Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಜಾಗತಿಕ ದಕ್ಷಿಣ ಶೃಂಗಸಭೆಯ ಧ್ವನಿ 2023ರ ನಾಯಕರ ಉದ್ಘಾಟನಾ ಅಧಿವೇಶನ ಉದ್ದೇಶಿಸಿ ಪ್ರಧಾನ ಮಂತ್ರಿ ಅವರಿಂದ ಸಮಾರೋಪ ಭಾಷಣ


ಗಣ್ಯರೆ,

ನಿಮ್ಮ ಒಳನೋಟವುಳ್ಳ ಭಾಷಣಕ್ಕಾಗಿ ನಾನು ನಿಮಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ. ನಿಮ್ಮ ಅವಲೋಕನಗಳು ಮೊದಲ ‘ವಾಯ್ಸ್ ಆಫ್ ಗ್ಲೋಬಲ್ ಸೌತ್ ಸಮ್ಮಿಟ್’ ನ ಮುಂದಿನ 8 ಅಧಿವೇಶನ(ಅವಧಿ)ಗಳಿಗೆ ಮಾರ್ಗದರ್ಶನ ನೀಡುತ್ತವೆ. ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಮಾನವ ಕೇಂದ್ರಿತ ಅಭಿವೃದ್ಧಿಯು ಪ್ರಮುಖ ಆದ್ಯತೆಯಾಗಿದೆ ಎಂಬುದು ನಿಮ್ಮ ಮಾತುಗಳಿಂದ ಸ್ಪಷ್ಟವಾಗಿದೆ. ಇಂದಿನ ನಿಮ್ಮೆಲ್ಲರ ಅಭಿಪ್ರಾಯಗಳು ನಮ್ಮೆಲ್ಲರ ಮನಸ್ಸಿನ ಮೇಲಿರುವ ಸಾಮಾನ್ಯ ಸವಾಲುಗಳನ್ನೂ ಹೊರತಂದಿವೆ. ಇವು ಮುಖ್ಯವಾಗಿ ನಮ್ಮ ಅಭಿವೃದ್ಧಿಯ ಅಗತ್ಯಗಳಿಗಾಗಿ ಸಂಪನ್ಮೂಲಗಳ ಕೊರತೆ ಮತ್ತು ನೈಸರ್ಗಿಕ ಹವಾಮಾನ ಮತ್ತು ಭೌಗೋಳಿಕ ರಾಜಕೀಯ ವಾತಾವರಣದಲ್ಲಿ ಅಸ್ಥಿರತೆ ಹೆಚ್ಚಿಸುತ್ತವೆ. ಇದರ ಹೊರತಾಗಿಯೂ, ಅಭಿವೃದ್ಧಿಶೀಲ ರಾಷ್ಟ್ರಗಳು ಸಕಾರಾತ್ಮಕ ಶಕ್ತಿಯಿಂದ ತುಂಬಿವೆ, ನಾವೆಲ್ಲಾ ಆತ್ಮವಿಶ್ವಾಸದಿಂದ ಕೂಡಿದ್ದೇವೆ ಎಂಬುದು ಸ್ಪಷ್ಟವಾಗಿದೆ.

20ನೇ ಶತಮಾನದಲ್ಲಿ, ಅಭಿವೃದ್ಧಿ ಹೊಂದಿದ ದೇಶಗಳು ಜಾಗತಿಕ ಆರ್ಥಿಕತೆಯ ಚಾಲನಾಶಕ್ತಿಯಾಗಿದ್ದವು. ಇಂದು, ಈ ಮುಂದುವರಿದ ಆರ್ಥಿಕತೆಗಳಲ್ಲಿ ಹೆಚ್ಚಿನವು ಮಂದಗತಿಯಲ್ಲಿವೆ. ಸ್ಪಷ್ಟವಾಗಿ, 21ನೇ ಶತಮಾನದಲ್ಲಿ, ಜಾಗತಿಕ ಬೆಳವಣಿಗೆಯು ದಕ್ಷಿಣಭಾಗದ ದೇಶಗಳಿಂದ ಬರುತ್ತಿದೆ. ನಾವು ಒಟ್ಟಾಗಿ ಸೇರಿ ಕೆಲಸ ಮಾಡಿದರೆ, ನಾವು ಜಾಗತಿಕ ಕಾರ್ಯಸೂಚಿಯನ್ನು ಹೊಂದಿಸಬಹುದು ಎಂದು ನಾನು ಭಾವಿಸುತ್ತೇನೆ. ಇಂದು ಮತ್ತು ನಾಳೆ ಮುಂಬರುವ ಅಧಿವೇಶನಗಳಲ್ಲಿ, ನಾವು ಇಂದು ನಮ್ಮ ಚರ್ಚೆಗಳಿಂದ ಹೊರಹೊಮ್ಮಿದ ಮೌಲ್ಯಯುತವಾದ ವಿಚಾರಗಳನ್ನು ಮತ್ತು ಪರಿಕಲ್ಪನೆಗಳನ್ನು ಮತ್ತಷ್ಟು ಹೆಚ್ಚಿಸುತ್ತೇವೆ ಮತ್ತು ಅಭಿವೃದ್ಧಿಪಡಿಸುತ್ತೇವೆ. ಜಾಗತಿಕ ದಕ್ಷಿಣ ದೇಶಗಳಿಗಾಗಿ ಕ್ರಿಯಾಂಶಗಳನ್ನು ಅನುಷ್ಠಾನಕ್ಕೆ ತರುವುದು ಅಥವಾ ಭಟ್ಟಿ ಇಳಿಸುವುದು ನಮ್ಮ ಪ್ರಯತ್ನವಾಗಿದೆ. ನಾವೆಲ್ಲಾ ಒಟ್ಟಾಗಿ ಸೇರಿ ಏನು ಮಾಡಬಹುದು ಅಂದರೆ ನಾವೆಲ್ಲಾ ಒಟ್ಟಿಗೆ ಸೇರಿ ಜಾಗತಿಕ ಕಾರ್ಯಸೂಚಿ ಹುಡುಕಬಹುದು. ವಾಯ್ಸ್ ಆಫ್ ದಿ ಗ್ಲೋಬಲ್ ಸೌತ್ ಗೆ ತನ್ನದೇ ಆದ ಧ್ವನಿ ಮತ್ತು ಕಾರ್ಯಸೂಚಿ ಹೊಂದಿಸುವ ಅಗತ್ಯವಿದೆ. ಒಟ್ಟಾಗಿ, ನಾವು ಮಾಡದ ವ್ಯವಸ್ಥೆಗಳು ಮತ್ತು ಸಂದರ್ಭ ಸನ್ನಿವೇಶಗಳಗಳ ಮೇಲಿನ ಅವಲಂಬನೆಯ ಆವರ್ತನದಿಂದ ನಾವು ಹೊರಬರುವ ಅಗತ್ಯವಿದೆ. 

ನಿಮ್ಮೆಲ್ಲರ ಮೌಲ್ಯಯುತ ಸಮಯ, ಉಪಸ್ಥಿತಿ ಮತ್ತು ಅಮೂಲ್ಯವಾದ ಸಲಹೆ ಸೂಚನೆಗಳಿಗಾಗಿ ನಾನು ಮತ್ತೊಮ್ಮೆ ಧನ್ಯವಾದಗಳನ್ನು ಅರ್ಪಿಸುತ್ತೇನೆ.

ಎಲ್ಲರಿಗೂ ಧನ್ಯವಾದಗಳು.

****