ದಕ್ಷಿಣ ಆಫ್ರಿಕಾದ ಜೋಹಾನ್ಸ್‌ಬರ್ಗ್‌ನಲ್ಲಿ ಆಗಸ್ಟ್ 23ರಂದು ನಡೆದ 15ನೇ “ಬ್ರಿಕ್ಸ್” ಶೃಂಗಸಭೆಯಲ್ಲಿ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಪಾಲ್ಗೊಂಡಿದ್ದರು.
ಜಾಗತಿಕ ಆರ್ಥಿಕತೆಯ ಚೇತರಿಕೆ, ಆಫ್ರಿಕಾ ಹಾಗೂ ಜಗತ್ತಿನ ದಕ್ಷಿಣ ರಾಷ್ಟ್ರಗಳ ನಡುವಿನ ಪಾಲುದಾರಿಕೆ ಕುರಿತಂತೆ ನಾಯಕರು ರಚನಾತ್ಮಕ ಸಂವಾದ ನಡೆಸುವ ಜತೆಗೆ “ಬ್ರಿಕ್ಸ್”ನ ಕಾರ್ಯಸೂಚಿಯ ಈವರೆಗಿನ ಪ್ರಗತಿ ಬಗ್ಗೆಯೂ ಪರಿಶೀಲನೆ ನಡೆಸಿದರು.
ಪ್ರಧಾನ ಮಂತ್ರಿಗಳು ತಮ್ಮ ಭಾಷಣದಲ್ಲಿ “ಬ್ರಿಕ್ಸ್”ನ ಬಲವರ್ಧನೆಗೆ ಕರೆ ನೀಡಿ ಈ ರೀತಿ ಅರ್ಥೈಸಿದರು:
ಬಿ – ಅಡೆತಡೆಗಳ ತೆರವು- ನಿವಾರಣೆ
ಆರ್ – ಆರ್ಥಿಕತೆಯ ಪುನಶ್ಚೇತನ
ಐ – ನಾವೀನ್ಯತೆಗೆ ಸ್ಪೂರ್ತಿ- ಪ್ರೇರಣೆ
ಸಿ – ಅವಕಾಶ- ಅನ್ವೇಷಣೆಗಳ ಸೃಷ್ಟಿ
ಎಸ್ – ಭವಿಷ್ಯಕ್ಕೆ ಹೊಸ ರೂಪ
ಪ್ರಧಾನ ಮಂತ್ರಿಗಳು ಆಗಾಗ್ಗೆ ಪ್ರಸ್ತಾಪಿಸಿ ಮಹತ್ವದ ವಿಚಾರಗಳು ಹೀಗಿವೆ:
* ಯುಎನ್‌ಎಸ್‌ಸಿ ಸುಧಾರಣೆಗಳಿಗಾಗಿ ನಿರ್ದಿಷ್ಟ ಕಾಲಮಿತಿ ಗೊತ್ತುಪಡಿಸಲು ಕರೆ
* ಬಹುಮುಖಿ ಹಣಕಾಸು ಸಂಸ್ಥೆಗಳ ಸುಧಾರಣೆಗೆ ಕರೆ
* ವಿಶ್ವ ವ್ಯಾಪಾರ ಸಂಸ್ಥೆ (ಡಬ್ಲ್ಯೂಟಿಒ) ಸುಧಾರಣೆಗೆ ಕರೆ
* “ಬ್ರಿಕ್ಸ್”ನ ವಿಸ್ತರಣೆಗಾಗಿ ಒಮ್ಮತದ ಪ್ರಯತ್ನಕ್ಕೆ ಉತ್ತೇಜನ
* “ಬ್ರಿಕ್ಸ್” ಏಕತೆಯ ಜಾಗತಿಕ ಸಂದೇಶ ಸಾರುತ್ತದೆಯೇ ಹೊರತು ಧ್ರುವೀಕರಣವನ್ನಲ್ಲ ಎಂದು ಜಾಹೀರುಗೊಳಿಸುವಂತೆ ಆಗ್ರಹ
* “ಬ್ರಿಕ್ಸ್”ನ ಬಾಹ್ಯಾಕಾಶ ಪರಿಶೋಧನಾ ಒಕ್ಕೂಟ ರಚನೆಯ ಪ್ರಸ್ತಾಪ
* ಭಾರತೀಯ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ (ಡಿಪಿಐ) ಬಳಕೆ- “ಬ್ರಿಕ್ಸ್”ನ ಪಾಲುದಾರರು ಭಾರತೀಯ ಸ್ಟ್ಯಾಕ್ ಬಳಕೆಗೆ ಕರೆ
* “ಬ್ರಿಕ್ಸ್” ರಾಷ್ಟ್ರಗಳ ನಡುವೆ ಸುಧಾರಿತ ಕೌಶಲ್ಯ ಮ್ಯಾಪಿಂಗ್, ಕೌಶಲ್ಯ ಮತ್ತು ಚಲನಶೀಲತೆ ವಿನಿಮಯಕ್ಕೆ ಉತ್ತೇಜನ
* ʼಅಂತಾರಾಷ್ಟ್ರೀಯ ದೊಡ್ಡ ಬೆಕ್ಕು ಮೈತ್ರಿʼ (ಇಂಟರ್‌ನ್ಯಾಷನಲ್ ಬಿಗ್ ಕ್ಯಾಟ್ ಅಲಯನ್ಸ್- ಐಬಿಸಿಎ) ಅಡಿಯಲ್ಲಿ ದೊಡ್ಡ ಬೆಕ್ಕುಗಳ ರಕ್ಷಣೆಗಾಗಿ “ಬ್ರಿಕ್ಸ್” ರಾಷ್ಟ್ರಗಳ ಜಂಟಿ ಸಹಯೋಗದ ಪ್ರಯತ್ನದ ಪ್ರಸ್ತಾಪ
* “ಬ್ರಿಕ್ಸ್” ರಾಷ್ಟ್ರಗಳ ನಡುವೆ ಸಾಂಪ್ರದಾಯಿಕ ಔಷಧ ಭಂಡಾರ ಸ್ಥಾಪನೆ ಪ್ರಸ್ತಾಪ
* ಎಯು ಜಿ-20 ಕಾಯಂ ಸದಸ್ಯತ್ವವನ್ನು ಬೆಂಬಲಿಸಲು “ಬ್ರಿಕ್ಸ್” ಪಾಲುದಾರರಿಗೆ
*****
My remarks at Plenary Session I of BRICS Summit in Johannesburg. https://t.co/JqJPCv045R
— Narendra Modi (@narendramodi) August 23, 2023