ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಹಿರಿಯ ನಟಿ ಸುಲೋಚನಾ ಅವರ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಅವರ ಸಿನಿಮಾ ಪರಂಪರೆ ಅವರು ನಟಿಸಿರುವ ಚಿತ್ರಗಳ ಮೂಲಕ ಉಳಿಯುತ್ತದೆ ಎಂದು ಹೇಳಿದ್ದಾರೆ.
ಪ್ರಧಾನ ಮಂತ್ರಿಗಳು ಟ್ವೀಟ್ ಮಾಡಿ;
“ಸುಲೋಚನಾ ಅವರ ನಿಧನವು ಭಾರತೀಯ ಚಿತ್ರರಂಗದಲ್ಲಿ ದೊಡ್ಡ ಶೂನ್ಯವನ್ನು ಉಂಟುಮಾಡಿದೆ. ಅವರು ನಟಿಸಿದ ಅವಿಸ್ಮರಣೀಯ ಚಿತ್ರಗಳು ನಮ್ಮ ಸಂಸ್ಕೃತಿಯನ್ನು ಉತ್ಕೃಷ್ಟಗೊಳಿಸಿವೆ. ಮುಂದಿನ ಪೀಳಿಗೆಯ ಜನರಿಗೆ ಅವರನ್ನು ಪ್ರೀತಿಸುವಂತೆ, ಮನದಲ್ಲಿ ಉಳಿಯುವಂತೆ ಮಾಡಿದೆ. ಅವರ ಸಿನಿಮಾ ಪರಂಪರೆಯು ಅವರು ಮಾಡಿರುವ ಕೆಲಸ ಮೂಲಕ ಉಳಿಯುತ್ತದೆ. ಸುಲೋಚನಾ ಅವರ ಕುಟುಂಬ ಸದಸ್ಯರಿಗೆ ಸಂತಾಪಗಳು. ಓಂ ಶಾಂತಿ.” ಎಂದು ಬರೆದುಕೊಂಡಿದ್ದಾರೆ.
***
The passing of Sulochana Ji leaves a big void in the world of Indian cinema. Her unforgettable performances have enriched our culture and have endeared her to people across generations. Her cinematic legacy will live on through her works. Condolences to her family. Om Shanti.
— Narendra Modi (@narendramodi) June 4, 2023