Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಪುಣೆ ಮೆಟ್ರೋ ರೈಲು ಯೋಜನೆ ಹಂತ-1ಕ್ಕೆ ಸಂಪುಟದ ಅನುಮೋದನೆ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಪುಣೆ ಮೆಟ್ರೋ ರೈಲು ಯೋಜನೆಯ ಮೊದಲ ಹಂತಕ್ಕೆ ತನ್ನ ಅನುಮೋದನೆ ನೀಡಿದೆ.

ಪುಣೆ ಮೆಟ್ರೋ ರೈಲು ಕಾರಿಡಾರ್ 31.254 ಕಿ.ಮೀ. ಉದ್ದದಲ್ಲಿ ಎರಡು ಕಾರಿಡಾರ್ ಒಳಗೊಂಡಿದೆ. ಅವುಗಳೆಂದರೆ ಕಾರಿಡಾರ್ -1 ( ಪಿಂಪ್ರಿ ಚಿಂಚ್ವಾಡ್ ಮುನಿಸಿಪಲ್ ಕಾರ್ಪೊರೇಷನ್ (ಪಿಸಿಎಂಸಿ) ನಿಂದ ಸ್ವರ್ಗಾತೆ.) ಇದರ ಉದ್ದ 16.589 ಕಿ.ಮೀ (11.57 ಕಿ.ಮೀ ಮೇಲ್ಸೇತುವೆ ಮತ್ತು 5.019 ಕಿ.ಮೀ. ಸುರಂಗ) ಮತ್ತು ಕಾರಿಡಾರ್ -2 (ವನಾಜ್ ನಿಂದ ರಾಮ್ವಾಡಿ) 14.665 ಕಿ.ಮೀ. ವ್ಯಾಪ್ತಿ (ಸಂಪೂರ್ಣ ಮೇಲ್ಸೇತುವೆ).

ಮೆಟ್ರೋ ರೈಲು ಕಾರಿಡಾರ್ ಪೂರ್ಣವಾಗುವವರೆಗಿನ ಒಟ್ಟು ವೆಚ್ಚ 11,420 ಕೋಟಿ ರೂಪಾಯಿಗಳು. ಈ ಮೆಟ್ರೋ ಕಾರಿಡಾರ್ ನಿಂದ ಪುಣೆ ಮಹಾನಗರ ಪ್ರದೇಶದ ಸುಮಾರು 50 ಲಕ್ಷ ಜನರಿಗೆ ಅನುಕೂಲ ಆಗಲಿದೆ.

ಸವಿವರವಾದ ಯೋಜನಾ ವರದಿ (ಡಿಪಿಆರ್) ಪ್ರಕಾರ ಕಾಮಗಾರಿ ಆರಂಭವಾದ ದಿನದಿಂದ ಐದು ವರ್ಷಗಳ ಅವಧಿಯಲ್ಲಿ ಯೋಜನೆ ಪೂರ್ಣಗೊಳಿಸಲು ಕಾಲಮಿತಿ ಹಾಕಲಾಗಿದೆ.  

ಅನುಮೋದಿತ ಮಾರ್ಗಗಳು ಪುಣೆ ಮಹಾನಗರದ ತೀವ್ರ ಸಂಚಾರ ದಟ್ಟಣೆಯ ಮತ್ತು ಜನ ನಿಬಿಢ ಮಾರ್ಗಗಳ ಮೂಲಕ ಇದು ಹಾದು ಹೋಗುವುದರಿಂದ ಪ್ರಯಾಣಿಕರಿಗೆ ಬಹು ಅಗತ್ಯವಿದ್ದ ಸಂಪರ್ಕ ಸೌಲಭ್ಯವನ್ನು ಕಲ್ಪಿಸುತ್ತವೆ ಎಂದು ನಿರೀಕ್ಷಿಸಲಾಗಿದೆ.

ಇದು ನಗರದಲ್ಲಿ ಗಣನೀಯ ಪ್ರಮಾಣದಲ್ಲಿ ಸಂಚಾರದ ಒತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ವೇಗವಾದ, ಸುಗಮವಾದ, ಸುರಕ್ಷಿತವಾದ, ಮಾಲಿನ್ಯ ಮುಕ್ತವಾದ ಮತ್ತು ಕೈಗೆಟಕುವ ಸಮೂಹ ಸಾರಿಗೆ ಸಂಚಾರ ವ್ಯವಸ್ಥೆ ಕಲ್ಪಿಸುತ್ತದೆ.  ಜೊತೆಗೆ ಇದು ಪ್ರದೇಶದ ಅಭಿವೃದ್ಧಿ ಮತ್ತು ಪ್ರಗತಿಗೂ ಕೊಡುಗೆ ನೀಡುತ್ತದೆ. ಪುಣೆ ಮಹಾನಗರದ ಪ್ರಗತಿ ಮತ್ತು ಅಭಿವೃದ್ಧಿ ದೇಶದ ಅಭಿವೃದ್ಧಿ ಮತ್ತು ಪ್ರಗತಿಗೂ ಕಾರಣವಾಗಲಿದೆ.

ಈ ಯೋಜನೆಯನ್ನು ಭಾರತ ಸರ್ಕಾರ ಮತ್ತು ಮಹಾರಾಷ್ಟ್ರ ಸರ್ಕಾರಗಳ 50:50 ಜಂಟಿ ಒಡೆತನದ ಕಂಪನಿ ಮಹಾರಾಷ್ಟ್ರ ಮೆಟ್ರೋ ರೈಲು ನಿಗಮ ನಿಯಮಿತ (ಮಹಾ ಮೆಟ್ರೋ) ಅನುಷ್ಠಾನಗೊಳಿಸಲಿದೆ. ಯೋಜನೆಯು ಮೆಟ್ರೋ ರೈಲು (ನಿರ್ಮಾಣ ಕಾಮಗಾರಿ) ಕಾಯಿದೆ 1978, ಮೆಟ್ರೋ ರೈಲು (ಕಾರ್ಯಾಚರಣೆ ಮತ್ತು ನಿರ್ವಹಣೆ) ಕಾಯಿದೆ 2002, ಮತ್ತು ರೈಲ್ವೆ ಕಾಯಿದೆ 1989ರ ಮತ್ತು ಕಾಲಕಾಲಕ್ಕೆ ತಿದ್ದುಪಡಿ ಆಗುವ ಕಾನೂನಿನಡಿ ಬರುತ್ತದೆ.

ಭಾರತ ಸರ್ಕಾರ ಮತ್ತು ಮಹಾರಾಷ್ಟ್ರ ಸರ್ಕಾರದ ಜಂಟಿ ವಿಶೇಷ ಉದ್ದೇಶದ ಯೋಜನೆ (ಎಸ್.ಪಿ.ವಿ) ಹಾಲಿ ಇರುವ ನಾಗಪುರ ಮೆಟ್ರೋ ರೈಲು ನಿಗಮ ನಿಯಮಿತ (ಎನ್.ಎಂ.ಆರ್.ಸಿ.ಎಲ್)  ಅನ್ನು ಮುಂಬೈ ಮಹಾನಗರದ ಹೊರಗೆ ಪುಣೆ ಮೆಟ್ರೋ ಯೋಜನೆ 1ನೇ ಹಂತ ಸೇರಿದಂತೆ ಮಹಾರಾಷ್ಟ್ರ ರಾಜ್ಯದ ಎಲ್ಲ ಮೆಟ್ರೋ ಯೋಜನೆಗಳ ಅನುಷ್ಠಾನಕ್ಕಾಗಿ  ಮಹಾರಾಷ್ಟ್ರ ಮೆಟ್ರೋ ರೈಲು ನಿಗಮ ನಿಯಮಿತ (ಮಹಾ ಮೆಟ್ರೋ) ಎಂದು ಪುನಾರಚಿಸಲಾಗುತ್ತಿದೆ.  ಈ ಯೋಜನೆಯು ಇತರ ಮೆಟ್ರೋ ರೈಲು ಯೋಜನೆಗಳಾದ ದೆಹಲಿ, ಬೆಂಗಳೂರು, ಚೆನ್ನೈ, ಕೊಚ್ಚಿ, ನಾಗ್ಪುರ ಇತ್ಯಾದಿಯ ಅನುಭವದ ಲಾಭವನ್ನೂ ಪಡೆಯಲಿದೆ.

ಹಿನ್ನೆಲೆ:

ಪುಣೆ ಮಹಾನಗರ ಪ್ರದೇಶವು ಪುಣೆ ಮುನಿಸಿಪಲ್ ಕಾರ್ಪೊರೇಷನ್ (ಪಿಎಂ.ಸಿ), ಪಿಂಪ್ರಿ ಚಿಂಚ್ವಾಡ ಮುನಿಸಿಪಲ್ ಕಾರ್ಪೊರೇಷನ್ (ಪಿಸಿಎಂಸಿ)ಯನ್ನೂ ಒಳಗೊಂಡಿದೆ. ಈ ಎರಡೂ ದಂಡು ಪ್ರದೇಶಗಳು ಪುಣೆ ಮತ್ತು ಖಾಡ್ಕಿಗಳು ಜನಸಂಖ್ಯೆಯಲ್ಲಿ ತ್ವರಿತವಾಗಿ ಬೆಳೆದಿವೆ.  ಪುಣೆ ನಗರದ ಒಟ್ಟು ಜನಸಂಖ್ಯೆ 2011ರ ಜನಗಣತೆಯಂತೆ 4.99 ದಶಲಕ್ಷವಾಗಿದೆ. 2001ರ ಜನಗಣತಿಯಲ್ಲಿ ಇಲ್ಲಿನ ಜನಸಂಖ್ಯೆ 3.57 ಆಗಿತ್ತು. ಜನಸಂಖ್ಯೆ 2021ರ ಹೊತ್ತಿಗೆ 6.90 ದಶಲಕ್ಷ ಮತ್ತು 2031ರ ಹೊತ್ತಿಗೆ 7.73 ಆಗುವ ಸಾಧ್ಯತೆ ಇದೆ ಎಂದು ಅಂದಾಜು ಮಾಡಲಾಗಿದೆ.

ತ್ವರಿತವಾದ ಕೈಗಾರಿಕೀಕರಣ ಮತ್ತು ಕಳೆದ ದಶಕದಲ್ಲಿ ಆದ ವಾಣಿಜ್ಯ ಅಭಿವೃದ್ಧಿಯಿಂದ ಇಲ್ಲಿ ಪ್ರಯಾಣದ ಬೇಡಿಕೆ ಹೆಚ್ಚಾಗಿದ್ದು, ಪುಣೆಯ ಸಾರಿಗೆ ಮೂಲಸೌಕರ್ಯವನ್ನು ಒತ್ತಡಕ್ಕೆ ಸಿಲುಕಿಸಿದೆ. ಪ್ರದೇಶದಲ್ಲಿ ಜನಸಂಖ್ಯೆ ಹೆಚ್ಚಳದ ಅಂದಾಜು ಮತ್ತು ಹಾಲಿ ಇರುವ ಸಾರಿಗೆ ಮೂಲಸೌಕರ್ಯವನ್ನು ವೇಗಗೊಳಿಸುವ ತುರ್ತು ಅಗತ್ಯವನ್ನು ಮನಗಾಣಲಾಗಿದೆ.

ಬೆಳೆಯುತ್ತಿರುವ ಆರ್ಥಿಕತೆ ಮತ್ತು  ಅಸಮರ್ಪಕವಾದ ಸಾರ್ವಜನಿಕ ಸಾರಿಗೆ ಸೇವೆಯಿಂದಾಗಿ ಪ್ರಯಾಣಿಕರು ಖಾಸಗಿ ವಾಹನ ಬಳಸುವಂತಾಗಿದೆ, ಇದು ವಲಯದಲ್ಲಿ ಹೆಚ್ಚಿನ ವಾಹನಗಳ ಒಡೆತನದ ಪ್ರವೃತ್ತಿಯಿಂದ ಸಾಬೀತಾಗಿದೆ. ಇದು ಕೇವಲ ರಸ್ತೆಯ ಮೇಲಿನ ಒತ್ತಡವನ್ನಷ್ಟೇ ಹೆಚ್ಚಿಸುವುದಿಲ್ಲ ಜೊತೆಗೆ ವಾಯು ಮಾಲಿನ್ಯಕ್ಕೂ ಕಾರಣವಾಗಿದೆ. ಹೀಗಾಗಿ ಮೆಟ್ರೋ ರೈಲು ವ್ಯವಸ್ಥೆ ಅತ್ಯಗತ್ಯವೆನಿಸಿದೆ.

***

AKT/VBA/SH