ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮತ್ತು ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಅವರು ಭಾರತ-ಬಾಂಗ್ಲಾದೇಶ ನಡುವಿನ ಪೈಪ್ಲೈನ್ ಅನ್ನು 18 ಮಾರ್ಚ್ 2023 ರಂದು ಭಾರತೀಯ ಕಾಲಮಾನ ಐದು ಗಂಟೆಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಲಿದ್ದಾರೆ.
ಇದು ಭಾರತ ಮತ್ತು ಬಾಂಗ್ಲಾದೇಶದ ನಡುವಿನ ಗಡಿಯಾಚೆಗಿನ ಮೊದಲ ಇಂಧನ ಪೈಪ್ಲೈನ್ ಆಗಿದೆ, ಇದನ್ನು 377 ಕೋಟಿ ರೂಪಾಯಿ ಅಂದಾಜು ವೆಚ್ಚದಲ್ಲಿ ನಿರ್ಮಿಸಲಾಗಿದೆ, ಇದರಲ್ಲಿ ಪೈಪ್ಲೈನಿನ ಬಾಂಗ್ಲಾದೇಶ ಭಾಗವನ್ನು 285 ಕೋಟಿ ರೂಪಾಯಿ ಅಂದಾಜು ವೆಚ್ಚದಲ್ಲಿ ನಿರ್ಮಿಸಲಾಗಿದೆ. ಅನುದಾನ ಸಹಾಯದ ಅಡಿಯಲ್ಲಿ ಭಾರತ ಇದನ್ನು ಭರಿಸಿದೆ.
ಪೈಪ್ಲೈನ್ ಪ್ರತಿ ವರ್ಷಕ್ಕೆ 1 ಮಿಲಿಯನ್ ಮೆಟ್ರಿಕ್ ಟನ್ (MMTPA) ಹೈ-ಸ್ಪೀಡ್ ಡೀಸೆಲ್ (HSD) ಅನ್ನು ಸಾಗಿಸುವ ಸಾಮರ್ಥ್ಯವನ್ನು ಹೊಂದಿದೆ. ಆರಂಭದಲ್ಲಿ ಉತ್ತರ ಬಾಂಗ್ಲಾದೇಶದ ಏಳು ಜಿಲ್ಲೆಗಳಿಗೆ ಹೈಸ್ಪೀಡ್ ಡೀಸೆಲ್ ಅನ್ನು ಪೂರೈಸಲಾಗುತ್ತದೆ.
ಈ ಸ್ನೇಹ ಪೈಪ್ಲೈನ್ ಕಾರ್ಯಾಚರಣೆಯು ಭಾರತದಿಂದ ಬಾಂಗ್ಲಾದೇಶಕ್ಕೆ ಹೈ-ಸ್ಪೀಡ್ ಡೀಸೆಲ್ ಸಾಗಿಸುವ ಸುಸ್ಥಿರ, ವಿಶ್ವಾಸಾರ್ಹ, ವೆಚ್ಚ- ಪರಿಣಾಮಕಾರಿತ್ವ ಮತ್ತು ಪರಿಸರ ಸ್ನೇಹಿ ವಿಧಾನವನ್ನು ಅಳವಡಿಸಲು ಸಹಕಾರಿಯಾಗಿದೆ.
ಈ ಪೈಪ್ನಲೈನ್ ನಿಂದ ಭಾರತ ಮತ್ತು ಬಾಂಗ್ಲಾದೇಶ ನಡುವಿನ ನಡುವಿನ ಇಂಧನ ಭದ್ರತೆ ಕ್ಷೇತ್ರದಲ್ಲಿ ಇನ್ನಷ್ಟು ಸಹಕಾರ ಸಂಬಂಧ ಹೆಚ್ಚಳ ನೆರವಾಗುತ್ತದೆ.
****