Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಜನವರಿ 28ರಂದು ಕಾರಿಯಪ್ಪ ಮೈದಾನದಲ್ಲಿ ಎನ್ ಸಿಸಿ ಪಿಎಂ  ರ್‍ಯಾಲಿ ಯನ್ನುದ್ದೇಶಿಸಿ ಭಾಷಣ ಮಾಡಲಿರುವ ಪ್ರಧಾನಮಂತ್ರಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2023 ರ ಜನವರಿ 28 ರಂದು ಸಂಜೆ 5:45 ಕ್ಕೆ ದೆಹಲಿಯ ಕಾರಿಯಪ್ಪ ಪೆರೇಡ್ ಮೈದಾನದಲ್ಲಿ ವಾರ್ಷಿಕ ಎನ್ ಸಿಸಿ ಪಿಎಂ ರ್‍ಯಾಲಿಯನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ.

ಈ ವರ್ಷ, ಎನ್ ಸಿಸಿ ತನ್ನ ಪ್ರಾರಂಭದ 75 ನೇ ವರ್ಷವನ್ನು ಆಚರಿಸುತ್ತಿದೆ. ಈ ಸಂದರ್ಭದಲ್ಲಿ ಪ್ರಧಾನ ಮಂತ್ರಿ ಅವರು ಎನ್ ಸಿಸಿಯ 75 ಯಶಸ್ವಿ ವರ್ಷಗಳ ಸ್ಮರಣಾರ್ಥ ವಿಶೇಷ ದಿನದ ಮುಖಪುಟ ಮತ್ತು 75 ರೂಪಾಯಿಗಳ ಸ್ಮರಣಾರ್ಥ ವಿಶೇಷವಾಗಿ ಮುದ್ರಿಸಲಾದ ನಾಣ್ಯವನ್ನು ಬಿಡುಗಡೆ ಮಾಡಲಿದ್ದಾರೆ.

ರ್‍ಯಾಲಿಯು ಹಗಲು- ರಾತ್ರಿ ಕಾರ್ಯಕ್ರಮವಾಗಿ ನಡೆಯಲಿದ್ದು, ‘ಏಕ್ ಭಾರತ್ ಶ್ರೇಷ್ಠ ಭಾರತ್ ‘ ಎಂಬ ವಿಷಯದ ಮೇಲೆ ಸಾಂಸ್ಕೃತಿಕ ಕಾರ್ಯಕ್ರಮವನ್ನೂ ಒಳಗೊಂಡಿದೆ. ವಸುದೈವ ಕುಟುಂಬಕಂನ ನಿಜವಾದ ಭಾರತೀಯ ಉತ್ಸಾಹದಲ್ಲಿ, 19 ವಿದೇಶಗಳಿಂದ 196 ಅಧಿಕಾರಿಗಳು ಮತ್ತು ಕೆಡೆಟ್ ಗಳನ್ನು ಸಂಭ್ರಮದ ಭಾಗವಾಗಲು ಆಹ್ವಾನಿಸಲಾಗಿದೆ.

*****