Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ರೈತ ಸಹೋದರ ಸಹೋದರಿಯರ ಕಲ್ಯಾಣಕ್ಕಾಗಿ ಸರ್ಕಾರ ಸಾಧ್ಯವಾಗುವ ಎಲ್ಲಾ ರೀತಿಯಲ್ಲಿ ಪ್ರಯತ್ನ ನಡೆಸುತ್ತದೆ: ಪ್ರಧಾನ ಮಂತ್ರಿ ನರೇಂದ್ರ ಮೋದಿ 


ಸರ್ಕಾರದ ನೀತಿಗಳಿಂದಾಗಿ ಸಕ್ಕರೆ ಉದ್ಯಮದಲ್ಲಿ ಸ್ವಾವಲಂಬನೆ ಉಂಟಾಗುತ್ತಿರುವುದರ ಬಗ್ಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸಂತಸ ವ್ಯಕ್ತಪಡಿಸಿದ್ದಾರೆ.

ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವ ಶ್ರೀ ನರೇಂದ್ರ ಸಿಂಗ್ ತೋಮರ್ ಅವರ ಟ್ವೀಟ್‌ಗೆ ಪ್ರತಿಕ್ರಿಯಿಸಿದ ಪ್ರಧಾನಮಂತ್ರಿ ಅವರು ಟ್ವೀಟ್ ಮಾಡಿ;

”ರೈತ ಬಂಧು-ಬಳಗದವರ ಜೀವನದಲ್ಲಿ ಖುಷಿಯ ಮಾಧುರ್ಯ ಹೀಗೆ ಕರಗುತ್ತಲೇ ಇರಲಿ, ಅವರ ಬದುಕು ಬಂಗಾರವಾಗಲಿ ಎಂಬುದು ನನ್ನ ಹಾರೈಕೆ. ರೈತರ ಕಲ್ಯಾಣಕ್ಕಾಗಿ ನಾವು ಎಲ್ಲಾ ರೀತಿಯಲ್ಲಿ ಪ್ರಯತ್ನಗಳು ನಡೆಸಲು ಮುಂದಾಗುತ್ತೇವೆ” ಎಂದು ಬರೆದುಕೊಂಡಿದ್ದಾರೆ.

 

***