Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ದೇಶದ ಭವಿಷ್ಯವನ್ನು ಬದಲಾಯಿಸಲು ಮಾಡಿದ  ಪ್ರಯತ್ನಗಳಿಗಾಗಿ ದಾದಿಯರು, ವೈದ್ಯರು ಮತ್ತು ಇತರರನ್ನು 77 ನೇ ಸ್ವಾತಂತ್ರ್ಯ ದಿನದಂದು ಶ್ಲಾಘಿಸಿದ ಪ್ರಧಾನಮಂತ್ರಿ

ದೇಶದ ಭವಿಷ್ಯವನ್ನು ಬದಲಾಯಿಸಲು ಮಾಡಿದ  ಪ್ರಯತ್ನಗಳಿಗಾಗಿ ದಾದಿಯರು, ವೈದ್ಯರು ಮತ್ತು ಇತರರನ್ನು 77 ನೇ ಸ್ವಾತಂತ್ರ್ಯ ದಿನದಂದು ಶ್ಲಾಘಿಸಿದ ಪ್ರಧಾನಮಂತ್ರಿ


ನವದೆಹಲಿಯಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ, ದೇಶದಾದ್ಯಂತದ 50 ದಾದಿಯರು ಮತ್ತು ಅವರ ಕುಟುಂಬ ಸದಸ್ಯರನ್ನು ವಿಶೇಷ ಅತಿಥಿಗಳಾಗಿ ಕೆಂಪು ಕೋಟೆಯಲ್ಲಿ ಗಣ್ಯರ ಜೊತೆಗೆ ಆಚರಿಸಲು ಮತ್ತು ಭಾಗವಹಿಸಲು ಆಹ್ವಾನಿಸಲಾಯಿತು. ವಿಶೇಷ ಅತಿಥಿಗಳ ಸಾಲಿನಲ್ಲಿ ಸರಪಂಚರು, ಶಿಕ್ಷಕರು, ರೈತರು ಮತ್ತು ಮೀನುಗಾರರಿಂದ ಹಿಡಿದು ಜೀವನದ ವಿವಿಧ ಹಂತಗಳ ವಿವಿಧ ವರ್ಗಗಳ ಸುಮಾರು 1800 ವಿಶೇಷ ಅತಿಥಿಗಳು ಭಾಗವಾಹಿಸಿದ್ದರು. 

ದೇಶದ ಭವಿಷ್ಯವನ್ನು ಬದಲಾಯಿಸಲು ದಾದಿಯರು, ವೈದ್ಯರು ಮತ್ತು ಇತರರು ಮಾಡಿರುವ ಪ್ರಯತ್ನಗಳಿಗಾಗಿ ಅವರುಗಳನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು  ಶ್ಲಾಘಿಸಿದರು. ಮಾನವ ಕೇಂದ್ರಿತ ವಿಧಾನವಿಲ್ಲದೆ ಪ್ರಪಂಚದ ಅಭಿವೃದ್ಧಿ ಸಾಧ್ಯವಿಲ್ಲ ಎಂದು ಕೋವಿಡ್ ನಮಗೆ ಪಾಠ ಕಲಿಸಿದೆ ಎಂದು ಪ್ರಧಾನಮಂತ್ರಿ ಅವರು ಹೇಳಿದರು.

ದೇಶದ ಸಾರ್ವಜನಿಕ ಆರೋಗ್ಯ ಸೇವೆಯ ವ್ಯಾಪ್ತಿಯನ್ನು (ಯೂನಿವರ್ಸಲ್ ಹೆಲ್ತ್ ಕವರೇಜ್) ಸುಧಾರಿಸಲು ಸರ್ಕಾರದ ಪ್ರಯತ್ನಗಳಿಗೆ ಒತ್ತು ನೀಡಿದ ವಿವರಿಸಿದ ಅವರು, ಆಯುಷ್ಮಾನ್ ಭಾರತ್ನಲ್ಲಿ ಕೇಂದ್ರ ಸರ್ಕಾರವು ರೂ. 70,000 ಕೋಟಿಯನ್ನು ತೊಡಗಿಸಿದೆ.  ಇದು ಬಡತನ ರೇಖೆಗಿಂತ ಕೆಳಗಿನ (ಬಿಪಿಎಲ್) ಕುಟುಂಬಗಳಿಗೆ ವಾರ್ಷಿಕ ರೂ. 5 ಲಕ್ಷ ಮೌಲ್ಯದ ಆರೋಗ್ಯ ಖಾತರಿ ನೀಡುತ್ತದೆ ಎಂದು ಪ್ರಧಾನಮಂತ್ರಿ ಅವರು ಹೇಳಿದರು.

ಈ ಸಂದರ್ಭದಲ್ಲಿ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ ಅವರು, “ಭಾರತವು 200 ಕೋಟಿಗೂ ಹೆಚ್ಚು ಕೋವಿಡ್ ಲಸಿಕೆಗಳ ಮೂಲಕ ಆರೋಗ್ಯ ಕ್ಷೇತ್ರದಲ್ಲಿ ಜಾಗತಿಕ ಮೈಲಿಗಲ್ಲನ್ನು ಸಾಧಿಸುವಲ್ಲಿ ನಮ್ಮ ಹೆಮ್ಮೆಯ ಆರೋಗ್ಯ ಕಾರ್ಯಕರ್ತರು ವಿಶೇಷವಾಗಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಆಶಾ ಕಾರ್ಯಕರ್ತೆಯರು ಸಲ್ಲಿಸಿದ ಸಮರ್ಪಣೆ ಮತ್ತು ನಿರಂತರ ಪ್ರಯತ್ನಗಳೇ ಕಾರಣವಾಗಿದೆ” ಎಂದು ಹೇಳಿದರು. ಆ ನಿಟ್ಟಿನಲ್ಲಿ ಅವರುಗಳು ನೀಡಿದ ಅನುಕರಣೀಯ ಸೇವಾ ಕೊಡುಗೆಯನ್ನು ಪ್ರಧಾನಮಂತ್ರಿ ಅವರು ಶ್ಲಾಘಿಸಿದರು. “ಕೋವಿಡ್ ಸಮಯದಲ್ಲಿ ಮತ್ತು ಆ ನಂತರವೂ, ಜಗತ್ತಿಗೆ ಸಹಾಯ ಮಾಡುವುದು ಭಾರತವನ್ನು ಜಗತ್ತಿನ ಅತ್ಯಂತ ಸ್ನೇಹಿತ ದೇಶವನ್ನಾಗಿ ಮಾಡಿ ಗೌರವ ಸ್ಥಾನಮಾನದಲ್ಲಿ ಸ್ಥಾಪಿಸಿದೆ” ಎಂದು ಪ್ರಧಾನಮಂತ್ರಿಯವರು ಹೇಳಿದರು. 

PM India

ಒಂದು ಭೂಮಿ, ಒಂದು ಆರೋಗ್ಯ ಮತ್ತು ಒಂದು ಭವಿಷ್ಯದ ದೃಷ್ಟಿಯನ್ನು ಎತ್ತಿ ಹಿಡಿದ ಪ್ರಧಾನಮಂತ್ರಿಯವರು, “ಜನೌಷಧಿ ಕೇಂದ್ರಗಳು ದೇಶದ ಮಧ್ಯಮ ವರ್ಗದವರಿಗೆ ರೂ. 20,000 ಕೋಟಿಗಳ ಉಳಿತಾಯದ ಮೂಲಕ ಹೊಸ ಶಕ್ತಿಯನ್ನು ನೀಡಿವೆ. ಈಗಿನ ಜನೌಷಧಿ ಕೇಂದ್ರಗಳ ಸಂಖ್ಯೆಯನ್ನು 10000 ಕೇಂದ್ರಗಳಿಂದ  25,000ಕ್ಕೆ ಹೆಚ್ಚಿಸುವ ಗುರಿಯೊಂದಿಗೆ ಮುಂದಿನ ದಿನಗಳಲ್ಲಿ ರಾಷ್ಟ್ರವು ಈ ನಿಟ್ಟಿನಲ್ಲಿ ಕೆಲಸ ಮಾಡಲಿದೆ ಎಂದು ಪ್ರಧಾನಮಂತ್ರಿಯವರು  ದೃಢಪಡಿಸಿದರು.

**