ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ,ಕಾಕಿನಾಡದ ನೌಕಾ ಜಮೀನಿನ ಮೂಲಕ ಹಾದು ಹೋಗುವ ರಾಜ್ಯ ಹೆದ್ದಾರಿ 149ರ ಮಾರ್ಗ ತಿರುಗಿಸಲು ತನ್ನ ಅನುಮೋದನೆ ನೀಡಿದೆ. ಈ ನಿಟ್ಟಿನಲ್ಲಿ ಈ ಕೆಳಗಿನ ನಿರ್ಧಾರಗಳನ್ನೂ ಕೈಗೊಳ್ಳಲಾಗಿದೆ:-
a) ಹಾಲಿ ಇರುವ ಹೆದ್ದಾರಿಯ ಅಡಿ ಕಾಕಿನಾಡದ ನೌಕಾ ಜಮೀನಿನ ಮೂಲಕ ಹಾದು ಹೋಗಿರುವ 11.25 ಎಕರೆ ಆಂಧ್ರಪ್ರದೇಶದ ಭೂಮಿಯನ್ನು ತೆಗೆದುಕೊಳ್ಳುವುದು.
b) ಕಾಕಿನಾಡದಲ್ಲಿ 5.23 ಎಕರೆ ನೌಕಾ ಜಮೀನನ್ನು ಆಂಧ್ರಪ್ರದೇಶ ಸರ್ಕಾರದ ವಶಕ್ಕೆ ಒಪ್ಪಿಸುವುದು.
c) ಪೂರಕವಾಗುವಂಥ ಪರ್ಯಾಯ ರಸ್ತೆಯ ನಿರ್ಮಾಣಕ್ಕೆ ಭೂಸ್ವಾಧೀನಕ್ಕೆ ಅವಕಾಶ ಕಲ್ಪಿಸಲು ಆಂಧ್ರಪ್ರದೇಶ ಸರ್ಕಾರಕ್ಕೆ 1882.775 ಲಕ್ಷ ರೂಪಾಯಿಗಳ ಪರಿಹಾರವನ್ನು ಪಾವತಿ ಮಾಡುವುದು.
ಕಾಕಿನಾಡದಲ್ಲಿ ರಾಜ್ಯ ಹೆದ್ದಾರಿಯ ಮಾರ್ಗ ಬದಲಾವಣೆ ಮಾಡುವುದರಿಂದ ಸಂಸ್ಥೆಯ ಸುರಕ್ಷತೆ ಸುಧಾರಣೆ ಮಾಡಲು ಮತ್ತು ಅಪಘಾತಗಳನ್ನು ತಗ್ಗಿಸಿ ತೊಡಕು ಮುಕ್ತ ತರಭೇತಿ ಒದಗಿಸಲು ಅನುವಾಗುತ್ತದೆ. ಇದು ಸಂಬಂಧಿತ ಮೂಲಸೌಕರ್ಯದ ಜೊತೆಗೆ ಉಭಯಪಡೆಗಳ ಯುದ್ಧ ತರಬೇತಿ ಕೇಂದ್ರದ ಸುರಕ್ಷತೆ ಮತ್ತು ಭದ್ರತೆಯನ್ನು ಖಚಿತಪಡಿಸುತ್ತದೆ.
AKT/VB/SH