Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಝಾನ್ಸಿಯ ವಿಶ್ವ ದರ್ಜೆಯ ರೈಲು ನಿಲ್ದಾಣದಿಂದ ಝಾನ್ಸಿ ಮತ್ತು ಹತ್ತಿರದ ಪ್ರದೇಶಗಳಲ್ಲಿ ಪ್ರವಾಸೋದ್ಯಮ ಮತ್ತು ವಾಣಿಜ್ಯ ಚಟುವಟಿಕೆಗಳಿಗೆ ಉತ್ತೇಜನ: ಪ್ರಧಾನಿ ನರೇಂದ್ರ ಮೋದಿ


ಉತ್ತರ ಪ್ರದೇಶದ ಝಾನ್ಸಿಯ ವಿಶ್ವ ದರ್ಜೆಯ ರೈಲು ನಿಲ್ದಾಣದಿಂದ ಝಾನ್ಸಿ ಮತ್ತು ಹತ್ತಿರದ ಪ್ರದೇಶಗಳಲ್ಲಿ ಪ್ರವಾಸೋದ್ಯಮ ಮತ್ತು ವಾಣಿಜ್ಯ ಚಟುವಟಿಕೆಗಳು ಹೆಚ್ಚಾಗಲಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ. ಇದು ಭಾರತದಾದ್ಯಂತ ಆಧುನಿಕ ನಿಲ್ದಾಣಗಳನ್ನು ಹೊಂದುವ ಪ್ರಯತ್ನಗಳ ಅವಿಭಾಜ್ಯ ಅಂಗವಾಗಿದೆ ಎಂದು ಶ್ಲಾಘಿಸಿದ್ದಾರೆ. 

ಝಾನ್ಸಿಯ ಸಂಸತ್ ಸದಸ್ಯರಾದ ಅನುರಾಗ್ ಶರ್ಮಾ ಅವರು ಟ್ವೀಟ್‌ ಮಾಡಿ, ಝಾನ್ಸಿಯನ್ನು ವಿಶ್ವ ದರ್ಜೆಯ ರೈಲು ನಿಲ್ದಾಣವನ್ನಾಗಿ ಮಾಡಲು ಅನುಮೋದನೆ ನೀಡಿದ್ದಕ್ಕಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಧನ್ಯವಾದ ಹೇಳುತ್ತೇನೆ. ಬುಂದೇಲ್ಖಂಡ್ ನ ಜನರಿಗೆ ಇದರಿಂದ ಬಹಳ ಸಹಾಯವಾಗುತ್ತದೆ. ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಸಹ ಧನ್ಯವಾದಗಳು ಎಂದು ಬರೆದುಕೊಂಡಿದ್ದರು. 

ಝಾನ್ಸಿ ಸಂಸದರ ಟ್ವೀಟ್‌ಗೆ ಪ್ರತಿಕ್ರಿಯಿಸಿದ ಪ್ರಧಾನಿ, ಟ್ವೀಟ್ ಮಾಡಿ;

“ಭಾರತದಾದ್ಯಂತ ಆಧುನಿಕ ನಿಲ್ದಾಣಗಳನ್ನು ಹೊಂದುವ ನಮ್ಮ ಪ್ರಯತ್ನಗಳ ಅವಿಭಾಜ್ಯ ಅಂಗ ಝಾನ್ಸಿಯ ರೈಲು ನಿಲ್ದಾಣವಾಗಿದೆ. ಇದು ಝಾನ್ಸಿ ಮತ್ತು ಹತ್ತಿರದ ಪ್ರದೇಶಗಳಲ್ಲಿ ಪ್ರವಾಸೋದ್ಯಮ ಮತ್ತು ವಾಣಿಜ್ಯ ಚಟುವಟಿಕೆ ಅಭಿವೃದ್ಧಿಯಾಗಲು ಸಹಾಯವಾಗುತ್ತದೆ” ಎಂದಿದ್ದಾರೆ.

 

*****