Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ದೇಶದಲ್ಲಿ ಸಂಶೋಧನಾ ಪರಿಸರ ವ್ಯವಸ್ಥೆಯನ್ನು ಬಲಪಡಿಸುವ ಉದ್ದೇಶದ ರಾಷ್ಟ್ರೀಯ ಸಂಶೋಧನಾ ಪ್ರತಿಷ್ಠಾನ ಮಸೂದೆ 2023 ಕ್ಕೆ ಸಂಪುಟ ಅನುಮೋದನೆ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಂಪುಟ ಸಭೆಯಲ್ಲಿ ರಾಷ್ಟ್ರೀಯ ಸಂಶೋಧನಾ ಪ್ರತಿಷ್ಠಾನ [ಎನ್.ಆರ್.ಎಫ್] ಮಸೂದೆ – 2023 ಅನ್ನು ಸಂಸತ್ತಿನಲ್ಲಿ ಮಂಡಿಸಲು ಅನುಮೋದನೆ ನೀಡಲಾಗಿದೆ. ಮಂಜೂರಾತಿ ನೀಡಿರುವ ಮಸೂದೆಯಿಂದ ಎನ್.ಆರ್.ಎಫ್ ರಚಿಸಲು ಹಾದಿ ಸುಗಮವಾಗಲಿದ್ದು, ಇದು ಸಂಶೋಧನೆ ಮತ್ತು ಅಭಿವೃದ್ಧಿ [ಆರ್&ಡಿ] ಯನ್ನು ಬಿತ್ತಿ, ಬೆಳೆಯುವ ಮತ್ತು ಉತ್ತೇಜನ ನೀಡುವ ಕೆಲಸ ಮಾಡುತ್ತದೆ ಮತ್ತು ಭಾರತದ ವಿಶ್ವವಿದ್ಯಾಲಯಗಳು, ಕಾಲೇಜುಗಳು ಮತ್ತು ಸಂಶೋಧನೆ ಹಾಗೂ ನಾವೀನ್ಯತೆಯ ಸಂಸ್ಕೃತಿಯನ್ನು ಪ್ರೇರೇಪಿಸುತ್ತದೆ.

ಸಂಸತ್ತಿನಲ್ಲಿ ಮಸೂದೆಗೆ ಅನುಮೋದನೆ ದೊರತ ನಂತರ ಎನ್.ಆರ್.ಎಫ್ ರಚನೆಯಾಗಲಿದೆ. ರಾಷ್ಟ್ರೀಯ ಶಿಕ್ಷಣ ನೀತಿ [ಎನ್.ಇ.ಪಿ] ಶಿಫಾರಸ್ಸಿನ ಅನ್ವಯ ದೇಶದಲ್ಲಿ ವೈಜ್ಞಾನಿಕ ಸಂಶೋಧನೆಯನ್ನು ಕೈಗೊಳ್ಳಲು ಉನ್ನತಮಟ್ಟದ ಪರಮೋಚ್ಛ ಸಂಸ್ಥೆಯಾಗಿ ಇದು ರೂಪುಗೊಳ್ಳಲಿದೆ. ಇದಕ್ಕಾಗಿ ಐದು ವರ್ಷಗಳ ಅವಧಿಗೆ (2023-28) 50,000 ಕೋಟಿ ರೂಪಾಯಿ ಅಂದಾಜು ವೆಚ್ಚವನ್ನು ನಿಗದಿಪಡಿಸಲಾಗಿದೆ. ವಿಜ್ಞಾನ ಮತ್ತು ತಂತ್ರಜ್ಞಾನ [ಡಿಎಸ್ ಟಿ] ಇಲಾಖೆ ಆಡಳಿತಾತ್ಮಕ ಇಲಾಖೆಯಾಗಲಿದ್ದು, ಪ್ರಖ್ಯಾತ ಸಂಶೋಧಕರು ಮತ್ತು ವೃತ್ತಿಪರರನ್ನು ಒಳಗೊಂಡಿರುವ ಆಡಳಿತ ಮಂಡಳಿಯನ್ನು ಇದು ಹೊಂದಲಿದೆ. ಎನ್.ಆರ್.ಎಫ್ ನ ವ್ಯಾಪ್ತಿ ವ್ಯಾಪಕವಾಗಿರುವುದರಿಂದ ಎಲ್ಲಾ ಸಚಿವಾಲಯಗಳ ಮೇಲೆ ಇದು ನೇರ ಪರಿಣಾಮ ಬೀರುತ್ತದೆ. ಪ್ರಧಾನಮಂತ್ರಿಯವರು ಪದನಿಮಿತ್ತ ಆಡಳಿತ ಮಂಡಳಿ ಅಧ್ಯಕ್ಷರಾಗಿರುತ್ತಾರೆ ಮತ್ತು ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರು, ಕೇಂದ್ರ ಶಿಕ್ಷಣ ಮಂತ್ರಿಗಳು ಪದನಿಮಿತ್ತ ಉಪಾಧ್ಯಕ್ಷರಾಗಿರಲಿದ್ದಾರೆ. ಎನ್.ಆರ್.ಎಫ್ ನ ಆಡಳಿತ ವ್ಯವಸ್ಥೆಯ ಕಾರ್ಯಕಾರಿ ಮಂಡಳಿಯ ಅಧ್ಯಕ್ಷರಾಗಿ ಭಾರತ ಸರ್ಕಾರದ ಪ್ರಧಾನ ವೈಜ್ಞಾನಿಕ ಸಲಹೆಗಾರರು ಇರಲಿದ್ದಾರೆ.

ಕೈಗಾರಿಕೆ, ಶೈಕ್ಷಣಿಕ, ಮತ್ತು ಸರ್ಕಾರದ ಇಲಾಖೆಗಳು ಮತ್ತು ಸಂಶೋಧನಾ ಸಂಸ್ಥೆಗಳ ನಡುವೆ ಸಹಯೋಗವನ್ನು ಇದು ರೂಪಿಸುತ್ತದೆ ಹಾಗೂ ವೈಜ್ಞಾನಿಕ ವಲಯ ಮತ್ತು ಸಚಿವಾಲಯಗಳ ಜೊತೆಗೆ ರಾಜ್ಯ ಸರ್ಕಾರಗಳ ಪಾಲ್ಗೊಳ್ಳುವಿಕೆ ಮತ್ತು ಕೊಡುಗೆಗಾಗಿ ಸಂಪರ್ಕದ ಕಾರ್ಯವಿಧಾನವನ್ನು ಇದಕ್ಕಾಗಿ ರಚಿಸಲಾಗುತ್ತದೆ. ಇದು ನೀತಿ ಚೌಕಟ್ಟು ರೂಪಿಸುವುದನ್ನು ಕೇಂದ್ರೀಕರಿಸುತ್ತದೆ. ಕೈಗಾರಿಕೆಗಳು ಸಂಶೋಧನೆ ಮತ್ತು ಅಭಿವೃದ್ಧಿಗಾಗಿ ವೆಚ್ಚ ಮಾಡುವ ಮತ್ತು ಪಾಲುದಾರಿಕೆಯನ್ನು ಉತ್ತೇಜಿಸುವ ಪ್ರತಿಕ್ರಿಯೆಯಲ್ಲಿ ನಿಯಂತ್ರಣ ವ್ಯವಸ್ಥೆಯನ್ನು ರೂಪಿಸಲಿದೆ.

2008 ರಲ್ಲಿ ಸಂಸತ್ತಿನಲ್ಲಿ ಸ್ಥಾಪಿಸಲಾದ ವೈಜ್ಞಾನಿಕ ಮತ್ತು ತಾಂತ್ರಿಕ ಸಂಶೋಧನಾ ಮಂಡಳಿ[ಎಸ್.ಸಿ.ಆರ್.ಬಿ]ಯನ್ನು ಈ ಮಸೂದೆ ರದ್ದುಗೊಳಿಸಲಿದೆ ಮತ್ತು ವಿಸ್ತೃತ ಆದೇಶ ಹೊಂದಿರುವ ಹಾಗೂ ಒಟ್ಟಾರೆ ಮೇಲೆ ತಿಳಿಸಿರುವ ಎಸ್.ಸಿ.ಆರ್.ಬಿ ಚಟುವಟಿಕೆಗಳನ್ನು ಸಹ ಇದು ಒಳಗೊಳ್ಳಲಿದೆ.

***