ಅಮೆರಿಕ ಪ್ರವಾಸದಲ್ಲಿರುವ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕಳೆದ ಜೂನ್ 23ರಂದು ವಾಷಿಂಗ್ಟನ್ ಡಿಸಿಯಲ್ಲಿ ಅಮೆಜಾನ್ ಕಂಪೆನಿ ಅಧ್ಯಕ್ಷ ಮತ್ತು ಸಿಇಒ ಶ್ರೀ ಆ್ಯಂಡ್ರ್ಯೂ ಆರ್. ಜಸ್ಸಿ ಅವರನ್ನು ಭೇಟಿಯಾದರು.
ಪ್ರಧಾನ ಮಂತ್ರಿಗಳು ಹಾಗೂ ಶ್ರೀ ಜಸ್ಸಿ ಅವರು ಇ-ಕಾಮರ್ಸ್ ಕ್ಷೇತ್ರದ ಬಗ್ಗೆ ಸಮಾಲೋಚನೆ ನಡೆಸಿದರು. ಹಾಗೆಯೇ ಭಾರತದಲ್ಲಿ ಸರಕು ಸಾಗಣೆ (ಲಾಜಿಸ್ಟಿಕ್ಸ್) ವಲಯದಲ್ಲಿ ಅಮೆಜಾನ್ನೊಂದಿಗೆ ಮತ್ತಷ್ಟು ಸಹಯೋಗದ ಸಾಧ್ಯತೆ ಕುರಿತಂತೆಯೂ ಚರ್ಚೆ ನಡೆಸಿದರು.
ಭಾರತದಲ್ಲಿ ಎಂಎಸ್ಎಂಇಗಳ ಡಿಜಿಟಲೀಕರಣಕ್ಕೆ ಉತ್ತೇಜನ ನೀಡುವ ಅಮೆಜಾನ್ ಕಂಪೆನಿಯ ಉಪಕ್ರಮವನ್ನು ಪ್ರಧಾನ ಮಂತ್ರಿಗಳು ಸ್ವಾಗತಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
****
PM @narendramodi met CEO of @amazon @ajassy in Washington DC. Their discussions focused on topics such as e-commerce, digitisation efforts and the logistics sector. pic.twitter.com/1JFo0oqAZz
— PMO India (@PMOIndia) June 23, 2023