Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಬೆಂಗಳೂರು- ಮೈಸೂರು ಎಕ್ಸ್‌ಪ್ರೆಸ್‌ ವೇ ಮಾಗವು ಕರ್ನಾಟಕದ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡಲಿದೆ: ಪ್ರಧಾನ ಮಂತ್ರಿಗಳು


ಬೆಂಗಳೂರು- ಮೈಸೂರು ಎಕ್ಸ್ ಪ್ರೆಸ್ ವೇ ಮಾರ್ಗವು ಕರ್ನಾಟಕದ ಅಭಿವೃದ್ಧಿಗೆ ಮಹತ್ತರ ಕೊಡುಗೆ ನೀಡಲಿದೆ ಎಂದು ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಬಣ್ಣಿಸಿದ್ದಾರೆ.

ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ಶ್ರೀ ನಿತಿನ್ ಗಡ್ಕರಿ ಅವರ ಟ್ವೀಟ್‌ಗೆ ಪ್ರಧಾನ ಮಂತ್ರಿಯವರು ಈ ರೀತಿ  ಪ್ರತಿಕ್ರಿಯಿಸಿದ್ದಾರೆ. “ಬೆಂಗಳೂರು- ಮೈಸೂರು ಎಕ್ಸ್‌ಪ್ರೆಸ್ ವೇ ನಿರ್ಮಾಣ ಯೋಜನೆಯು ಶ್ರೀರಂಗಪಟ್ಟಣ, ಕೊಡಗು, ಊಟಿ ಮತ್ತು ಕೇರಳದಂತಹ ಪ್ರದೇಶಗಳಿಗೆ ಸಂಪರ್ಕವನ್ನು ಇನ್ನಷ್ಟು ಸುಧಾರಿಸುವ ಜತೆಗೆ ಆ ಭಾಗದ  ಪ್ರವಾಸೋದ್ಯಮ ಸಾಮರ್ಥ್ಯದ ವ್ಯಾಪ್ತಿಯನ್ನು ಇನ್ನಷ್ಟು ಹೆಚ್ಚಿಸುತ್ತದೆʼʼ ಎಂಬುದಾಗಿ ಶ್ರೀ ನಿತಿನ್‌ ಗಡ್ಕರಿ ಅವರು ಟ್ವೀಟ್‌ನಲ್ಲಿ ಮಾಡಿದ್ದರು.

ಹಾಗೆಯೇ ಈ ಯೋಜನೆಯು ರಾಷ್ಟ್ರೀಯ ಹೆದ್ದಾರಿ- 275 ರ ಒಂದು ಭಾಗವನ್ನು ಒಳಗೊಂಡಿದ್ದು, ನಾಲ್ಕು ರೈಲ್ವೆ ಮೇಲುಸೇತುವೆಗಳು, 9 ಮಹತ್ವದ ಸೇತುವೆಗಳು, 40 ಸಣ್ಣ ಸೇತುವೆಗಳು ಮತ್ತು 89 ಅಂಡರ್ ಪಾಸ್‌/ ಓವರ್‌ ಪಾಸ್‌ಗಳ ಅಭಿವೃದ್ಧಿಯನ್ನು ಸಹ ಒಳಗೊಂಡಿದೆಎಂದು ಕೇಂದ್ರ ಸಚಿವರು ಮಾಹಿತಿ ಹಂಚಿಕೊಂಡಿದ್ದರು.

ಇದಕ್ಕೆ ಸ್ಪಂದಿಸಿ ಟ್ವೀಟ್‌ ಮಾಡಿರುವ ಪ್ರಧಾನ ಮಂತ್ರಿಗಳು,

“ಒಂದು ಮಹತ್ವದ ಸುಗಮ ಸಂಪರ್ಕ ಯೋಜನೆಯು ಕರ್ನಾಟಕದ ಪ್ರಗತಿಗೆ ಮಹತ್ವದ ಕೊಡುಗೆ ನೀಡಲಿದೆ,ʼʼ ಎಂದು ಹೇಳಿದ್ದಾರೆ.

***