Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಬ್ರಿಕ್ಸ್ ವಾಣಿಜ್ಯ ವೇದಿಕೆ ನಾಯಕರ ಸಂವಾದದಲ್ಲಿ ಪ್ರಧಾನಮಂತ್ರಿಯವರ ಭಾಗವಹಿಸುವಿಕೆ

ಬ್ರಿಕ್ಸ್ ವಾಣಿಜ್ಯ ವೇದಿಕೆ ನಾಯಕರ ಸಂವಾದದಲ್ಲಿ ಪ್ರಧಾನಮಂತ್ರಿಯವರ ಭಾಗವಹಿಸುವಿಕೆ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು 22 ಆಗಸ್ಟ್ 2023 ರಂದು ಜೋಹಾನ್ಸ್ಬರ್ಗ್ನಲ್ಲಿ ಬ್ರಿಕ್ಸ್ ವಾಣಿಜ್ಯ ವೇದಿಕೆಯ ನಾಯಕರ ಸಂವಾದದಲ್ಲಿ ಭಾಗವಹಿಸಿದರು.

ಬ್ರಿಕ್ಸ್ ವಾಣಿಜ್ಯ ವೇದಿಕೆಯ ಚರ್ಚೆಗಳ ಕುರಿತು ನಾಯಕರಿಗೆ ಮಾಹಿತಿ ನೀಡಲಾಯಿತು.

ಸಾಮಾಜಿಕ ಮತ್ತು ಆರ್ಥಿಕ ಸವಾಲುಗಳನ್ನು ಎದುರಿಸಲು ತಂತ್ರಜ್ಞಾನ ಆಧಾರಿತ ಪರಿಹಾರಗಳು ಸೇರಿದಂತೆ ವ್ಯಾಪಾರ ವಹಿವಾಟುಗಳಿಗೆ ಅನುಕೂಲವಾಗುವಂತೆ ಭಾರತವು ಅನುಷ್ಠಾನಗೊಳಿಸುತ್ತಿರುವ ವಿವಿಧ ಸುಧಾರಣೆಗಳ ಕುರಿತು ಪ್ರಧಾನಮಂತ್ರಿಯವರು ಮುಖ್ಯವಾಗಿ ಮಾತನಾಡಿದರು. ಭಾರತದ ಅಭಿವೃದ್ಧಿ ಪಯಣದಲ್ಲಿ ಪಾಲ್ಗೊಳ್ಳುವಂತೆ ಬ್ರಿಕ್ಸ್ ಉದ್ಯಮದ ಪ್ರಮುಖರನ್ನು ಪ್ರಧಾನಮಂತ್ರಿಯವರು ಆಹ್ವಾನಿಸಿದರು.

ಚೇತರಿಸಿಕೊಳ್ಳುವ ಮತ್ತು ಅಂತರ್ಗತ ಪೂರೈಕೆ ಸರಪಳಿಗಳ ಪ್ರಾಮುಖ್ಯತೆಯನ್ನು ಕೋವಿಡ್ ಎತ್ತಿ ತೋರಿಸಿದೆ. ಇದಕ್ಕೆ ಪರಸ್ಪರ ನಂಬಿಕೆ, ಪಾರದರ್ಶಕತೆ ಮುಖ್ಯ ಎಂದು ಪ್ರಧಾನಮಂತ್ರಿ ಯವರು ಹೇಳಿದರು. 

 ಜಾಗತಿಕ ಯೋಗಕ್ಷೇಮಕ್ಕೆ, ವಿಶೇಷವಾಗಿ ಪ್ರಪಂಚದ ದಕ್ಷಿಣ ಭಾಗದ ಯೋಗಕ್ಷೇಮಕ್ಕೆ ಬ್ರಿಕ್ಸ್ ಒಟ್ಟಾಗಿ ಮಹತ್ವದ ಕೊಡುಗೆಗಳನ್ನು ನೀಡಬಹುದು ಎಂದು ಅವರು ಹೇಳಿದರು.

****