ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2023 ರ ಜನವರಿ 6 ಮತ್ತು 7 ರಂದು ದೆಹಲಿಯಲ್ಲಿ ನಡೆಯಲಿರುವ ಮುಖ್ಯ ಕಾರ್ಯದರ್ಶಿಗಳ ಎರಡನೇ ರಾಷ್ಟ್ರೀಯ ಸಮ್ಮೇಳನದ ಅಧ್ಯಕ್ಷತೆ ವಹಿಸಲಿದ್ದಾರೆ. ಇದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವಿನ ಪಾಲುದಾರಿಕೆಯನ್ನು ಮತ್ತಷ್ಟು ಹೆಚ್ಚಿಸುವ ನಿಟ್ಟಿನಲ್ಲಿ ಮತ್ತೊಂದು ಪ್ರಮುಖ ಹೆಜ್ಜೆಯಾಗಿದೆ. 2022 ರ ಜೂನ್ ನಲ್ಲಿ ಧರ್ಮಶಾಲಾದಲ್ಲಿ ಇಂತಹ ಮೊದಲ ಮುಖ್ಯ ಕಾರ್ಯದರ್ಶಿಗಳ ಸಮಾವೇಶ ನಡೆದಿತ್ತು.
ಈ ವರ್ಷ, ಮುಖ್ಯ ಕಾರ್ಯದರ್ಶಿಗಳ ರಾಷ್ಟ್ರೀಯ ಸಮ್ಮೇಳನ 2023 ರ ಜನವರಿ 5 ರಿಂದ 7 ರವರೆಗೆ ದೆಹಲಿಯಲ್ಲಿ ನಡೆಯಲಿದೆ. ಮೂರು ದಿನಗಳ ಈ ಸಮ್ಮೇಳನ ರಾಜ್ಯಗಳ ಸಹಭಾಗಿತ್ವದಲ್ಲಿ ತ್ವರಿತ ಮತ್ತು ಸುಸ್ಥಿರ ಆರ್ಥಿಕ ಬೆಳವಣಿಗೆಯನ್ನು ಸಾಧಿಸುವತ್ತ ಗಮನ ಹರಿಸಲಿದೆ. ಕೇಂದ್ರ ಸರ್ಕಾರದ ಪ್ರತಿನಿಧಿಗಳು, ಮುಖ್ಯ ಕಾರ್ಯದರ್ಶಿಗಳು ಮತ್ತು ಎಲ್ಲಾ ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳ ಇತರ ಹಿರಿಯ ಅಧಿಕಾರಿಗಳು ಮತ್ತು ಕ್ಷೇತ್ರದ ತಜ್ಞರನ್ನು ಒಳಗೊಂಡ 200 ಕ್ಕೂ ಹೆಚ್ಚು ಜನರು ಇದರಲ್ಲಿ ಭಾಗವಹಿಸಲಿದ್ದಾರೆ. ಈ ಸಮಾವೇಶವು ಬೆಳವಣಿಗೆ ಮತ್ತು ಉದ್ಯೋಗ ಸೃಷ್ಟಿ ಮತ್ತು ಅಂತರ್ಗತ ಮಾನವ ಅಭಿವೃದ್ಧಿಗೆ ಒತ್ತು ನೀಡುವ ಮೂಲಕ ವಿಕ್ಸಿತ್ ಭಾರತವನ್ನು ಸಾಧಿಸಲು ಸಹಯೋಗದ ಕ್ರಮಕ್ಕೆ ಅಡಿಪಾಯ ಹಾಕಲಿದೆ.
ನೋಡಲ್ ಸಚಿವಾಲಯಗಳು, ನೀತಿ ಆಯೋಗ, ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳು ಮತ್ತು ಕ್ಷೇತ್ರ ತಜ್ಞರ ನಡುವೆ ಕಳೆದ ಮೂರು ತಿಂಗಳಲ್ಲಿ 150 ಕ್ಕೂ ಹೆಚ್ಚು ಭೌತಿಕ ಮತ್ತು ವರ್ಚುವಲ್ ಸಮಾಲೋಚನಾ ಸಭೆಗಳಲ್ಲಿ ವ್ಯಾಪಕ ಚರ್ಚೆಗಳ ನಂತರ ಸಮ್ಮೇಳನದ ಕಾರ್ಯಸೂಚಿಯನ್ನು ನಿರ್ಧರಿಸಲಾಗಿದೆ. ಸಮ್ಮೇಳನದ ಸಮಯದಲ್ಲಿ ಚರ್ಚೆಯು ಗುರುತಿಸಲಾದ ಆರು ವಿಷಯಗಳ ಮೇಲೆ ನಡೆಯಲಿದೆ, ಅವುಗಳೆಂದರೆ (i) ಎಂಎಸ್ಎಂಇ ಗಳ ಮೇಲೆ ಒತ್ತು; (ii) ಮೂಲಸೌಕರ್ಯ ಮತ್ತು ಹೂಡಿಕೆಗಳು; (iii) ಅನುಸರಣೆಗಳನ್ನು ಕಡಿಮೆ ಮಾಡುವುದು; (iv) ಮಹಿಳಾ ಸಬಲೀಕರಣ; (v) ಆರೋಗ್ಯ ಮತ್ತು ಪೋಷಣೆ; (vi) ಕೌಶಲ್ಯ ಅಭಿವೃದ್ಧಿ.
(1) ವಿಕ್ಸಿತ್ ಭಾರತ್: ರೀಚಿಂಗ್ ದಿ ಲಾಸ್ಟ್ ಮೈಲ್ (ಪ್ರಕ್ರಿಯೆಯ ಕೊನೆಯ ಹಂತ) ಕುರಿತು ಮೂರು ವಿಶೇಷ ಗೋಷ್ಠಿಗಳು ನಡೆಯಲಿವೆ. (ii) ಸರಕು ಮತ್ತು ಸೇವಾ ತೆರಿಗೆ (ಜಿಎಸ್ ಟಿ) ಯ ಐದು ವರ್ಷಗಳು – ಕಲಿಕೆಗಳು ಮತ್ತು ಅನುಭವಗಳು; ಮತ್ತು (iii) ಜಾಗತಿಕ ಭೌಗೋಳಿಕ ರಾಜಕೀಯ ಸವಾಲುಗಳು ಮತ್ತು ಭಾರತದ ಪ್ರತಿಕ್ರಿಯೆ.
ಇದಲ್ಲದೆ, ನಾಲ್ಕು ವಿಷಯಗಳ ಮೇಲೆ ಕೇಂದ್ರೀಕೃತ ಚರ್ಚೆಗಳು ನಡೆಯುತ್ತವೆ, ಅವುಗಳೆಂದರೆ (i) ವೋಕಲ್ ಫಾರ್ ಲೋಕಲ್; (ii) ಅಂತಾರಾಷ್ಟ್ರೀಯ ಸಿರಿಧಾನ್ಯಗಳ ವರ್ಷ; (iii) ಜಿ 20: ರಾಜ್ಯಗಳ ಪಾತ್ರ; ಮತ್ತು (iv) ಉದಯೋನ್ಮುಖ ತಂತ್ರಜ್ಞಾನಗಳು.
ಪ್ರತಿಯೊಂದು ವಿಷಯದ ಅಡಿಯಲ್ಲಿ ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳ ಉತ್ತಮ ಅಭ್ಯಾಸಗಳನ್ನು ಸಹ ಸಮ್ಮೇಳನದಲ್ಲಿ ಪ್ರಸ್ತುತಪಡಿಸಲಾಗುವುದು, ಇದರಿಂದ ರಾಜ್ಯಗಳು ಪರಸ್ಪರ ಕಲಿಯುತ್ತವೆ.
ಪ್ರಧಾನ ಮಂತ್ರಿ ಅವರ ನಿರ್ದೇಶನದಂತೆ, (i) ಜಿಲ್ಲೆಗಳು ಅಭಿವೃದ್ಧಿಯ ಪೂರ್ಣಪ್ರಮಾಣ (ii) ವೃತ್ತಾಕಾರದ ಅರ್ಥವ್ಯವಸ್ಥೆಯೆಂಬ ವಿಷಯಗಳ ಕುರಿತು ಮುಖ್ಯ ಸಮ್ಮೇಳನಕ್ಕೆ ಮೊದಲು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳೊಂದಿಗೆ ಮೂರು ವರ್ಚುವಲ್ ಸಮಾವೇಶಗಳನ್ನು ಸಹ ನಡೆಸಲಾಗಿದೆ; (3) ಮಾದರಿ ಕೇಂದ್ರಾಡಳಿತ ಪ್ರದೇಶಗಳು. ಈ ವರ್ಚುವಲ್ ಸಮ್ಮೇಳನಗಳ ಫಲಿತಾಂಶಗಳನ್ನು ಮುಖ್ಯ ಕಾರ್ಯದರ್ಶಿಗಳ ರಾಷ್ಟ್ರೀಯ ಸಮ್ಮೇಳನದಲ್ಲಿ ಮಂಡಿಸಲಾಗುವುದು.
*****