ಇದೇ ಮೊದಲ ಬಾರಿಗೆ ದೆಹಲಿಯ ಹೊರಗೆ ‘ರೈಸಿಂಗ್ ಡೇ’ ಆಯೋಜಿಸಿದ್ದಕ್ಕಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಕೇಂದ್ರ ಕೈಗಾರಿಕಾ ಭದ್ರತಾ ಪಡೆ-CISFನ್ನು ಶ್ಲಾಘಿಸಿದ್ದಾರೆ.
ಕೇಂದ್ರ ಗೃಹ ಸಚಿವ ಶ್ರೀ ಅಮಿತ್ ಶಾ ಅವರ ಟ್ವೀಟ್ ನ್ನು ಹಂಚಿಕೊಂಡ ಪ್ರಧಾನಮಂತ್ರಿಯವರು ಟ್ವೀಟ್ ಮಾಡಿ;
“ಇದೇ ಮೊದಲ ಬಾರಿಗೆ ದೆಹಲಿಯ ಹೊರಗೆ ತಮ್ಮ ರೈಸಿಂಗ್ ಡೇ ಪರೇಡ್ ನ್ನು ಆಯೋಜಿಸಿದ್ದಕ್ಕಾಗಿ ನಾನು ಕೇಂದ್ರ ಕೈಗಾರಿಕಾ ಭದ್ರತಾ ಪಡೆ(CISF)ಯನ್ನು ಶ್ಲಾಘಿಸುತ್ತೇನೆ. ಇಂತಹ ನಿರ್ಧಾರಗಳು ಸಹಭಾಗಿತ್ವದ ಆಡಳಿತದ ಉತ್ಸಾಹವನ್ನು ಹೆಚ್ಚಿಸುತ್ತವೆ ಎಂದು ತಿಳಿಸಿದ್ದಾರೆ.
***
I laud the @CISFHQrs for organising their Raising Day parade outside Delhi for the first time. Such decisions increase the spirit of participative governance. https://t.co/JsTteauOQJ
— Narendra Modi (@narendramodi) March 13, 2023