮಾರ್ಗದರ್ಶನ ನೀಡುತ್ತವೆ.”

ಪ್ರಧಾನಮಂತ್ರಿಗಳ ಕಾರ್ಯಾಲಯವು ಎಕ್ಸ್‌ ಖಾತೆಯಲ್ಲಿ ಈ ರೀತಿ ಸಂದೇಶ ತಿಳಿಸಿದೆ;

 “ಜಿ20 ಕುಟುಂಬವು ಬಾಪು ಅವರಿಗೆ ಗೌರವ ಸಲ್ಲಿಸಿದೆ. ವಿಶ್ವ ನಾಯಕರು ರಾಜ್ ಘಾಟ್ಗೆ  ಭೇಟಿ ನೀಡಿ ಮಹಾತ್ಮ ಗಾಂಧಿಯವರ ಸಮಾಧಿಯಲ್ಲಿ ಶ್ರದ್ಧಾಂಜಲಿ ಸಲ್ಲಿಸಿದರು.

*****