Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಮಾರಿಷಸ್ ಪ್ರಧಾನಿ ಗೌರವಾನ್ವಿತ ಪ್ರವಿಂದ್ ಕುಮಾರ್ ಜುಗ್ನೌತ್ ಅವರನ್ನು ಭೇಟಿ ಮಾಡಿದ ಪ್ರಧಾನಮಂತ್ರಿ

ಮಾರಿಷಸ್ ಪ್ರಧಾನಿ ಗೌರವಾನ್ವಿತ ಪ್ರವಿಂದ್ ಕುಮಾರ್ ಜುಗ್ನೌತ್ ಅವರನ್ನು ಭೇಟಿ ಮಾಡಿದ ಪ್ರಧಾನಮಂತ್ರಿ


ದೆಹಲಿಯಲ್ಲಿ ನಡೆದ ಜಿ 20 ಶೃಂಗಸಭೆಯ ಹೊರತಾಗಿ, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2023ರ ಸೆಪ್ಟೆಂಬರ್ 8ರಂದು ಮಾರಿಷಸ್ ಪ್ರಧಾನಿ ಗೌರವಾನ್ವಿತ ಶ್ರೀ ಪ್ರವಿಂದ್ ಕುಮಾರ್ ಜುಗ್ನೌತ್ ಅವರನ್ನು ಭೇಟಿ ಮಾಡಿದರು. 

ಜಿ-20 ಶೃಂಗಸಭೆಯಲ್ಲಿ ‘ಅತಿಥಿ ರಾಷ್ಟ್ರ’ವಾಗಿ ಪಾಲ್ಗೊಳ್ಳಲು ಮಾರಿಷಸ್ ಗೆ ವಿಶೇಷ ಆಹ್ವಾನ ನೀಡಿದ್ದಕ್ಕಾಗಿ ಪ್ರಧಾನಮಂತ್ರಿ ಜುಗ್ನೌತ್ ಅವರು ಪ್ರಧಾನಮಂತ್ರಿ ಅವರಿಗೆ ಧನ್ಯವಾದ ಅರ್ಪಿಸಿದರು. ಭಾರತೀಯ ಅಧ್ಯಕ್ಷತೆಯಲ್ಲಿ ನಡೆದ ಜಿ 20 ಯ ವಿವಿಧ ಕಾರ್ಯ ಗುಂಪುಗಳು ಮತ್ತು ಸಚಿವರ ಸಭೆಗಳಲ್ಲಿ ಮಾರಿಷಸ್ ಸಕ್ರಿಯವಾಗಿ ಭಾಗವಹಿಸುತ್ತಿರುವುದನ್ನು ಪ್ರಧಾನಿ ಶ್ಲಾಘಿಸಿದರು.

ಉಭಯ ದೇಶಗಳ ನಡುವಿನ ರಾಜತಾಂತ್ರಿಕ ಸಂಬಂಧಗಳ 75 ನೇ ವಾರ್ಷಿಕೋತ್ಸವದ ಸ್ಮರಣಾರ್ಥ ಜಿ 20 ಕಾರ್ಯಕ್ರಮಗಳ ಬಗ್ಗೆ ಇಬ್ಬರೂ ನಾಯಕರು ಸಂತಸ ವ್ಯಕ್ತಪಡಿಸಿದರು. ಉಭಯ ನಾಯಕರು ಭಾರತ ಮತ್ತು ಮಾರಿಷಸ್ ನಡುವಿನ ಬಹುಮುಖಿ ದ್ವಿಪಕ್ಷೀಯ ಸಹಕಾರವನ್ನು ಪರಿಶೀಲಿಸಿದರು. ಕಳೆದ ವರ್ಷದಲ್ಲಿ 30 ಕ್ಕೂ ಹೆಚ್ಚು ನಿಯೋಗ ಭೇಟಿಗಳು ಮತ್ತು 23 ದ್ವಿಪಕ್ಷೀಯ ಒಪ್ಪಂದಗಳಿಗೆ ಸಹಿ ಹಾಕುವ ಮೂಲಕ ದ್ವಿಪಕ್ಷೀಯ ವಿನಿಮಯದ ತ್ವರಿತ ವೇಗವನ್ನು ಅವರು ಗಮನಿಸಿದರು.

ಪ್ರಧಾನಮಂತ್ರಿ ಜುಗ್ನೌತ್ ಅವರು ಚಂದ್ರಯಾನ -3 ಮಿಷನ್ ನ ಯಶಸ್ಸಿಗಾಗಿ ಪ್ರಧಾನಮಂತ್ರಿ ಅವರನ್ನು ಅಭಿನಂದಿಸಿದರು ಮತ್ತು ಬಾಹ್ಯಾಕಾಶ ಕ್ಷೇತ್ರದಲ್ಲಿ ಎರಡೂ ಕಡೆಗಳ ನಡುವೆ ಹೆಚ್ಚಿನ ಸಹಕಾರವನ್ನು ಎದುರು ನೋಡಲಾಯಿತು.

****