Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಫ್ರಾನ್ಸ್ ಗಣರಾಜ್ಯದ ಪ್ರಧಾನ ಮಂತ್ರಿಯವರೊಂದಿಗೆ ಭಾರತದ ಪ್ರಧಾನ ಮಂತ್ರಿಯವರ ಸಭೆ

ಫ್ರಾನ್ಸ್ ಗಣರಾಜ್ಯದ ಪ್ರಧಾನ ಮಂತ್ರಿಯವರೊಂದಿಗೆ ಭಾರತದ ಪ್ರಧಾನ ಮಂತ್ರಿಯವರ ಸಭೆ


ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2023ರ ಜುಲೈ 13ರಂದು ಫ್ರಾನ್ಸ್ ಪ್ರಧಾನಿ ಘನತೆವೆತ್ತ  ಶ್ರೀಮತಿ ಎಲಿಜಬೆತ್ ಬೋರ್ನ್ ಅವರನ್ನು ಭೇಟಿ ಮಾಡಿದರು.

ಆರ್ಥಿಕ ಮತ್ತು ವ್ಯಾಪಾರ, ಇಂಧನ, ಪರಿಸರ, ಶಿಕ್ಷಣ, ಚಲನಶೀಲತೆ, ರೈಲ್ವೆ, ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ, ವಸ್ತುಸಂಗ್ರಹಾಲಯ ಮತ್ತು ಉಭಯ ದೇಶದ ಜನರ ನಡುವಣ ಸಂಬಂಧಗಳೂ ಒಳಗೊಂಡಂತೆ  ವಿವಿಧ ಕ್ಷೇತ್ರಗಳಲ್ಲಿ ಸಹಕಾರವನ್ನು ಹೆಚ್ಚಿಸುವ ಬಗ್ಗೆ ನಾಯಕರು ಚರ್ಚಿಸಿದರು.

ಭಾರತ ಮತ್ತು ಫ್ರಾನ್ಸ್ ನಡುವಿನ ಬಹುಮುಖಿ ಸಹಕಾರವನ್ನು ಮತ್ತಷ್ಟು ಗಟ್ಟಿಗೊಳಿಸುವ ಬಯಕೆಯನ್ನು ಎರಡೂ ಕಡೆಯವರು ಪುನರುಚ್ಚರಿಸಿದರು.

****