Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಸ್ವಾಮಿ ವಿವೇಕಾನಂದರ ಪುಣ್ಯ ತಿಥಿಯಂದು ಅವರನ್ನು ಸ್ಮರಿಸಿದ ಪ್ರಧಾನಿ


ಸ್ವಾಮಿ ವಿವೇಕಾನಂದರ ಪುಣ್ಯತಿಥಿಯಂದು ಅವರನ್ನು ಸ್ಮರಿಸಿರುವ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು  ವಿವೇಕಾನಂದರ  ಸೇವೆ, ಮಾನವೀಯತೆ ಮತ್ತು ಆಧ್ಯಾತ್ಮಿಕ ಜ್ಞಾನೋದಯದ ಆದರ್ಶಗಳು ಬಲವಾದ ಮತ್ತು ರೋಮಾಂಚಕ ಭಾರತವನ್ನು ನಿರ್ಮಾಣ ಮಾಡಲು  ನಮಗೆ ಸ್ಫೂರ್ತಿ ಮತ್ತು ಮಾರ್ಗದರ್ಶನ ನೀಡುತ್ತಿವೆ ಎಂದು ಹೇಳಿದ್ದಾರೆ.

ಈ ಬಗ್ಗೆ  ಪ್ರಧಾನಿ ಆವರು ಟ್ವೀಟ್ ಮಾಡಿದ್ದಾರೆ.

“ಶ್ರೇಷ್ಠ ಸಂತ  ಸ್ವಾಮಿ ವಿವೇಕಾನಂದರ ಪುಣ್ಯ ತಿಥಿಯಂದು ಅವರನ್ನು ಸ್ಮರಿಸುತ್ತೇನೆ. ಅವರ ಸೇವೆ, ಮಾನವೀಯತೆ ಮತ್ತು ಆಧ್ಯಾತ್ಮಿಕ ಜ್ಞಾನೋದಯದ ಆದರ್ಶಗಳು ಬಲವಾದ ಮತ್ತು ರೋಮಾಂಚಕ ಭಾರತವನ್ನು ನಿರ್ಮಿಸಲು ನಮಗೆ ಸ್ಫೂರ್ತಿ ಮತ್ತು ಮಾರ್ಗದರ್ಶನ ನೀಡುತ್ತಲೇ ಇವೆ. ಏಕತೆ ಮತ್ತು ಭ್ರಾತೃತ್ವದ ಅವರ ಚಿಂತನೆಯನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ನಮ್ಮ ಬದ್ಧತೆಯನ್ನು ನಾವು ಪುನರುಚ್ಚರಿಸುತ್ತೇವೆ” ಎಂದವರು ಟ್ವೀಟ್ ನಲ್ಲಿ ಹೇಳಿದ್ದಾರೆ.

*******