Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಅಮೆರಿಕದ ಪ್ರಮುಖ ಆರೋಗ್ಯ ತಜ್ಞರ ಭೇಟಿ ಮಾಡಿದ ಪ್ರಧಾನಿ ನರೇಂದ್ರ ಮೋದಿ 

ಅಮೆರಿಕದ ಪ್ರಮುಖ ಆರೋಗ್ಯ ತಜ್ಞರ ಭೇಟಿ ಮಾಡಿದ ಪ್ರಧಾನಿ ನರೇಂದ್ರ ಮೋದಿ 


ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು ಅಮೆರಿಕದ ನ್ಯೂಯಾರ್ಕ್‌ ನಗರದಲ್ಲಿ ಆರೋಗ್ಯ ಕ್ಷೇತ್ರದ ಪ್ರಮುಖ ತಜ್ಞರ ಗುಂಪನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.

ಗುಣಮಟ್ಟದ ಆರೋಗ್ಯ ರಕ್ಷಣೆಗಾಗಿ ಡಿಜಿಟಲ್ ತಂತ್ರಜ್ಞಾನಗಳ ಬಳಕೆ, ಸಮಗ್ರ ಔಷಧದ ಮೇಲೆ ಹೆಚ್ಚಿನ ಗಮನ ಮತ್ತು ಉತ್ತಮ ಆರೋಗ್ಯ ರಕ್ಷಣೆಯ ಸಿದ್ಧತೆ ಸೇರಿದಂತೆ ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದ ವಿವಿಧ ವಿಷಯಗಳ ಕುರಿತು ಪ್ರಧಾನಮಂತ್ರಿಗಳು ತಜ್ಞರ ಜೊತೆ ಚರ್ಚಿಸಿದರು.

ಸಂವಾದದಲ್ಲಿ ಭಾಗವಹಿಸಿದ ತಜ್ಞರ ವಿವರಗಳು ಹೀಗಿದೆ:

• ಡಾ. ಪೀಟರ್ ಹೊಟೆಜ್, ನ್ಯಾಷನಲ್ ಸ್ಕೂಲ್ ಆಫ್ ಟ್ರಾಪಿಕಲ್ ಮೆಡಿಸಿನ್ ಟೆಕ್ಸಾಸ್‌ನ ಸ್ಥಾಪಕ ಡೀನ್

• ಡಾ. ಸುನಿಲ್ ಎ. ಡೇವಿಡ್, ಟೆಕ್ಸಾಸ್ ಮೂಲದ ವಿರೊ ವಾಕ್ಸ್ ನ ಸಿಇಒ

• ಡಾ. ಸ್ಟೀಫನ್ ಕ್ಲಾಸ್ಕೊ, ಜನರಲ್ ಕ್ಯಾಟಲಿಸ್ಟ್‌ನ ಸಲಹೆಗಾರ

• ಡಾ. ಲಾಟನ್ ಆರ್. ಬರ್ನ್ಸ್, ಹೆಲ್ತ್‌ಕೇರ್ ಮ್ಯಾನೇಜ್‌ಮೆಂಟ್ ಪ್ರೊಫೆಸರ್, ವಾರ್ಟನ್ ಸ್ಕೂಲ್, ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯ

• ಡಾ. ವಿವಿಯನ್ ಎಸ್. ಲೀ, ವೆರಿಲಿ ಲೈಫ್ ಸೈನ್ಸಸ್ ಸ್ಥಾಪಕ ಅಧ್ಯಕ್ಷರು

• ಡಾ. ಪೀಟರ್ ಅಗ್ರೆ, ವೈದ್ಯ, ನೊಬೆಲ್ ಪ್ರಶಸ್ತಿ ವಿಜೇತ ಮತ್ತು ಅಣು ಜೀವಶಾಸ್ತ್ರಜ್ಞ, ಜಾನ್ಸ್ ಹಾಪ್ಕಿನ್ಸ್ ಬ್ಲೂಮ್‌ಬರ್ಗ್ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್ ಮತ್ತು ಜಾನ್ಸ್ ಹಾಪ್‌ಕಿನ್ಸ್ ಸ್ಕೂಲ್ ಆಫ್ ಮೆಡಿಸಿನ್.

***