Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

​​​​​​​ಜೂನ್ 21 ರ 9 ನೇ ಅಂತರರಾಷ್ಟ್ರೀಯ ಯೋಗ ದಿನವನ್ನು ನಾಗರಿಕರಿಗೆ ನೆನಪಿಸಿದ ಪ್ರಧಾನಮಂತ್ರಿ


ಜೂನ್ 21 ರ 9 ನೇ ಅಂತರರಾಷ್ಟ್ರೀಯ ಯೋಗ ದಿನವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನಾಗರಿಕರಿಗೆ ನೆನಪಿಸಿದ್ದಾರೆ. ನಮ್ಮ ಮಾನಸಿಕ ಮತ್ತು ದೈಹಿಕ ಯೋಗಕ್ಷೇಮಕ್ಕಾಗಿ ಪ್ರಾಚೀನ ಅಭ್ಯಾಸದ ಆಚರಣೆಗೆ ನಾವು ಸಜ್ಜುಗೊಳ್ಳೋಣ ಮತ್ತು ಸಂಭ್ರಮಿಸೋಣ ಎಂದು ಶ್ರೀ ನರೇಂದ್ರ ಮೋದಿ ಹೇಳಿದ್ದಾರೆ.

ಆಯುಷ್ ಸಚಿವಾಲಯದ ಟ್ವೀಟ್ ಗೆ ಪ್ರತಿಕ್ರಿಯೆ ನೀಡಿರುವ ಪ್ರಧಾನಮಂತ್ರಿ,

“ಅಂತರರಾಷ್ಟ್ರೀಯ ಯೋಗ ದಿನಕ್ಕಾಗಿ ಇನ್ನು ಕೇವಲ ಮೂರು ವಾರಗಳು ಬಾಕಿ ಉಳಿದಿವೆ! 

ನಮ್ಮ ಮಾನಸಿಕ ಮತ್ತು ದೈಹಿಕ ಯೋಗಕ್ಷೇಮಕ್ಕಾಗಿ ಪ್ರಾಚೀನ ಅಭ್ಯಾಸದ ಆಚರಣೆಗೆ ನಾವು ಸಜ್ಜುಗೊಳ್ಳೋಣ ಮತ್ತು ಸಂಭ್ರಮಿಸೋಣ. ಆರೋಗ್ಯಕರ ಮತ್ತು ಸಂತಸದಾಯಕ ಸಮಾಜವನ್ನು ನಿರ್ಮಿಸೋಣ” ಎಂದು ಹೇಳಿದ್ದಾರೆ.

***