Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ನಗರ ಬಸ್ ಸಂಚಾರ ಕಾರ್ಯನಿರ್ವಹಣೆ ವರ್ಧಿಸಲು “ಪಿಎಂ-ಇ ಬಸ್ ಸೇವೆ” ಗೆ ಸಚಿವ ಸಂಪುಟ ಅನುಮೋದನೆ; ಸಂಘಟಿತ ಬಸ್ ಸೇವೆ ಇಲ್ಲದ ನಗರಗಳಿಗೆ ಆದ್ಯತೆ


ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ, ಸಾರ್ವಜನಿಕ-ಖಾಸಗಿ ಸಹಭಾಗಿತ್ವ(PPP) ಮಾದರಿಯಲ್ಲಿ 10,000 ಇ-ಬಸ್‌ಗಳ ಮೂಲಕ ನಗರ ಬಸ್ ಕಾರ್ಯಾಚರಣೆಯನ್ನು ಹೆಚ್ಚಿಸಲು “ಪಿಎಂ-ಇಬಸ್ ಸೇವೆ” ಎಂಬ ಬಸ್ ಯೋಜನೆಗೆ ಅನುಮೋದನೆ ನೀಡಿದೆ. ಈ ಯೋಜನೆಗೆ ಅಂದಾಜು 57,613 ಕೋಟಿ ರೂಪಾಯಿ ವೆಚ್ಚ ಹೊಂದಿದ್ದು, ಅದರಲ್ಲಿ 20,000 ಕೋಟಿ ರೂಪಾಯಿ ನೆರವನ್ನು ಕೇಂದ್ರ ಸರ್ಕಾರ ಒದಗಿಸುತ್ತದೆ. ಈ ಯೋಜನೆಯಡಿ 10 ವರ್ಷಗಳ ಕಾಲ ಬಸ್ ಕಾರ್ಯಾಚರಣೆ ನಡೆಸಲಾಗುತ್ತದೆ. 

ತಲುಪದ ಕಡೆಗಳಿಗೆ ತಲುಪುವುದು: 

2011ರ ಜನಗಣತಿ ಪ್ರಕಾರ 3 ಲಕ್ಷ ಮತ್ತು ಅದಕ್ಕಿಂತ ಹೆಚ್ಚಿನ ಜನಸಂಖ್ಯೆ ಹೊಂದಿರುವ ನಗರಗಳಿಗೆ, ಕೇಂದ್ರಾಡಳಿತ ಪ್ರದೇಶಗಳು, ಈಶಾನ್ಯ ಪ್ರದೇಶ ಮತ್ತು ಗುಡ್ಡಗಾಡು ರಾಜ್ಯಗಳ ಎಲ್ಲಾ ರಾಜಧಾನಿಗಳಲ್ಲಿ ಇ-ಬಸ್ ಸಂಚಾರ ನಡೆಸಲಾಗುತ್ತದೆ. ಈ ಯೋಜನೆಯಡಿಯಲ್ಲಿ ಸಂಘಟಿತ ಬಸ್ ಸೇವೆ ಇಲ್ಲದ ನಗರಗಳಿಗೆ ಆದ್ಯತೆ ನೀಡಲಾಗುವುದು.

ನೇರ ಉದ್ಯೋಗ ಸೃಷ್ಟಿ:

ಈ ಯೋಜನೆಯಡಿ, ಸಿಟಿ ಬಸ್ ಕಾರ್ಯಾಚರಣೆಯಲ್ಲಿ ಸುಮಾರು 10,000 ಬಸ್‌ಗಳನ್ನು ನಿಯೋಜಿಸುವ ಮೂಲಕ 45,000 ದಿಂದ 55,000 ನೇರ ಉದ್ಯೋಗಗಳನ್ನು ಸೃಷ್ಟಿಸಬಹುದಾಗಿದೆ.

ಯೋಜನೆಯು ಎರಡು ವಿಭಾಗಗಳನ್ನು ಹೊಂದಿದೆ:

ವಿಭಾಗ ಎ – ಸಿಟಿ ಬಸ್ ಸೇವೆಗಳನ್ನು ಹೆಚ್ಚಿಸುವುದು:(169 ನಗರಗಳು)  ಅನುಮೋದಿತ ಬಸ್ ಯೋಜನೆಯು ಪಿಪಿಪಿ ಮಾದರಿಯಲ್ಲಿ 10,000 ಇ-ಬಸ್‌ಗಳೊಂದಿಗೆ ನಗರಗಳಲ್ಲಿ ಬಸ್ ಗಳ ಸಂಚಾರ ಸೇವೆಯನ್ನು ಹೆಚ್ಚಿಸುತ್ತದೆ.

ಅಸೋಸಿಯೇಟೆಡ್ ಇನ್ಫ್ರಾಸ್ಟ್ರಕ್ಚರ್ ಡಿಪೋ ಮೂಲಸೌಕರ್ಯಗಳ ಅಭಿವೃದ್ಧಿ / ಉನ್ನತೀಕರಣಕ್ಕೆ ಬೆಂಬಲ ನೀಡುತ್ತದೆ; ಮತ್ತು ಇ-ಬಸ್‌ಗಳಿಗೆ ಮೀಟರ್ ವಿದ್ಯುತ್ ಮೂಲಸೌಕರ್ಯ (ಸಬ್‌ಸ್ಟೇಷನ್ ಇತ್ಯಾದಿ) ರಚಿಸುವುದು.

ವಿಭಾಗ ಬಿ– ಹಸಿರು ನಗರ ಚಲನಶೀಲತೆ ಯೋಜನೆ (ಜಿಯುಎಂಐ):

(181 ನಗರಗಳು) ಈ ಯೋಜನೆಯು ಬಸ್ ಆದ್ಯತೆ, ಮೂಲಸೌಕರ್ಯ, ಬಹು ವಿಧಾನ ಅಂತರವಿನಿಮಯ ಸೌಲಭ್ಯಗಳು, ಎನ್‌ಸಿಎಂಸಿ ಆಧಾರಿತ ಸ್ವಯಂಚಾಲಿತ ಶುಲ್ಕ ಸಂಗ್ರಹ ವ್ಯವಸ್ಥೆಗಳು, ಚಾರ್ಜಿಂಗ್ ಮೂಲಸೌಕರ್ಯ ಮುಂತಾದ ಪರಿಸರ ಪೂರಕ ಉಪಕ್ರಮಗಳನ್ನು ಕಲ್ಪಿಸುತ್ತದೆ.

ಕಾರ್ಯನಿರ್ವಹಣೆಗೆ ಬೆಂಬಲ: ಯೋಜನೆಯಡಿಯಲ್ಲಿ, ರಾಜ್ಯಗಳು/ನಗರಗಳು ಬಸ್ ಸೇವೆಗಳನ್ನು ನಡೆಸಲು ಮತ್ತು ಬಸ್ ನಿರ್ವಾಹಕರಿಗೆ ಪಾವತಿಗಳನ್ನು ಮಾಡಲು ಜವಾಬ್ದಾರರಾಗಿರುತ್ತಾರೆ. ಪ್ರಸ್ತಾವಿತ ಯೋಜನೆಯಲ್ಲಿ ನಿರ್ದಿಷ್ಟಪಡಿಸಿದ ಮಟ್ಟಿಗೆ ಸಬ್ಸಿಡಿ ನೀಡುವ ಮೂಲಕ ಕೇಂದ್ರ ಸರ್ಕಾರವು ಈ ಬಸ್ ಕಾರ್ಯಾಚರಣೆಗಳನ್ನು ಬೆಂಬಲಿಸುತ್ತದೆ.

ಇ-ಚಲನಶೀಲತೆಗೆ ಉತ್ತೇಜನ:

ಯೋಜನೆಯು ಇ-ಚಲನಶೀಲತೆಯನ್ನು ಉತ್ತೇಜಿಸುತ್ತದೆ ಮತ್ತು ಮೀಟರ್‌ ವಿದ್ಯುತ್ ಮೂಲಸೌಕರ್ಯಕ್ಕೆ ಸಂಪೂರ್ಣ ಬೆಂಬಲ ನೀಡುತ್ತದೆ.

-ಹಸಿರು ನಗರ ಚಲನಶೀಲತೆ ಉಪಕ್ರಮದಡಿಯಲ್ಲಿ ಚಾರ್ಜಿಂಗ್ ಮೂಲಸೌಕರ್ಯಗಳ ಅಭಿವೃದ್ಧಿಗಾಗಿ ನಗರಗಳನ್ನು ಬೆಂಬಲಿಸಲಾಗುತ್ತದೆ.

-ಇ ಬಸ್ ಆದ್ಯತೆಯ ಮೂಲಸೌಕರ್ಯಕ್ಕೆ ಬೆಂಬಲದಿಂದ ಅತ್ಯಾಧುನಿಕ, ಶಕ್ತಿ-ಸಮರ್ಥ ಎಲೆಕ್ಟ್ರಿಕ್ ಬಸ್‌ಗಳ ಪ್ರಸರಣವನ್ನು ವೇಗಗೊಳಿಸುವುದಲ್ಲದೆ, ಇ-ಚಲನಶೀಲ ವಲಯದಲ್ಲಿ ನಾವೀನ್ಯತೆ ಮತ್ತು ಎಲೆಕ್ಟ್ರಿಕ್ ವಾಹನಗಳಿಗೆ ಪೂರೈಕೆ ಸರಪಳಿಯ ಅಭಿವೃದ್ಧಿಯನ್ನು ಉತ್ತೇಜಿಸುತ್ತದೆ.

-ಈ ಯೋಜನೆಯು ಇ-ಬಸ್‌ಗಳಿಗೆ ಒಟ್ಟುಗೂಡಿಸುವಿಕೆಯ ಮೂಲಕ ಎಲೆಕ್ಟ್ರಿಕ್ ಬಸ್‌ಗಳ ಖರೀದಿಗೆ ಆರ್ಥಿಕತೆ ಒದಗಿಸುತ್ತದೆ.

-ಎಲೆಕ್ಟ್ರಿಕ್ ಚಲನಶೀಲತೆಗೆ ಅಳವಡಿಸಿಕೊಳ್ಳುವುದರಿಂದ ಶಬ್ದ ಮತ್ತು ವಾಯು ಮಾಲಿನ್ಯವನ್ನು ಕಡಿಮೆ ಮಾಡುತ್ತದೆ. ಇಂಗಾಲದ ಹೊರಸೂಸುವಿಕೆಯನ್ನು ತಡೆಯುತ್ತದೆ.

-ಬಸ್ ನಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಸಂಚರಿಸುವುದರಿಂದ ಹಸಿರು ಮನೆ ಅನಿಲ(GHG) ಸಮಸ್ಯೆ ಕಡಿಮೆಯಾಗುತ್ತದೆ.
 

******