ಗುಜರಾತ್ನ ಸೂರತ್ನಲ್ಲಿ ಸೂರತ್ ಡೈಮಂಡ್ ಬೋರ್ಸ್ ವಿಶ್ವದ ಅತಿದೊಡ್ಡ ಕಚೇರಿ ಕಟ್ಟಡವಾಗಿರುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಸ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಸುದ್ದಿಯ ವಿಡಿಯೊ ತುಣುಕನ್ನ ಹಂಚಿಕೊಂಡಿರುವ ಪ್ರಧಾನ ಮಂತ್ರಿಗಳು:
“ಸೂರತ್ ಡೈಮಂಡ್ ಬೋರ್ಸ್ ಕಚೇರಿ ವಜ್ರೋದ್ಯಮದ ಕ್ರಿಯಾಶೀಲತೆ ಮತ್ತು ಬೆಳವಣಿಗೆಯನ್ನು ತೋರಿಸುತ್ತದೆ. ಇದು ಭಾರತದ ಉದ್ಯಮಶೀಲ ಮನೋಭಾವಕ್ಕೂ ಸಾಕ್ಷಿಯಾಗಿದೆ. ಭಾರತದಲ್ಲಿ ವ್ಯಾಪಾರ, ನಾವೀನ್ಯತೆ ಮತ್ತು ಸಹಯೋಗದ ಕೇಂದ್ರವಾಗಿ ಕಾರ್ಯನಿರ್ವಹಿಸುವುದು ಮಾತ್ರವಲ್ಲದೆ ದೇಶದ ಆರ್ಥಿಕತೆಯನ್ನು ಮತ್ತಷ್ಟು ಉತ್ತೇಜಿಸುತ್ತದೆ.ಜನತೆಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ” ಎಂದು ಬರೆದುಕೊಂಡಿದ್ದಾರೆ.
***
Surat Diamond Bourse showcases the dynamism and growth of Surat's diamond industry. It is also a testament to India’s entrepreneurial spirit. It will serve as a hub for trade, innovation and collaboration, further boosting our economy and creating employment opportunities. https://t.co/rBkvYdBhXv
— Narendra Modi (@narendramodi) July 19, 2023